ಜನರ ಮುಂದೆ ವರದಿ ಇಂದು; ವರ್ಚುವಲ್​ ವೇದಿಕೆಯಲ್ಲಿ ಸಮಾರಂಭ

front-2
Published on

ಬೆಂಗಳೂರು: ಸರ್ಕಾರ ರಚಿಸಿ ಒಂದು ವರ್ಷ ಕಳೆದ ಹಿನ್ನಲೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೋಮವಾರ ಜನರ ಮುಂದೆ ವರದಿ ಮಂಡಿಸಲಿದ್ದಾರೆ.

ರಾಜ್ಯ ಮಟ್ಟದ ಸರಳ ವರ್ಚುವಲ್ ಪ್ಲಾಟ್​ಫಾರಂ (ವಾಸ್ತವ ವೇದಿಕೆ) ಸಮಾರಂಭ ವಿಧಾನಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ಬೆಳಗ್ಗೆ 11 ಗಂಟೆಗೆ ನಡೆಯಲಿದ್ದು, 150 ಅಡಿ ವಿಶಾಲ ಪರದೆಯ ಮೇಲೆ ಏಕ ಕಾಲಕ್ಕೆ ಎಲ್ಲ ಜಿಲ್ಲಾ ಕೇಂದ್ರಗಳಲ್ಲೂ ಈ ಸಮಾರಂಭವನ್ನು ವೀಕ್ಷಿಸಲು ವ್ಯವಸ್ಥೆ ಮಾಡಲಾಗಿದೆ. ಸಾರ್ವಜನಿಕರು ಸಹ ಕಾರ್ಯಕ್ರಮದ ನೇರ ಪ್ರಸಾರವನ್ನು https://www.youtube.com/watch?v=T8W0Fj&yngQfeature=youtu.be ಮೂಲಕ ವೀಕ್ಷಿಸಲು ವ್ಯವಸ್ಥೆ ಮಾಡಲಾಗಿದೆ.

ಕಾರ್ಯಕ್ರಮದ ಉದ್ಘಾಟನೆ ಹಾಗೂ ಸರ್ಕಾರದ ಒಂದು ವರ್ಷದ ಕಾರ್ಯನಿರ್ವಹಣಾ ವರದಿ ಮತ್ತು ಸಾಧನೆಯ ಪುಸ್ತಕವನ್ನು ಯಡಿಯೂರಪ್ಪ ಬಿಡುಗಡೆ ಮಾಡಲಿದ್ದು, ಒಂದು ವರ್ಷದಲ್ಲಿ ತಾವೇನು ಮಾಡಿದ್ದೇವೆ? ಯಾವೆಲ್ಲ ಸವಾಲು ಎದುರಾಯಿತು? ಯಾವ ರೀತಿ ಪರಿಹಾರ ಮಾಡಿದ್ದೇವೆ? ಇದರ ನಡುವೆ ಆಗಿರುವ ಅಭಿವೃದ್ಧಿ ಕಾರ್ಯಗಳೇನು ಎಂಬ ಬಗ್ಗೆ ವಿವರಣೆ ನೀಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net