

ಕೋಲಾರ: ಸಮುದಾಯಕ್ಕೆ ದ್ರೋಹ ಬಗೆದವರನ್ನು ಕ್ಷಮಿಸಬಾರದು ಎಂದು ತಿಗಳ ಜನಾಂಗದ ಸಮನ್ವಯ ಸಮಿತಿ ಸಂದ ಸಂಸ್ಥಾಪಕ ಎಲ್.ಎ.ಮಂಜುನಾಥ್ ಹೇಳಿದರು.
ನಗರದ ಧರ್ಮರಾಯಸ್ವಾಮಿ ದೇವಸ್ಥಾನದಲ್ಲಿ ಜಿಲ್ಲಾ ತಿಗಳ ಜನಾಂಗದ ಸಮನ್ವಯ ಸಮಿತಿ ನೂತನ ಪದಾಧಿಕಾರಿಗಳ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿ, ಜಿಲ್ಲೆಯಲ್ಲಿ 2004-05ರಲ್ಲಿ ನೋಂದಣಿಯಾದ ಸಂಕ್ಕೆ 10 ವರ್ಷಗಳಿಂದ ಅಧ್ಯಕ್ಷರಾಗಿರುವ ಎಂ.ಉದಯ್ಕುಮಾರ್ ಸಮುದಾಯಕ್ಕೆ ಉಪಯೋಗವಾಗುವ ಕೆಲಸ ಮಾಡಿಲ್ಲ. ಸಮುದಾಯವನ್ನು ಮುಂದಿಟ್ಟುಕೊಂಡು ಅವರ ಕಾಲೇಜು ಬೆಳೆಸಿಕೊಂಡಿದ್ದಾರೆ ಹೊರತು, ಸಂದ ಸಂಟನೆ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ ಎಂದು ಆರೋಪಿಸಿದರು.
ದೇವಾಲಯದ ಗೌಡರು, ಯಜಮಾನ, ಅಧ್ಯಕ್ಷ ಹಾಗೂ ಪದಾಧಿಕಾರಿ ಯಾರಿಗೂ ತಿಳಿಸದೆ ನಾಲ್ಕು ಗೊಡೆಗಳ ಮಧ್ಯೆ ಹೊಸ ಸಂ ಹುಟ್ಟುಹಾಕಿದ್ದಾರೆ. ಅದಕ್ಕೆ ಅವರೇ ಅಧ್ಯಕ್ಷರಾಗಿದ್ದಾರೆ. ಅವರು ತಪ್ಪು ಮಾಹಿತಿ ನೀಡುವ ಮೂಲಕ ಸಮುದಾಯವನ್ನು ದಾರಿ ತಪ್ಪಿಸುತ್ತಿರುವುದು ಎಷ್ಟು ಸರಿ?. ಸಮುದಾಯದ ಹಿರಿಯ ಮುಖಂಡರು ಮತ್ತು ದೇವಾಲಯದ ಗೌಡರು ಮತ್ತು ಯಜಮಾನರು ಇದನ್ನು ಪ್ರಶ್ನಿಸಬೇಕು. ಇಂತಹ ಸಮಯ ಸಾಧಕರಿಂದ ನೀವು ದೂರ ಇರುವುದು ಉತ್ತಮ ಎಂದು ಎಚ್ಚರಿಕೆ ನೀಡಿದರು.
ಮುಳಬಾಗಿಲು ತಾಲೂಕು ಅಧ್ಯಕ್ಷ ಎಂ.ವೆಂಕಟೇಶ್ ಮಾತನಾಡಿ, ಒಂದೇ ಸಂದಲ್ಲಿದ್ದು, ಸಂವನ್ನು ಒಡೆದು ಹೊರ ಹೋಗಿದ್ದಾರೆ. ಇಂಥವರಿಂದ ಸಮುದಾಯಕ್ಕೆ ಬೆಲೆ ಇಲ್ಲದಂತಾಗಿದೆ. ಇವರು ಊರುಗಳಿಗೆ ಬಂದರೆ ಛೀಮಾರಿ ಹಾಕಿ ಎಂದರು.
ಉಪಾಧ್ಯಕ್ಷ ವೇಮಗಲ್ ಗೌಡರ ಚಿಕ್ಕ ಮುನಿಯಪ್ಪ, ನೂತನ ಪದಾಧಿಕಾರಿಗಳಾದ ಖಜಾಂಚಿ ನರಸಾಪುರ ಬಿ.ಶ್ರೀನಿವಾಸ್, ಕಾರ್ಯದರ್ಶಿ ಎನ್.ಪಲ್ಗುಣ, ಸಂಟನಾ ಕಾರ್ಯದರ್ಶಿ ಧರ್ಮರಾಯನಗರ ಜಿ.ನಾಗರಾಜ್ ಇವರನ್ನು ಅಭಿನಂದಿಸಲಾಯಿತು.
ಯುವ ವೇದಿಕೆ ಕಾರ್ಯದರ್ಶಿ ಮುದುವತ್ತಿ ಮೋಹನ್ಬಾಬು, ಯುವ ವೇದಿಕೆ ಖಜಾಂಚಿ ಕಾರಂಜಿಕಟ್ಟೆ ಆಂಜಿನಪ್ಪ, ವೇಮಗಲ್ನ ಶ್ರೀಧರ್ಮರಾಯಸ್ವಾಮಿ ದೇವಾಲಯ ಮಾಜಿ ಅಧ್ಯಕ್ಷ ಮಂಜುನಾಥ್, ಯುವ ಮುಖಂಡ ವೇಮಗಲ್ ವಿ.ಪ್ರಕಾಶ್, ಕಾರಂಜಿಕಟ್ಟೆಯ ಧರ್ಮರಾಯಸ್ವಾಮಿ ದೇವಾಲಯದ ಗೌಡರ ಅಯ್ಯಪ್ಪ, ಯಜಮಾನ್ ಆನಂದ್ ಕುಮಾರ್, ಗೌಡರ ಮುನಿಯಪ್ಪ, ದ್ರೌಪದಾಂಬ ಕನ್ನಡಿಗರ ಯುವಕರ ಸಂದ ಪದಾಧಿಕಾರಿಗಳಾದ, ಎಸ್.ಶ್ರೀನಾಥ್, ಮುರಳಿ, ಅಂಬರೀಶ್, ಗಿರೀಶ್, ಅರುಣ್ಕುಮಾರ್, ರಾಮಕೃಷ್ಣ, ಪ್ರೇಮ್ಸಾಗರ್, ಶ್ರುಜನ್, ಗುಣಶೇಖರ್, ಸಂಪತ್ ಕುಮಾರ್, ಪ್ರದಿಪ್, ಅರ್ಜುನಪ್ಪ, ನಾರಾಯಣಸ್ವಾಮಿ, ನಾಗರಾಜ್, ಸಂತೋಷ್, ಚಂದ್ರಶೇಖರ್, ಸುನೀಲ್ ಮುಂತಾದವರು ಇದ್ದರು.