

* ಕಿರುವಾರ ಎಸ್.ಸುದರ್ಶನ್ ಕೋಲಾರ
ತೆಗೆದುಕೊಂಡಿರುವ ಸಾಲ ಮರು ಪಾವತಿ ಮಾಡಿದ್ದರೂ ನವೀಕರಣ ಸಾಲ ದೊರೆಯುತ್ತಿಲ್ಲ. ಕಡತಗಳು ಸಿದ್ಧವಾಗಿ ಬ್ಯಾಂಕಿಗೆ ಕಳುಹಿಸಿದರೂ ಸಾಲ ದೊರೆಯುವುದು ವಿಳಂಬವಾಗುತ್ತಿದೆ.
ಒAದು ಕಾಲದಲ್ಲಿ ಜನರ ಮನೆ ಮಾತಾಗಿದ್ದ ಕೋಲಾರ-ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕಿನಿಂದ ಈಗ ಗ್ರಾಹಕರಿಗೆ ಸೌಲಭ್ಯ ದೊರೆಯುವುದು ಅಷ್ಟಕ್ಕಷ್ಟೆ ಎಂಬAತಾಗಿದೆ.
ಎರಡೂ ಜಿಲ್ಲೆಯ ವ್ಯಾಪ್ತಿಯಲ್ಲಿ 12 ಬ್ಯಾಂಕ್ ಶಾಖೆಗಳಿದ್ದು, 210 ಕೃಷಿ ಪತ್ತಿನ ಸೇವಾ ಸಹಕಾರ ಸಂಘಗಳು, ಸಾವಿರಾರು ಮಹಿಳಾ ಸ್ವ ಸಹಾಯ ಸಂಘಗಳು ಇದ್ದು, ಆಯಾ ತಾಲೂಕು ವ್ಯಾಪ್ತಿಯಲ್ಲಿರುವ ಬ್ಯಾಂಕಿನ ಶಾಖೆ, ಸೊಸೈಟಿಗಳಲ್ಲಿ ವಹಿವಾಟು ನಡೆಸುತ್ತಿದ್ದರು.
ತಂತ್ರಜ್ಞಾನ ಬೆಳೆಯುತ್ತಿದ್ದಂತೆ ವಾಣಿಜ್ಯ ಬ್ಯಾಂಕ್‌ಗಳಿಗೆ ಸೆಡ್ಡು ಹೊಡೆಯುವ ರೀತಿ ಕೋಲಾರ-ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಬೆಳೆದು ನಿಂತಿತು. ಆರಂಭದಲ್ಲಿ ಟೇಬಲ್‌ಗಳ ಮೇಲೆ ಹಣದ ಕಂತೆಗಳನ್ನು ಇಟ್ಟುಕೊಂಡು ಮಹಿಳೆಯರ ಮಡಿಲು ತುಂಬುವ ಕೆಲಸ ಮಾಡಲಾಗುತ್ತಿತ್ತು. ಅದಾದ ನಂತರ ಚೆಕ್ ಮೂಲಕ ಸಾಲ ವಿತರಣೆ ಮಾಡಲಾಯಿತು.
ಆನ್‌ಲೈನ್ ಪದ್ಧತಿ ಜಾರಿಗೆ ತರುತ್ತಿದ್ದಂತೆ ಮೊಬೈಲ್ ಬ್ಯಾಂಕಿಂಗ್, ಡೆಬಿಟ್ ಕಾರ್ಡ್ (ಎಟಿಎಂ), ಆರ್‌ಟಿಜಿಎಸ್, ನೆಫ್ಟ್ ಸೌಲಭ್ಯಗಳನ್ನು ಗ್ರಾಹಕರಿಗೆ ಒದಗಿಸಲಾಯಿತು. ಆದರೆ ಈಗಿನ ಪರಿಸ್ಥಿತಿಯಲ್ಲಿ ಬ್ಯಾಂಕ್ ತನ್ನ ಗ್ರಾಹಕರಿಗೆ ಸೌಲಭ್ಯ ಕಲ್ಪಿಸುವಲ್ಲಿ ವಿಳಂಬ ತೋರುತ್ತಿದ್ದು, ಕೆಂಗಣ್ಣಿಗೆ ಗುರಿಯಾಗಿದೆ.
ಬ್ಯಾಂಕಿನಿAದ ಗ್ರಾಹಕರಿಗೆ ಸೌಲಭ್ಯಗಳ ಜತೆಗೆ, ರೈತರಿಗೆ, ಮಹಿಳಾ ಸಂಘಗಳ ಸದಸ್ಯರಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ, ಗೃಹ ಸಾಲ, ಹುಳು ಸಾಕಾಣಿಕೆ ಮನೆ ನಿರ್ಮಾಣಕ್ಕೆ, ವಾಹನ, ನಿವೇಶನ, ಮಧ್ಯಮ, ಅಲ್ಪಾವಽ ಹೀಗೆ ವಿವಿಧ ರೀತಿಯ ಸಾಲ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿತ್ತು. ಇದೆಲ್ಲ ನಿಂತು ಹೋಗಿದ್ದು, ಬ್ಯಾಂಕ್ ಅಽಕಾರಿಗಳೇ ಬಡವರನ್ನು ಬಲವಂತವಾಗಿ ಖಾಸಗಿ ಲೇವಾದೇವಿದಾರರ ಬಳಿಗೆ ಕಳುಹಿಸುವ ಪ್ರಯತ್ನ ಆಗಿದೆ ಎಂದರೆ ತಪ್ಪಾಗಲಾರದು.
* ಬೆಂಗಳೂರಿಗೆ ಅಲೆದಾಡುವ ಪರಿಸ್ಥಿತಿ
ಮೇ, ಜೂನ್, ಜುಲೈ ಮಾಹೆಯಲ್ಲಿ ಹೆಚ್ಚಾಗಿ ತೋಟಗಾರಿಕೆ ಬೆಳೆಗಳನ್ನು ನಾಟಿ ಮಾಡುವ ಸಮಯ. ಶೂನ್ಯ ಬಡ್ಡಿದರದ ಬೆಳೆ ಸಾಲಕ್ಕಾಗಿ (ಕೆಸಿಸಿ) ಸುಮಾರು ೩೦ ಕೋಟಿ ರೂ.ಗೂ ಅಽಕ ಬೇಡಿಕೆ ಬಂದಿದೆ. ಸೊಸೈಟಿಗಳು, ಬ್ಯಾಂಕ್ ಶಾಖೆಗಳಿಂದ ಕೇಂದ್ರ ಕಚೇರಿಗೆ ಕಡತಗಳು ಬಂದಿದ್ದು, ಇದುವರೆಗೂ ಅನುಮೋದನೆ ಸಿಕ್ಕಿಲ್ಲ ಎಂಬ ಆರೋಪವಿದೆ. ಮೇ ೧೩ರಂದು ಡಿಸಿಸಿ ಬ್ಯಾಂಕ್‌ಗೆ ಆಡಳಿತಾಽಕಾರಿಯಾಗಿ ನೇಮಕಗೊಂಡಿರುವ ಆಮ್ಲಾನ್ ಆದಿತ್ಯ ಬಿಶ್ವಾಸ್ ಅವರು ಇದುವರೆಗೂ ಬ್ಯಾಂಕಿಗೆ ಭೇಟಿ ನೀಡಿಲ್ಲ. ಯಾವುದೇ ಕಡತಕ್ಕೆ ಸಹಿ ಬೇಕಾದರೆ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕರು ಸೇರಿ ಎಜಿಎಂಗಳು, ಸಿಬ್ಬಂದಿ ಕತಡಗಳನ್ನು ಬೆಂಗಳೂರಿಗೆ ಎತ್ತಿಕೊಂಡು ಹೋಗುವ ಪರಿಸ್ಥಿತಿ ಎದುರಾಗಿದೆ. ಆದರೂ ಸಹ ಹೋಗಿರುವ ಕೆಲಸಗಳು ಆಗದೆ ಬಂದ ದಾರಿಗೆ ಸುಂಕವಿಲ್ಲ ಎಂಬತೆ ಹಿಂತಿರುಗಿ ಬರುತ್ತಿದ್ದಾರೆ ಮಾತು ಚರ್ಚೆಯಲ್ಲಿದೆ.
* 5 ವರ್ಷಕ್ಕೊಮ್ಮೆ ಮಾರ್ಟ್ಗೇಜ್
ಬ್ಯಾಂಕಿನಿAದ ರೈತರಿಗೆ ಬೆಳೆ (ಕೆಸಿಸಿ) ಸಾಲ ನೀಡಬೇಕಾದರೆ ದಾಖಲೆ ಸಂಗ್ರಹಿಸಲಾಗುತ್ತದೆ. ಐದು ವರ್ಷಕ್ಕೊಮ್ಮೆ ಸರ್ವೇ ನಂಬರ್ ಪೈಕಿ ಜಮೀನನ್ನು ಮಾರ್ಟ್ಗೇಜ್ ಮಾಡಿ ಪ್ರತಿ ವರ್ಷ ನವೀಕರಣ ಸಾಲ ನೀಡಲಾಗುತ್ತಿದೆ. ಈಗ ಸಾಲ ನೀಡುವುದು ತಡವಾದರೆ ಮತ್ತೆ ಸಾವಿರಾರು ರೂ. ವೆಚ್ಚ ಮಾಡಿ ಮಾರ್ಟ್ಗೇಜ್ ಮಾಡಿಸಬೇಕಾಗುತ್ತದೆ. ಸಾಲ ಪಾವತಿ ಮಾಡಿರುವವರಿಗೆ ಇದುವರೆಗೂ ಸೊಸೈಟಿ ಮತ್ತು ಶಾಖೆಗಳಿಂದ ತೆಗೆದುಕೊಂಡಿರುವ ಸಾಲವನ್ನು ರೈತರು ಮರು ಪಾವತಿ ಮಾಡಿ ೨-೩ ತಿಂಗಳುಗಳೆ ಕಳೆದಿವೆ. ಆದರೂ ಮರು ಸಾಲ ದೊರೆಯುವುದೋ ಇಲ್ಲವೋ ಎಂದು ಅನುಮಾನ ಕಾಡುತ್ತಿದೆ.
* ಸುಧಾರಣೆ ಕಷ್ಟ
ಡಿಸಿಸಿ ಬ್ಯಾಂಕಿನ ಪರಿಸ್ಥಿತಿ ಗಮನಿಸುತ್ತಿದ್ದರೆ ಗ್ರಾಹಕರಿಗೆ ಸೌಲಭ್ಯಗಳು ದೊರೆಯುವ ಲಕ್ಷಣಗಳು ಕಾಣುತ್ತಿಲ್ಲ. ಇದರಿಂದ ರಾಜ್ಯ ಹಾಗೂ ದೇಶದ ಆರ್ಥಿಕ ಪರಿಸ್ಥಿತಿಯ ಮೇಲೆ ನೇರ ಪರಿಣಾಮ ಬೀರಲಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಬ್ಯಾಂಕ್ ಸುಧಾರಣೆ ಮಾಡುವುದು ಕಷ್ಟ ಎಂದು ಬ್ಯಾಂಕಿನ ಮಾಜಿ ನಿರ್ದೇಶಕ ಕಡಗಟ್ಟೂರು ದಯಾನಂದ ಹೇಳಿದರು.
* ಸರ್ಕಾರದಿಂದ ಬಡ್ಡಿ ಕ್ಲೈಮ್ ಆಗಲ್ಲ
ಬ್ಯಾಂಕಿನಿAದ ಮಹಿಳಾ ಸಂಘಗಳ ಸದಸ್ಯರಿಗೆ, ರೈತರಿಗೆ ಹಾಗೂ ನೀಡಿರುವ ಇತರ ಸಾಲಗಳ ಮೊತ್ತವನ್ನು ಅಽಕಾರಿಗಳು ಸಕಾಲಕ್ಕೆ ವಸೂಲಿ ಮಾಡಿದ್ದರೆ ಲಾಭದ ಹಾದಿಯಲ್ಲಿ ನಡೆಯುತ್ತಿತ್ತು. ಬ್ಯಾಂಕ್, ರೈತರು, ಮಹಿಳಾ ಸಂಘಗಳ ಸದಸ್ಯರ ನಡುವೆ ವಹಿವಾಟು ಶೇಕಡವಾರು ಕಡಿತಗೊಂಡಿದೆ. ಈಗಾಗಲೇ ಕೋಲಾರ-ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಪೆಕ್ಸ್ಗೆ ಸುಸ್ಥಿಯಾಗಿದೆ. ನಬಾರ್ಡ್ ಬ್ಯಾಂಕ್‌ನವರು ಡಿಸಿಸಿ ಬ್ಯಾಂಕ್ ನೇರವಾಗಿ ಸಾಲ ಕೊಡುವುದಿಲ್ಲ. ಇದರಿಂದ ಸರ್ಕಾರದಿಂದ ಬರುವ ಬಡ್ಡಿ ಸಹ ಕ್ಲೆÊಮ್ ಆಗುವುದಿಲ್ಲ.
* ಹಣ ನೀಡಲು ಕುಂಟು ನೆಪ
ಗ್ರಾಹಕರು ಶಾಖೆಗಳಿಗೆ ಭೇಟಿ ನೀಡಿ ಖಾತೆಯಲ್ಲಿನ ಹಣ ಡ್ರಾ ಮಾಡಬೇಕಾದರೆ ತಾಸುಗಟ್ಟಲೇ ಕಾಯಿಸುತ್ತಾರೆ. ಒಂದು ವೇಳೇ ೧೦ ಸಾವಿರ ರೂ. ಮೀರಿ ಹಣ ಡ್ರಾ ಮಾಡಿದರೆ ಪಡೆದುಕೊಳ್ಳಲು ದಿನಗಟ್ಟಲೇ ಕಾಯಬೇಕು. ಖಾತೆಗೆ ಹಣ ಬರಲು ಒಂದು ವಾರ ಆಗುತ್ತದೆ. ತಡ ಯಾಕೆ ಎಂದು ಕೇಳಿದರೆ ಸರ್ವರ್, ಹಣ ಇಲ್ಲ, ಆಧಾರ್ ಲಿಂಕ್, ಪ್ಯಾನ್ ಲಿಂಕ್ ಆಗಿಲ್ಲ. ಸಹಿ ತಾಳೆ ಆಗ್ತಿಲ್ಲ ಹೀಗೆ ಕುಂಟು ನೆಪ ಹೇಳಿ ಕಳಿಸುತ್ತಾರೆ ಎಂದು ಗ್ರಾಹಕರೊಬ್ಬರು ಆರೋಪಿಸಿದರು.
ಕೋಟ್..
ರೈತರು ತೆಗೆದುಕೊಂಡಿರುವ ಸಾಲವನ್ನು ಮರುಪಾವತಿ ಮಾಡಿದರೆ ಪುನಃ ಸಾಲ ನೀಡಲಾಗುತ್ತದೆ.
* ಬಿ.ಎನ್.ಶೀಲಾ, ಎಂಡಿ, ಡಿಸಿಸಿ ಬ್ಯಾಂಕ್, ಕೋಲಾರ
ಕೋಟ್..
ಬೆಂಗಳೂರಿನಲ್ಲಿರುವ ಅಧಿಕಾರಿಗಳಿಗೆ ಜಿಲ್ಲೆಗಳ ಜವಾಬ್ದಾರಿ ನೀಡಿದರೆ ಜನಕ್ಕೆ ಅನುಕೂಲ ಆಗುವುದಿಲ್ಲ. ಬ್ಯಾಂಕಿಗೆ ನೇಮಕಗೊಂಡಿರುವ ಆಡಳಿತಾಽಕಾರಿ ಇದುವರೆಗೂ ಭೇಟಿ ನೀಡಿಲ್ಲ. ಸೊಸೈಟಿಗಳಿಂದ ಬ್ಯಾಂಕಿಗೆ ಕಳುಹಿಸಿರುವ ಕಡತಗಳು ವಿಲೇ ಆಗಿಲ್ಲ. ಇದರಿಂದ ಗ್ರಾಹಕರಿಗೆ ಸೌಲಭ್ಯ ತಲುಪಿಸಲು ತಡವಾಗುತ್ತಿದೆ.
* ಕೆ.ವಿ.ದಯಾನಂದ್, ಅಧ್ಯಕ್ಷ, ಎಸ್‌ಎಫ್‌ಸಿಎಸ್ ಕಡಗಟ್ಟೂರು
ಕೋಟ್...
ನಾನು ಚೆಕ್ ಹಾಕಿದ್ದೆ, ಹಣ ಡ್ರಾ ಆಗಿ ವಾರ ಕಳೆದರೂ ಖಾತೆಗೆ ಜಮಾ ಮಾಡಲು ಸತಾಯಿಸಿದರು. ಕೇಳಿದಕ್ಕೆ ನೆಪ ಹೇಳಿಕೊಂಡು ಓಡಾಡಿಸಿದರು. ಕೆಲಸ ಮಾಡುತ್ತಿರುವ ಅಧಿಕಾರಿಗಳಿಗೆ ಕೆಲಸದ ಬಗ್ಗೆ ಗಂಭೀರತೆ ಇಲ್ಲ.
* ಕೆ.ವೈ.ಗಣೇಶ್‌ಗೌಡ, ಬ್ಯಾಂಕಿನ ಗ್ರಾಹಕ, ಕೋಟಿಗಾನಹಳ್ಳಿ