ಮೊದಲು ‘ರಾಮ’ನನ್ನು ತೆಗೆದುಹಾಕಿ!

Siddaramaiah
Published on

ಬೆಂಗಳೂರು: ಸಿಎಂ ಸಿದ್ದರಾಮಯ್ಯ ಇತ್ತೀಚೆಗೆ ದೇವಸ್ಥಾನದ ಉದ್ಘಾಟನೆಗೆ ಹೋಗಿದ್ದು, ಪೂಜೆ ಮಾಡಲು ಒಳಗೆ ಹೋಗಿಲ್ಲ. ಆದರೆ ಮಸೀದಿಗೆ ಕರೆದರೆ ಟೋಪಿ ಹಾಕಿಕೊಂಡು ಓಡುತ್ತಾರೆ. ಮೈಸೂರಿನ ಕುಸ್ತಿ ಕಾರ್ಯಕ್ರಮದಲ್ಲಿ ಕೇಸರಿ ಪೇಟವನ್ನು ಕೂಡ ಅವರು ಹಾಕಿಕೊಳ್ಳಲಿಲ್ಲ. ಹೆಸರು ಸಿದ್ದರಾಮಯ್ಯ, ಮೊದಲು ರಾಮನನ್ನು ನಿಮ್ಮ ಹೆಸರಿನಿಂದ ತೆಗೆದು ಹಾಕಿ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ ಕುಟುಕಿದರು.

ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ಮೌಲ್ವಿ ಕಾರ್ಯಕ್ರಮಕ್ಕೆ ಹೋಗಿ ಹತ್ತು ಸಾವಿರ ಕೋಟಿ ಕೊಡುವುದಾಗಿ ಹೇಳುತ್ತೀರಿ, ಇನ್ನೊಂದು ಕಡೆ ಸಾವಿರ ಕೋಟಿ ಕೊಡುತ್ತೀರಿ, ಇಂತಹ ಮನಸ್ಥಿತಿಯವರು ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗುವುದಾದರೂ ಹೇಗೆ? ಎಂದು ಚುಚ್ಚಿದರು.

ಮುಸಲ್ಮಾರ ಮೇಲಿರುವ ಸಾಸಿವೆ ಕಾಳು ಪ್ರೀತಿ ಹಿಂದುಗಳ ಮೇಲಿಲ್ಲ ಆಟೋರಿಕ್ಷಾದಲ್ಲಿ ಬಾಂಬ್ ತೆಗೆದುಕೊಂಡು ಹೋದವರು, ಕುಕ್ಕರ್ ಬಾಂಬ್ ಸಿದ್ಧಪಡಿಸಿದವರು ಇವರ ಬ್ರದರ್. ಶ್ರೀರಾಮ ಭಕ್ತರು ದುಷ್ಮನ್‌ಗಳು ಎಂದು ವಾಗ್ದಾಳಿ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net