ಚಿನ್ನದ ಬೆಲೆ 2,400 ರೂ. ಏರಿಕೆ; ಹೀಗಿದೆ ವರದಿ

gold stole
Published on

ನವದೆಹಲಿ: ಆಭರಣ ತಯಾರಕರು ಮತ್ತು ದಾಸ್ತಾನುದಾರರಿಂದ ಹೆಚ್ಚಿದ ಖರೀದಿ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ಮಂಗಳವಾರ ಚಿನ್ನದ ಬೆಲೆ ಒಮ್ಮೆಲೇ 2,400 ರೂ.ನಷ್ಟು ಹೆಚ್ಚಳವಾಗಿದೆ.

ಸೋಮವಾರ 97,350 ರೂ. ಇದ್ದ ಶೇ. 99.9ರಷ್ಟು ಶುದ್ಧತೆಯ ಚಿನ್ನ ಮಂಗಳವಾರ 99,750 ರೂ.ಗೆ ಏರಿದೆ. ಶೇ. 99.5ರಷ್ಟು ಶುದ್ಧತೆಯ ಚಿನ್ನದ ಬೆಲೆ ಸೋಮವಾರ 96,900 ರೂ. ಇದ್ದದ್ದು ಮಂಗಳವಾರ 99,300 ರೂ.ಗೆ ತಲುಪಿದೆ.

ಬೆಳ್ಳಿ ದರ ಕೂಡ 1,800 ರೂ.ನಷ್ಟು ಹೆಚ್ಚಾಗಿ ಕೆಜಿಗೆ 98,500 ರೂ.ಗೆ ಮುಟ್ಟಿದೆ ಎಂದು ಅಖಿಲ ಭಾರತ ಸರಾಫ ಸಂಘ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net