'ಶಾಂತಿಯುತ, ಶಸ್ತ್ರರಹಿತವಾಗಿ ಪ್ರತಿಭಟಿಸುವವರನ್ನು ಕಾನೂನು ಬಾಹಿರವಾಗಿ ಬಂಧಿಸುವಂತಿಲ್ಲ': Supreme Court

 ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Published on: 
  • ಪ್ರತಿಭಟನಾಕಾರರನ್ನು ಕಾನೂನು ಬಾಹಿರವಾಗಿ ಬಂಧಿಸುವತಿಲ್ಲ.

  • ಮೆಟ್ರೋ, ರೈಲು ಸೇರಿದಂತೆ ಸಾರ್ವಜನಿಕ ಮುಕ್ತ ಸಂಚಾರಕ್ಕೆ ನಿರ್ದೇಶನ.

  • ಅನಾವಶ್ಯಕ ಬ್ಯಾರಿಕೇಡ್​ಗಳನ್ನು ತೆರವುಗೊಳಿಸುವಂತೆ ಆದೇಶಿಸಿದ ಸುಪ್ರೀಂ ಕೋರ್ಟ್.

ಶಾಂತಿಯುತವಾಗಿ, ಶಸ್ತ್ರರಹಿತವಾಗಿ ಸೇರಿರುವ ಜನರನ್ನು ಕಾನೂನು ಬಾಹಿರವಾಗಿ ಬಂಧಿಸುವಂತಿಲ್ಲ. ಅಗತ್ಯವಿಲ್ಲದ ಕಡೆ ಬ್ಯಾರಿಕೇಡ್ ಇಲ್ಲದಂತೆ ನೋಡಿಕೊಳ್ಳಲು, ದೆಹಲಿಯಲ್ಲಿ ಜನರ ಸುಗಮ ಸಂಚಾರಕ್ಕೆ ಅವಕಾಶ ನೀಡುವಂತೆ ಸುಪ್ರೀಂ ಕೋರ್ಟ್​ ಭಾನುವಾರ (ಅ.11) ನಿರ್ದೇಶಿಸಿದೆ.

ದೆಹಲಿಯ ಮೆಟ್ರೋ ಮತ್ತು ರೈಲು ಸೇವೆ ನಿರ್ಬಂಧ ವಿಧಿಸಬಾರದು ಎನ್ನುವುದು ನ್ಯಾಯಾಂಗ ನಿರ್ದೇಶನದ ಉಲ್ಲಂಘನೆ ಎಂದು ಆರೋಪಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ಸುಪ್ರೀಂ ಕೋರ್ಟ್​ ಕೇಂದ್ರ ಸರ್ಕಾರಕ್ಕೆ ನೋಟಿಸ್ ನೀಡಿದೆ.

ನ್ಯಾಯಮೂರ್ತಿಗಳಾದ ಜಾಯ್​ಮಾಲ್ಯ ಬಾಗ್ಚಿ ಮತ್ತು ವಿ. ಮೊಹನಾ ಅವರಿದ್ದ ಪೀಠವು ವಿಶೇಷ ವಿಚಾರಣೆ ನಡೆಸಿತು. ದೆಹಲಿ ಮೆಟ್ರೋ ಎಂದಿನಂತೆ ಕಾರ್ಯ ನಿರ್ವಹಿಸುವುದನ್ನು ಖಚಿತ ಪಡಿಸಿಕೊಳ್ಳುವಂತೆ ಸಾಲಿಟರ್​ ಜನರಲ್​​​ ತುಷಾರ್​ ಮೆಹ್ತಾ ಅವರಿಗೆ ಖಚಿತಪಡಿಸಿಕೊಳ್ಳುವಂತೆ ಸೂಚನೆ ಕೊಟ್ಟಿತ್ತು.

ನಿರ್ಬಂಧ ತೆರವುಗೊಳಿಸಲು ಸೂಚನೆ

ಸುಪ್ರೀಂ ಕೋರ್ಟ್ ಸುತ್ತಮುತ್ತ ಜಾರಿಯಲ್ಲಿರುವ ಬಿಎನ್‌ಎಸ್‌ಎಸ್‌ ಸೆಕ್ಷನ್‌ 163 ನಿರ್ಬಂಧ ತೆರವುಗೊಳಿಸುವಂತೆ. ಜೊತೆಗೆ ನ್ಯಾಯಾಲಯಕ್ಕೆ ಬರುವ ಮತ್ತು ಹೊರಹೋಗುವ ಜನರಿಗೆ ಯಾವುದೇ ಅಡ್ಡಿಯಾಗಬಾರದು ಎಂದು ನಿರ್ದೇಶಿಸಿದೆ.

ಅನಗತ್ಯ ಬ್ಯಾರಿಕೇಡ್ ಬೇಡ

ಕಾನೂನು ಮತ್ತು ಸುವ್ಯವಸ್ಥೆ ಗಮನದಲ್ಲಿಟ್ಟುಕೊಂಡು ಬ್ಯಾರಿಕೇಡ್‌ಗಳ ಅಗತ್ಯವನ್ನು ಮರುಪರಿಶೀಲಿಸಲು ಆದೇಶಿಸಿದೆ. ಜೊತೆಗೆ ಅವಶ್ಯಕತೆ ಇಲ್ಲದ ಕಡೆ ಬ್ಯಾರಿಕೇಡ್ ತೆಗೆದು ಹಾಕಿ ಸಂಚಾರ ನಿಯಮಗಳಿಗೆ ಅನುಗುಣವಾಗಿ ಮುಕ್ತ ಸಂಚಾರಕ್ಕೆ ಅವಕಾಶ ನೀಡಬೇಕು. ದೆಹಲಿಯಲ್ಲಿ ಇಂಟರ್‌ನೆಟ್‌ ಸೇವೆಗಳಿಗೆ ಯಾವುದೇ ಅಡ್ಡಿ ಉಂಟುಮಾಡಬಾರದು ಎಂದು ಕೇಂದ್ರಕ್ಕೆ ಸುಪ್ರೀಂ ಕೋರ್ಟ್​ ಹೇಳಿತು

ಕೇಂದ್ರಕ್ಕೆ ನೋಟಿಸ್

ದೆಹಲಿ ಪ್ರತಿಭಟನೆಗೆ ಸಂಬಂಧಿಸಿದ ಆದೇಶ ಪಾಲಿಸದ ಆರೋಪ ಕೇಳಿ ಬಂದಿರುವ ಹಿನ್ನೆಲೆ, ನ್ಯಾಯಾಂಗ ನಿಂದನೆ ಕುರಿತು ಉತ್ತರಿಸುವಂತೆ ದೆಹಲಿ ಸರ್ಕಾರಕ್ಕೆ ಸುಪ್ರೀಂಕೋರ್ಟ್​ ನೋಟಿಸ್ ನೀಡಿದೆ. ಶಾಂತಿಯುತವಾಗಿ ಪ್ರತಿಭಟನೆ ನಡೆಸುವವರನ್ನು ವಶಕ್ಕೆ ಪಡೆಯಬಾರದು. ಅಕ್ರಮವಾಗಿ ವಶಕ್ಕೆ ಪಡೆಯಬಾರದು ಎಂದು ಕೇಂದ್ರ ಗೃಹ ಇಲಾಖೆಗೆ ಸುಪ್ರೀಂಕೋರ್ಟ್ ಆದೇಶಿಸಿದೆ.

ಸಾರ್ವಜನಿಕ ಮುಕ್ತ ಸೇವೆಗೆ ಒತ್ತಾಯ

ದೆಹಲಿಯಲ್ಲಿ ವಿಧಿಸಿದ್ದ ನಿರ್ಬಂಧ ತೆರವಿಗೆ ಕೋರ್ಟ್​ ಸೂಚನೆ ಕೊಟ್ಟಿದೆ. ಎಂದಿನಂತೆ ಮೆಟ್ರೋ ಮತ್ತು ರೈಲು ಸೇವೆಗಳು ಕಾರ್ಯನಿರ್ವಹಿಸಬೇಕು. ಇಂಟರ್​ನೆಟ್​​​ ಸೌಲಭ್ಯಗಳಿಗೆ ಯಾವುದೇ ಅಡ್ಡಿಪಡಿಸುವಂತಿಲ್ಲ. ದೆಹಲಿಯಲ್ಲಿ ವಾಹನಗಳ ಮುಕ್ತ ಸಂಚಾರಕ್ಕೆ ಅವಕಾಶ ನೀಡಬೇಕು. ಅಗತ್ಯ ಇರುವ ಕಡೆ ಮಾತ್ರ ಬ್ಯಾರಿಕೇಡ್‌ಗಳ ಅಳವಡಿಕೆ ಬಗ್ಗೆ ಪರಿಶೀಲಿಸಬೇಕು. ವಕೀಲರು, ಪತ್ರಕರ್ತರು ಮತ್ತು ಇತರರು ತಮ್ಮ ವೃತ್ತಿಪರ ಕರ್ತವ್ಯ ನಿರ್ವಹಿಸಲು ಅಡ್ಡಿ ಪಡಿಸುವಂತಿಲ್ಲ ಎಂದು ಎಂದು ಕೇಂದ್ರ ಗೃಹ ಇಲಾಖೆ ಕಾರ್ಯದರ್ಶಿಗೆ ಸುಪ್ರೀಂಕೋರ್ಟ್ ನಿರ್ದೇಶಿಸಿದೆ.

ಸಾಮಾನ್ಯ ಜನರು ಸೇರಿ ಧರಣಿನಿರತರ ಫೋನ್​ ವಶಕ್ಕೆ ಪಡೆದ ವಿಚಾರದ ಬಗ್ಗೆ ಪ್ರಸ್ತಾಪ ಬಂದಾಗ ಈ ಅರ್ಜಿ ವಿಚಾರಣೆ ಮಂಗಳವಾರ(ಅ.13) ನಡೆಸೋದಾಗಿ ಸುಪ್ರೀಂ ಕೋರ್ಟ್​ ಹೇಳಿತು. ಮಂಗಳವಾರಕ್ಕೆ ವಿಚಾರಣೆಯನ್ನು ಕೋರ್ಟ್ ಮುಂದೂಡಿದೆ, (ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net