ಗ್ರಂಥಾಲಯ ಪುಸ್ತಕ ಆಯ್ಕೆ ಸಮಿತಿ ಪುನರ್ ರಚನೆ: ಅಧ್ಯಕ್ಷರು, ಸದಸ್ಯರು ಯಾರೆಲ್ಲ ಇದ್ದಾರೆ? ಇಲ್ಲಿದೆ ಪೂರ್ಣ ಮಾಹಿತಿ

book
Published on

ಬೆಂಗಳೂರು ಸಾವರ್ಗಜನಿಕ ಗ್ರಂಥಾಲಯ ಇಲಾಖೆಯು ರಾಜ್ಯಮಟ್ಟದ ಪುಸ್ತಕ ಆಯ್ಕೆ ಸಮಿತಿಯನ್ನು ಪುನರ್ ರಚಿಸಿದ್ದು, ಸಾಹಿತಿ ಡಾ. ಕರೀಗೌಡ ಬೀಚನಹಳ್ಳಿ ಅವರನ್ನು ಅಧ್ಯಕ್ಷರನ್ನಾಗಿ ಹಾಗೂ ಇತರೆ 16 ಸದಸ್ಯರನ್ನು ನೇಮಕ ಮಾಡಲಾಗಿದೆ.

ಈ ಸಮಿತಿಯನ್ನು ಮುಂದಿನ 2 ವರ್ಷಗಳ ಅವಧಿಗೆ ಅಥವಾ ಮುಂದಿನ ಸಮಿತಿ ಅಸ್ತಿತ್ವಕ್ಕೆ ಬರುವವರಗೆ ಈ ಸಮಿತಿಯು ಕಾರ್ಯನಿರ್ವಹಿಸಲಿದೆ.

ಸಮಿತಿ ಪದಾಧಿಕಾರಿಗಳು:

ಸಾಹಿತಿ ಡಾ. ಕರೀಗೌಡ ಬೀಚನಹಳ್ಳಿ- ಅಧ್ಯಕ್ಷ, ಸದಸ್ಯರು- ಬೆಂಗಳೂರಿನ ನಿವೃತ್ತ ಪ್ರಾಧ್ಯಾಪಕ ಪ್ರೊ. ಭಕ್ತರಹಳ್ಳಿ ಕಾಮರಾಜ್, ಮಂಗಳೂರು ವಿವಿ ಕನ್ನಡ ಸಹ ಪ್ರಾಧ್ಯಾಪಕ ಡಾ. ಧನಂಜಯ ಕಾಂಬ್ಳೆ, ಬೆಳಗಾವಿಯ ಡಾ. ಯಲ್ಲಪ್ಪ ಬಿ ಹಿಮ್ಮಡಿ, ಯಾದಗಿರಿಯ ಶ್ರೀ ಅಲ್ಲಮಪ್ರಭು ಪ್ರಕಾಶನದ ಸಿದ್ಧರಾಮ ಹೊನ್ನಲ್, ಭದ್ರಾವತಿ ರಾಮಾಚಾರಿ, ಮೈಸೂರು ವಿವಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಕನ್ನಡ ಪ್ರಾಧ್ಯಾಪಕಿ ಡಾ. ಲೋಲಾಕ್ಷಿ, ಗಂಗಾವತಿ ಸಪ್ರದ ಕಾಲೇಜು ಕನ್ನಡ ಅಧ್ಯಾಪಕಿ ಡಾ. ಮುಮ್ತಾಜ್ ಬೇಗಂ, ಬೆಂಗಳೂರಿನ ಎನ್‌ಎಂಕೆಆರ್‌ವಿ ಜ್ಯೂ. ಕಾಲೇಜಿನ ವಿಜ್ಞಾನ ಅಧ್ಯಾಪಕ ಕಿಗ್ಗ ರಾಜಶೇಖರ್ ಎಸ್.ಜಿ., ಬೆಂಗಳೂರು (ಕೆಂಗೇರಿ) ಸರ್ಕಾರಿ ಪಿಯು ಕಾಲೇಜಿನ ಇತಿಹಾಸ ಅಧ್ಯಾಪಕ ಡಾ. ಎಚ್.ಜಿ. ರಾಜೇಶ್, ಕೊಪ್ಪಳ ಸರ್ಕಾರಿ ಪಿಯು ಕಾಲೇಜಿನ ಕಿಶನ್‌ರಾವ್ ಕುಲಕರ್ಣಿ, ಬೆಂಗಳೂರು ವಿವಿ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದ ಪ್ರಾಧ್ಯಾಪಕ ಡಾ. ರಮೇಶ್.ಬಿ., ಅವರನ್ನು ನೇಮಿಸಲಾಗಿದೆ.

ಇದರ ಜತೆಗೆ ಕನ್ನಡ ಪುಸ್ತಕ ಪ್ರಾಧಿಕಾರದ ನಾಮ ನಿರ್ದೇಶನಗೊಂಡ ಸದಸ್ಯರು, ಕನ್ನಡ ಪ್ರಕಾಶಕರ ಸಂಘ, ಕನ್ನಡ ಸಾಹಿತ್ಯ ಪರಿಷತ್ತು, ಪ್ರಸಾರಾಂಗ, ಕರ್ನಾಟಕ ವಿಜ್ಞಾನ ಪರಿಷತ್ತು, ರಾಜ್ಯ ಗ್ರಂಥಾಲಯ ಪ್ರಾಧಿಕಾರದ ಅಧ್ಯಕ್ಷ ಡಾ. ಎಂ. ಕೃಷ್ಣಮೂರ್ತಿ, ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಒಕ್ಕೂಟ, ಸಾರ್ವಜನಿಕ ಗ್ರಂಥಾಲಯ ಇಲಾಖೆ ನಿರ್ದೇಶಕ ಡಾ. ಸತೀಶ್‌ಕುಮಾರ್ ಎಸ್ ಹೊಸಮನಿ ಸದಸ್ಯ ಕಾರ್ಯದರ್ಶಿಯಾಗಿರುತ್ತಾರೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಅಧೀನ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net