ದ್ಯಾಂಪೂರದಲ್ಲಿ ಗ್ರಾಪಂ ರಚನೆ ಮಾಡಲಿ

Published on

ಕುಕನೂರು: ತಾಲೂಕಿನ ದ್ಯಾಂಪೂರ ಗ್ರಾಮಕ್ಕೆ ಪ್ರತ್ಯೇಕ ಗ್ರಾಮ ಪಂಚಾಯಿತಿ ರಚನೆ ಮಾಡಲು ಒತ್ತಾಯಿಸಿ ಗ್ರಾಮಸ್ಥರು ಪಟ್ಟಣದ ಉಪತಹಸೀಲ್ದಾರ್ ಮುರಳಿಧರರಾವ್ ಕುಲಕರ್ಣಿಗೆ ಮಂಗಳವಾರ ಮನವಿ ಸಲ್ಲಿಸಿದರು.

ದ್ಯಾಂಪೂರ ಗ್ರಾಮವು ಮೊದಲು ಮಂಡಲ ಪಂಚಾಯಿತಿಯಾಗಿತ್ತು. ಈ ಗ್ರಾಮಕ್ಕೆ ಚನ್ನಪನಹಳ್ಳಿ, ಹರಿಶಂಕರಬಂಡಿ, ಕೊನಾಪೂರ ಗ್ರಾಮಗಳು ಸೇರಿದ್ದವು. ನಂತರ ರಾಜೂರ ಗ್ರಾಪಂ ವ್ಯಾಪ್ತಿಗೆ ಸೇರಿತು. ಗ್ರಾಪಂ ರಚನೆಗೆ ಬೇಕಾದ ಎಲ್ಲ ಅರ್ಹತೆಯನ್ನು ದ್ಯಾಂಪೂರ ಗ್ರಾಮಕ್ಕೆ ಇದೆ.

ಇಲ್ಲಿನ ಎಲ್ಲ ಏರಿಯಾಗಳ ಪೈಕಿ 4250 ಕ್ಕಿಂತ ಹೆಚ್ಚು ಜನಸಂಖ್ಯೆ ಇದೆ. ಕಲಿಯುವ ಮಕ್ಕಳಿಗೆ ಗ್ರಾಮೀಣ ಸೌಲಭ್ಯ ದೊರೆಯುತ್ತದೆ. ಅಲ್ಲದೇ ಕುಕನೂರು ಪಟ್ಟಣ ಪಂಚಾಯಿತಿಗೆ ದ್ಯಾಂಪೂರ ಗ್ರಾಮ ಸೇರ್ಪಡೆಗೆ ವಿರೋಧವಿದೆ. ದಿನದಿಂದ ದಿನಕ್ಕೆ ಗ್ರಾಮ ಬೆಳೆಯುತ್ತಿದೆ.

ಚನ್ನಪ್ಪನಹಳ್ಳಿ, ಹರಿಶಂಕರ ಬಂಡಿ ಗ್ರಾಮಸ್ಥರು ದ್ಯಾಂಪೂರ ಗ್ರಾಮಕ್ಕೆ ಸೇರಲು ಸಂಪೂರ್ಣ ಒಪ್ಪಿಗೆ ನೀಡಿದ್ದಾರೆ. ಹಳೇ ದ್ಯಾಂಪೂರ, ಮಂಜುನಾಥ ನಗರ, ಶಾಂತಿ ನಗರ, ಮಾರುತಿ ನಗರ, ಕನಕ ನಗರ, ಎಂಎಸ್‌ಎಂ ನಗರ, ಭಗೀರಥ ನಗರ, ಅಂದಪ್ಪ ಸೋಂಪೂರ ಏರಿಯಾ, ಹನಮಂತರಾಯ ನಗರ, ಆರರಕ್ಷಕ ಬಡಾವಣೆ, ಛತ್ರಪತಿ ನಗರ ಮತ್ತು ಅಂಬಿಗರ ಚೌಡಯ್ಯ ಸರ್ಕಲ್ ಹತ್ತಿರದ ಏರಿಯಾ, ಚನ್ನಪನಹಳ್ಳಿ ಗ್ರಾಮ, ಹರಿಶಂಕರ ಬಂಡಿ ಗ್ರಾಮಗಳನ್ನು ಸೇರಿಸಿಕೊಂಡು ದ್ಯಾಂಪೂರು ಗ್ರಾಮಕ್ಕೆ ಪ್ರತ್ಯೇಕ ಗ್ರಾಪಂ ನೀಡಬೇಕು ಒತ್ತಾಯಿಸಿದರು.

ಗ್ರಾಪಂ ಸದಸ್ಯರಾದ ಬಸವರಾಜ ಬಿಡಿನಾಳ, ದೇವಪ್ಪ ಮರಡಿ, ತಾಪಂ ಮಾಜಿ ಸದಸ್ಯ ಬಸವರಾಜ ಮಾಸೂರು, ಪ್ರಮುಖರಾದ ಶಿವಯ್ಯ ಶಶಿಮಠ, ಮುರಾರಿರಾವ ಜಗತಾಪ, ಸುರೇಶ ಸದರಿ, ಚಂದಾಲಿಂಗಪ್ಪ ಮಾಲಗಿತ್ತಿ, ಈಶ್ವಯ್ಯ ಶಿರೂರಮಠ, ಪ್ರೇಮರಾಜ ಮಾಲಗಿತ್ತಿ, ಶಿವಬಸಪ್ಪ ನೋಟಗಾರ, ಸುರೇಶ ಆರೇರ, ಶಿವಕುಮಾರ, ಹನುಮಂತ ಭಾವಿಮನಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net