ಅಪಾಯಕಾರಿ ಮರಗಳನ್ನು ತೆರವುಗೊಳಿಸಿ

tth (16)
ಮೇಳಿಗೆ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಅರಣ್ಯಾಧಿಕಾರಿಗಳಿಗೆ ಶಾಸಕ ಆರಗ ಜ್ಞಾನೇಂದ್ರ ಸೂಚನೆ ನೀಡುತ್ತಿರುವುದು.
Published on

ತೀರ್ಥಹಳ್ಳಿ: ತಾಲೂಕಿನಾದ್ಯಂತ ಶಾಲೆಗಳ ಸಮೀಪ ಅಪಾಯಕಾರಿಯಾಗಿ ಬೆಳೆದು ನಿಂತಿರುವ ಅಕೇಶಿಯಾ ಮರಗಳನ್ನು ಕೂಡಲೇ ತೆರವುಗೊಳಿಸಬೇಕು ಎಂದು ಶಾಸಕ ಆರಗ ಜ್ಞಾನೇಂದ್ರ ತಾಲೂಕಿನ ಅರಣ್ಯಾಧಿಕಾರಿಗಳಿಗೆ ಸೂಚಿಸಿದರು.

ಶಾಲೆಗಳ ಸುರಕ್ಷತೆ ಗಮನಿಸುವ ಸಲುವಾಗಿ ಗುರುವಾರ ತಾಲೂಕಿನ ಮೇಳಿಗೆ ಸರ್ಕಾರಿ ಪ್ರೌಡಶಾಲೆಗೆ ಭೇಟಿ ನೀಡಿದ್ದ ಅವರು, ಅಕೇಶಿಯಾ ಮರಗಳಿಂದಾಗಿಯೇ ತಾಲೂಕಿನಲ್ಲಿ ವಿದ್ಯುತ್ ಸೇರಿ ಹಲವು ಸಮಸ್ಯೆಗಳು ಎದುರಾಗುತ್ತಿವೆ. ಪ್ರತಿ ವರ್ಷ ಮಳೆಗಾಲದ ಆರಂಭಕ್ಕೆ ಮುನ್ನವೇ ಈ ಬಗ್ಗೆ ಮುನ್ನೆಚ್ಚರಿಕೆ ವಹಿಸುವ ಅಗತ್ಯವಿದೆ ಎಂದರು.

ಶಾಲೆಯ ಛಾವಣಿಗೆ ಬಾಗಿರುವ ಅಕೇಶಿಯಾ ಮರಗಳು ಯಾವುದೇ ಕ್ಷಣದಲ್ಲಿ ಬೀಳುವ ಸಾಧ್ಯತೆಯಿದೆ. ಈ ಶಾಲೆಯ ಸಮೀಪದಲ್ಲಿರುವ ಮರಗಳು ಮಾತ್ರವಲ್ಲದೆ, ವಿದ್ಯಾರ್ಥಿಗಳ ಸುರಕ್ಷತೆ ಸಲುವಾಗಿ ತಾಲೂಕಿನ ಇತರೆ ಶಾಲೆಗಳ ಆವರಣದಲ್ಲಿ ಬೆಳೆದು ನಿಂತಿರುವ ಮರಗಳನ್ನು ಗುರುತಿಸಿ, ಅವುಗಳ ಕಡಿತಲೆಗೆ ಅನುಮತಿ ನೀಡುವಂತೆ ವಲಯ ಅರಣ್ಯಾಧಿಕಾರಿಗೆ ಸೂಚಿಸಿದರು.

ತೀರ್ಥಹಳ್ಳಿ ವಲಯ ಅರಣ್ಯಾಧಿಕಾರಿ ಸಂಜಯ್, ಬಿಜೆಪಿ ಮುಖಂಡ ಅಣ್ಣಪ್ಪ, ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net