

ಬಾಲ್ಯದ ಸ್ನೇಹಿತನೊಬ್ಬ 50,000 ರೂ.ಸಾಲ ಪಡೆದು ಅದನ್ನು ಹಿಂತುರುಗಿಸದೇ ಮೃತಪಟ್ಟಿದ್ದು, ಸಾಲ ಕೊಟ್ಟ ಸ್ನೇಹಿತ ಕೋಪಗೊಂಡು ಮೃತನ ಚಿತೆಗೆ ಕೋಲಿನಿಂದ ಹೊಡೆಯುವ ಮೂಲಕ ತನ್ನ ಆಕ್ರೋಶ ವ್ಯಕ್ತಪಡಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಗ್ರಾಮದ ಸ್ಮಶಾನದಲ್ಲಿ ಆ ವ್ಯಕ್ತಿಯನ್ನು ಅಂತ್ಯಕ್ರಿಯೆ ನಡೆಯುವ ವೇಳೆ ಈ ಘಟನೆ ನಡೆದಿದ್ದು, ಇನ್ನು ಸಾಲ ಕೊಟ್ಟ ವ್ಯಕ್ತಿ ಸಿಟ್ಟಿನಿಂದ ಮತ್ತು ಆಕ್ರೋಶಭರಿತದಿಂದ ಕೋಲಿನಿಂದ ಹೊಡೆಯುತ್ತಿರುವ ದೃಶ್ಯಗಳು ಸಾಮಾಜಿಕ ಮಾಧ್ಯಮದಲ್ಲಿ ಭಾರೀ ವೈರಲ್ ಆಗಿವೆ.
ವರದಿಗಳ ಪ್ರಕಾರ, ಮೃತ ವ್ಯಕ್ತಿ ಆ ವ್ಯಕ್ತಿಯಿಂದ 50,000 ರೂ. ಸಾಲ ಪಡೆದಿದ್ದನು. ಆದರೆ, ಸಾಲವನ್ನು ಮರುಪಾವತಿಸದೆ ಆನಾರೋಗ್ಯದಿಂದ ಮೃತಪಟ್ಟಿದ್ದನು. ಹೀಗಾಗಿ ಕೋಪದಿಂದ, ಆ ವ್ಯಕ್ತಿ ಚಿತೆಯ ಮೇಲೆ ಹೊಡೆದನು ಇದರಿಂದ ಚಿತೆಯ ಮೇಲಿನ ಮರದ ತುಂಡುಗಳು ಚೆಲ್ಲಾಪಿಲ್ಲಿಯಾಗುತ್ತಿರುವ ದೃಶ್ಯಗಳು ವೈರಲ್ ಆಗಿವೆ.
ಇನ್ನು ಈ ದೃಶ್ಯವನ್ನು ನೋಡುಗರು ಆಘಾತಕ್ಕೊಳಗಾದರು. ಗ್ರಾಮಸ್ಥರೊಬ್ಬರು ಈ ಗೊಂದಲದ ಕೃತ್ಯವನ್ನು ವೀಡಿಯೊದಲ್ಲಿ ಸೆರೆಹಿಡಿದು ವಾಟ್ಸಾಪ್ನಲ್ಲಿ ಹಂಚಿಕೊಂಡರು, ಇದು ಇನ್ಸ್ಟಾಗ್ರಾಮ್ ಮತ್ತು ಫೇಸ್ಬುಕ್ನಲ್ಲಿ ಲಕ್ಷಾಂತರ ವೀಕ್ಷಣೆಗಳನ್ನು ಗಳಿಸಿದೆ.
ಈ ಇಬ್ಬರು ವ್ಯಕ್ತಿಗಳು ಒಂದೇ ಹಳ್ಳಿಯ ಬಾಲ್ಯ ಸ್ನೇಹಿತರಾಗಿದ್ದರು ಮತ್ತು ಒಟ್ಟಿಗೆ ಕೃಷಿಯಲ್ಲಿ ಕೆಲಸ ಮಾಡುತ್ತಿದ್ದರು. ಎರಡು ವರ್ಷಗಳ ಹಿಂದೆ, ಒಬ್ಬ ವ್ಯಕ್ತಿಯು ತನ್ನ ಬೆಳೆಯನ್ನು ಮಾರಿ ಮರುಪಾವತಿಸುವುದಾಗಿ ಭರವಸೆ ನೀಡಿ ಇನ್ನೊಬ್ಬರಿಂದ ಹಣವನ್ನು ಸಾಲ ಪಡೆದಿದ್ದ.(ಏಜೆನ್ಸೀಸ್)