ನೀರಿನ ಟ್ಯಾಂಕ್ ದುರಸ್ತಿಗೊಳಿಸಿ

manavi
ನೆಹರು ಕ್ರೀಡಾಂಗಣದ ಕುಡಿಯುವ ನೀರಿನ ಟ್ಯಾಂಕ್ ದುರಸ್ತಿಗೆ ಒತ್ತಾಯಿಸಿ ಮಲೆನಾಡು ಕೇಸರಿ ಪಡೆಯ ಎಸ್.ಜಿ.ರಾಜು, ಜನಾರ್ಧನ, ವಿಜಯ ಭಟ್, ಮುಖೇಶ್, ನಾಗೇಶ್, ಮಣಿಕಂಠ ಮುಂತಾದವರು ಚನ್ನಪ್ಪ ಅವರಿಗೆ ಮನವಿ ಸಲ್ಲಿಸಿದರು.
Published on

ಶಿವಮೊಗ್ಗ: ನೆಹರು ಕ್ರೀಡಾಂಗಣದ ಆವರಣದಲ್ಲಿರುವ ವ್ಯಾಯಾಮ ಶಾಲೆ ಎದುರಿನ ನೀರಿನ ಟ್ಯಾಂಕ್ ಹಲವು ವರ್ಷಗಳಿಂದ ಸೋರುತ್ತಿದೆ. ನಿರಂತರವಾಗಿ ನೀರು ಪೋಲಾಗುತ್ತಿದೆ. ಕೂಡಲೆ ಇದನ್ನು ದುರಸ್ತಿಗೊಳಿಸುವಂತೆ ಒತ್ತಾಯಿಸಿ ಮಲೆನಾಡು ಕೇಸರಿ ಪಡೆ ಪದಾಧಿಕಾರಿಗಳು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಸಹಾಯಕ ಅಧಿಕಾರಿ ಚನ್ನಪ್ಪ ಅವರಿಗೆ ಮನವಿ ಸಲ್ಲಿಸಿದರು.

ನೀರಿನ ಟ್ಯಾಂಕ್ ಶಿಥಿಲಗೊಂಡಿದ್ದು ದಿನವಿಡೀ ನೀರು ನಿರಂತರವಾಗಿ ಸೋರುತ್ತಿರುತ್ತದೆ. ನಗರ ಪಾಲಿಕೆ ಅಧಿಕಾರಿಗಳಾಗಲಿ, ಜಿಲ್ಲಾಡಳಿತವಾಗಲಿ ಇದನ್ನು ಗಮನಿಸದೇ ಇರುವುದು ದುರದೃಷ್ಟಕರ. ನೀರಿನ ಮಿತ ಬಳಕೆ ಮಾಡಬೇಕು ಎಂದು ಭಾಷಣ ಮಾಡುವ ಅಧಿಕಾರಿಗಳು ಈಗ ನಿರ್ಲಕ್ಷೃ ತೋರುತ್ತಿರುವುದು ದುರದೃಷ್ಟಕರ ಎಂದು ಮನವಿಯಲ್ಲಿ ಬೇಸರ ವ್ಯಕ್ತಪಡಿಸಲಾಗಿದೆ.
ಮಲೆನಾಡು ಕೇಸರಿ ಪಡೆ ಅಧ್ಯಕ್ಷ ಎಸ್.ಜಿ.ರಾಜು, ಕಾರ್ಯದರ್ಶಿ ವಿಜಯ್ ಭಟ್, ಪ್ರಮುಖರಾದ ಜನಾರ್ಧನ, ನಾಗೇಶ್, ಮುಖೇಶ್, ಸೋಮೇಶ್, ಮಣಿಕಂಠ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net