

ಚಿತ್ರದುರ್ಗ: ( renukaswamy ) ನಟ ದರ್ಶನ್ ಗ್ಯಾಂಗ್ ಬಂಧನದ ಪ್ರಕರಣದಲ್ಲಿ ರೇಣುಕಾಸ್ವಾಮಿ ಹೆಸರು ರಾಜ್ಯಾದ್ಯಂತ ಸಂಚಲನ ಸೃಷ್ಟಿಸಿತ್ತು. ಈಗ ರೇಣುಕಾಸ್ವಾಮಿ ಸಾವಿನ ಎಷ್ಟೋ ತಿಂಗಳ ನಂತರ ಸಂಭ್ರಮ ಮನೆ ಮಾಡಿದೆ.
2024ರ ಜೂನ್ ತಿಂಗಳಲ್ಲಿ ರೇಣುಕಾಸ್ವಾಮಿ ಬರ್ಬರ ಹತ್ಯೆಯಾಗಿ ಸಾವನ್ನಪ್ಪಿದ್ದು, ದರ್ಶನ್ ಸೇರಿ 17 ಮಂದಿ ಆರೋಪಿಗಳನ್ನ ಪೊಲೀಸರು ಬಂಧಿಸಿದ್ದರು. 8 ತಿಂಗಳ ಈ ಕಹಿ ಘಟನೆಗಳೆಲ್ಲಾ ಕಳೆದ ಮೇಲೆ ಚಿತ್ರದುರ್ಗ ನಗರದ VRS ಬಡಾವಣೆಯಲ್ಲಿರುವ ರೇಣುಕಾಸ್ವಾಮಿ ಮನೆಯಲ್ಲಿ ಸಂಭ್ರಮ ಶುರುವಾಗಿದ್ದು, ರೇಣುಕಾಸ್ವಾಮಿ ಮಗನ ನಾಮಕರಣ ಶಾಸ್ತ್ರಕ್ಕೆ ತಯಾರಿ ಮಾಡಿಕೊಳ್ಳಲಾಗಿದೆ.
ರೇಣುಕಾಸ್ವಾಮಿ ಮಗುವಿಗೆ 5 ತಿಂಗಳು ತುಂಬಿದ ಹಿನ್ನೆಲೆಯಲ್ಲಿ ಮನೆಯಲ್ಲೇ ನಾಮಕರಣ ಶಾಸ್ತ್ರ ಮಾಡಲಾಗುತ್ತಿದೆ. ರೇಣುಕಾಸ್ವಾಮಿ ತಂದೆ ಕಾಶಿನಾಥ ಶಿವನಗೌಡ್ರು, ತಾಯಿ ರತ್ನ ಪ್ರಭಾ ಅವರು ತೊಟ್ಟಿಲು ಶಾಸ್ತ್ರಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ರೇಣುಕಾಸ್ವಾಮಿ ಪತ್ನಿ ಸಹನಾ ತೊಟ್ಟಿಲು ಶಾಸ್ತ್ರ ಹಿನ್ನೆಲೆ ಇಂದು ಹೆತ್ತಿಬ್ಬಣದೊಂದಿಗೆ ಗಂಡನ ಮನೆಗೆ ಬರಲಿದ್ದಾರೆ. ಮೊಮ್ಮಗ ಮತ್ತು ಸೊಸೆಯನ್ನು ಮನೆ ತುಂಬಿಸಿಕೊಳ್ಳಲು ರೇಣುಕಾಸ್ವಾಮಿ ತಂದೆ ಕಾಶಿನಾಥ ಶಿವನಗೌಡ್ರು, ತಾಯಿ ರತ್ನಪ್ರಭಾ ಕಾತರರಾಗಿದ್ದಾರೆ.
ಸಹನಾ ದಂಪತಿ ಮಗುವಿಗೆ 5 ತಿಂಗಳು ತುಂಬಿದೆ. ಹೀಗಾಗಿ ರೇಣುಕಾಸ್ವಾಮಿ ಕುಟುಂಬಸ್ಥರು ಇಂದು ನಾಮಕರಣ ಶಾಸ್ತ್ರವನ್ನು ಇಟ್ಟುಕೊಂಡಿದ್ದಾರೆ. ಚಿತ್ರದುರ್ಗದ ರೇಣುಕಾಸ್ವಾಮಿ ನಿವಾಸದಲ್ಲೇ ಅವರ ಮಗವಿಗೆ ನಾಮಕರಣ ಶಾಸ್ತ್ರ ನಡೆಯಲಿದೆ.