ಕಾರ್ಮಿಕ ವಿರೋಧಿ ಕಾಯ್ದೆ ರದ್ದುಪಡಿಸಿ

labour day
ಶಿವಮೊಗ್ಗದ ಆಟೋ ಕಾಂಪ್ಲೆಕ್ಸ್‌ನಲ್ಲಿ ಏರ್ಪಡಿಸಿದ್ದ ಕಾರ್ಮಿಕರ ದಿನಾಚರಣೆಯಲ್ಲಿ ಆರ್.ಶಿವಾಜಿ, ಮೊಹಮ್ಮದ್‌ಕಲೀಲ್, ರಮೇಶ್ ಬಾಬು, ಪ್ರಕಾಶ್, ಸೈಯದ್ ಖಾದ್ರಿ, ಜಬ್ಬಾರ್, ಕಾರ್ತಿಕ್, ಅಸ್ಲಾಂ ಮತ್ತಿತರರು ಭಾಗವಹಿಸಿದ್ದರು.
Published on

ಶಿವಮೊಗ್ಗ: ಸರ್ಕಾರಗಳು ಕಾರ್ಮಿಕರನ್ನು ಶೋಷಣೆ ಮಾಡಬಾರದು. ಕಾರ್ಮಿಕರನ್ನು ಸಮಾಜದ ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸಬೇಕು. ಕಾರ್ಮಿಕ ವಿರೋಧಿ ಕಾಯ್ದೆಗಳನ್ನು ರದ್ದುಪಡಿಸಬೇಕು. ಕಾರ್ಮಿಕರ ಕುಟುಂಬದ ಆರೋಗ್ಯ ಸೇವೆಗೆ ಯೋಜನೆ ಜಾರಿಗೊಳಿಸಬೇಕು ಎಂದು ಕಾರ್ಮಿಕ ಜ್ಯೋತಿ ಸಂಘದ ಅಧ್ಯಕ್ಷ ಆರ್.ಶಿವಾಜಿ ಹೇಳಿದರು.

ಆಟೋ ಕಾಂಪ್ಲೆಕ್ಸ್‌ನಲ್ಲಿ ಕಾರ್ಮಿಕ ಜ್ಯೋತಿ ಸಂಘದಿಂದ ಸೋಮವಾರ ಹಮ್ಮಿಕೊಂಡಿದ್ದ ಕಾರ್ಮಿಕ ದಿನಾಚರಣೆಯಲ್ಲಿ ಮಾತನಾಡಿ, ಕಾರ್ಮಿಕರು ದೇಶದ ಶಕ್ತಿ. ರೈತರಂತೆ ಕಾರ್ಮಿಕರೂ ದೇಶದ ಬೆನ್ನೆಲುಬು. ಅವರ ಬೆವರಿನ ಶ್ರಮದ ಪರವಾಗಿ ದೇಶದ ಆರ್ಥಿಕ ಸ್ಥಿತಿಗೆ ದೊಡ್ಡ ಶಕ್ತಿ ಬಂದಿದೆ ಎಂದು ತಿಳಿಸಿದರು.
ಕಾರ್ಮಿಕ ದಿನಾಚರಣೆ ಅಂಗವಾಗಿ ಕಾರ್ಮಿಕರಿಗೆ ಕ್ರೀಡಾಕೂಟ ಆಯೋಜಿಸಲಾಗಿತ್ತು. ವಿವಿಧ ಕ್ರೀಡೆಗಳಲ್ಲಿ ವಿಜೇತ ಕಾರ್ಮಿಕರಿಗೆ ಬಹುಮಾನ ವಿತರಿಸಲಾಯಿತು. ಶಂಕರ ಕಣ್ಣಿನ ಆಸ್ಪತ್ರೆ ಹಾಗೂ ಸೌರವ್ ಡೆಂಟಲ್ ಕ್ಲಿನಿಕ್‌ನಿಂದ ಉಚಿತ ನೇತ್ರ ಹಾಗೂ ದಂತ ತಪಾಸಣಾ ಶಿಬಿರ ಏರ್ಪಡಿಸಲಾಗಿತ್ತು.
ಕಾರ್ಮಿಕರ ಸಂಘದ ಗೌರವಾಧ್ಯಕ್ಷ ರಮೇಶ್ ಬಾಬು, ಉಪಾಧ್ಯಕ್ಷ ಮೊಹಮ್ಮದ್ ಕಲೀಲ್, ಕಾರ್ಯದರ್ಶಿ ಸೈಯ್ಯದ್ ಖಾದ್ರಿ, ಖಜಾಂಚಿ ಪ್ರಕಾಶ್, ಪದಾಧಿಕಾರಿಗಳಾದ ಜಬ್ಬಾರ್, ಗೋಪಿ, ಮನ್ಸೂರ್, ಮುರುಳಿ, ಅಸ್ಲಾಂ, ಕಾರ್ತಿಕ್, ರವಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net