ನಾಡಪ್ರಭು ಕೆಂಪೇಗೌಡರ ಕುರಿತು ಸಂಶೋಧನೆ ಆಗಲಿ

27 tnp photo 01
Published on

ತಿ.ನರಸೀಪುರ: ನಾಡಪ್ರಭು ಕೆಂಪೇಗೌಡರ ಬಗ್ಗೆ ಹೆಚ್ಚಿನ ಸಂಶೋಧನೆಗಳಾಗಬೇಕು. ಅವರ ಪುಣ್ಯಭೂಮಿ ಅಭಿವೃದ್ಧಿಯಾಗಬೇಕು ಎಂದು ಹಿರಿಯ ಮುಖಂಡ ಪಿ.ಸ್ವಾಮಿನಾಥ್‌ಗೌಡ ಹೇಳಿದರು.

ತಾಲೂಕು ಕಚೇರಿಯಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಸರಳವಾಗಿ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡರ 510ನೇ ಜಯಂತಿ ಆಚರಣಾ ಕಾರ್ಯಕ್ರಮದಲ್ಲಿ ಕೆಂಪೇಗೌಡರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಅವರು ಮಾತನಾಡಿದರು.

ಬೆಂಗಳೂರಿನಲ್ಲಿ ಕೆರೆ-ಕಟ್ಟೆ ಹಾಗೂ ಪೇಟೆ ಬೀದಿಗಳನ್ನು ನಿರ್ಮಿಸಿ ವ್ಯಾಪಾರಿಗಳಿಗೆ ಅನುಕೂಲ ಮಾಡಿಕೊಟ್ಟ ಕೆಂಪೇಗೌಡರ ಸಮಾಧಿ ಹಾಗೂ ಅವರು ಕಟ್ಟಿಸಿದ ದೇವಾಲಯಗಳನ್ನು ಅಭಿವೃದ್ಧಿಪಡಿಸಬೇಕಿದೆ. ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರದ ಕೆಳಗೆ ಅವರ ಬಗ್ಗೆ ಸಂಶೋಧನೆಗಳು ನಿರಂತರವಾಗಿ ನಡೆಯಬೇಕಿದೆ ಎಂದು ಹೇಳಿದರು.

ತಹಸೀಲ್ದಾರ್ ಡಿ.ನಾಗೇಶ್, ಶಿರಸ್ತೇದಾರ್ ಪ್ರಭುರಾಜ್, ಲೋಕೋಪಯೋಗಿ ಎಇಇ ಶಿವರಾಜ್, ಮುಖಂಡರಾದ ಬನ್ನೂರು ರಾಮಸ್ವಾಮಿ, ತಿರುಮಕೂಡಲು ವೆಂಕಟೇಶ್, ಸುನೀಲ್‌ಗೌಡ, ರಾಮು, ಲಕ್ಷ್ಮಣ್, ಸಂದೇಶ್, ಚೇತನ್‌ಕುಮಾರ್, ಮಂಜು, ಫಣೀಶ್‌ಕುಮಾರ್, ಸೋಮಣ್ಣ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net