success story; ಕೌನ್ ಬನೇಗಾ ಕರೋಡ್‌ ಪತಿಯಲ್ಲಿ 5 ಕೋಟಿ ರೂ. ವಿಜೇತ ಸುಶೀಲ್ ಕುಮಾರ್ ಸರ್ಕಾರಿ ಹುದ್ದೆಗೆ ಆಯ್ಕೆ

Remember First KBC Rs 5 Crore Winner Sushil Kumar
Published on

ನವದೆಹಲಿ: ಕೌನ್ ಬನೇಗಾ ಕರೋಡ್ ಪತಿ ರಸಪ್ರಶ್ನೆ ಕಾರ್ಯಕ್ರಮದ ಐದನೇ ಸೀಸನ್‌ನಲ್ಲಿ ಐದು ಕೋಟಿ ರೂಪಾಯಿ ಗೆದ್ದ ಮೊದಲ ವಿಜೇತ ಸುಶೀಲ್ ಕುಮಾರ್ ಅವರು ಬಿಹಾರ ಲೋಕಸೇವಾ ಆಯೋಗದ ಶಿಕ್ಷಕರ ನೇಮಕಾತಿ ಪರೀಕ್ಷೆಯಲ್ಲಿ ತೇರ್ಗಡೆಯಾಗುವ ಮೂಲಕ ಮತ್ತೊಮ್ಮೆ ಸುದ್ದಿಯಾಗಿದ್ದಾರೆ.

ಕಂಪ್ಯೂಟರ್ ಆಪರೇಟರ್ ಆಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಮೋತಿಹಾರಿಯ ಹನುಮಾನ್ ನಗರದ ವಿನಮ್ರ ಕುಟುಂಬಕ್ಕೆ ಸೇರಿದ ಸುಶೀಲ್, ಕಂಪ್ಯೂಟರ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದರು. ಅಲ್ಲಿಂದ ಕೌನ್ ಬನೇಗಾ ಕರೋಡ್‌ಪತಿಯಲ್ಲಿ ಹಾಟ್ ಸೀಟ್ ತಲುಪಿ ಪ್ರಥಮ ಬಾರಿಗೆ ಐದು ಕೋಟಿ ರೂಪಾಯಿ ಗೆಲ್ಲುವ ಮೂಲಕ ಎಲ್ಲರನ್ನೂ ದಂಗುಬಡಿಸಿದರು. ಈಗ ಅವರ ಶ್ರಮಕ್ಕೆ ತಕ್ಕ ಫಲ ಸಿಕ್ಕಿದ್ದು, ಬಿಪಿಎಸ್ ಸಿ ಶಿಕ್ಷಕರಾಗಿದ್ದಾರೆ.

ಕೌನ್ ಬನೇಗಾ ಕರೋಡ್ ಪತಿ ಹಾಟ್ ಸೀಟ್ ತಲುಪಿ ಮೊದಲ ಬಾರಿಗೆ ಐದು ಕೋಟಿ ರೂಪಾಯಿ ಗೆಲ್ಲುವ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದರು. ಈಗ ಅವರ ಶ್ರಮಕ್ಕೆ ತಕ್ಕ ಫಲ ಸಿಕ್ಕಿದ್ದು, ಬಿಪಿಎಸ್ ಸಿ ಶಿಕ್ಷಕರಾಗಿದ್ದಾರೆ. ಮಿಲಿಯನೇರ್ ಸುಶೀಲ್ ಕುಮಾರ್ ಅವರು ಉನ್ನತ ಆದರ್ಶಗಳೊಂದಿಗೆ ಸರಳ ಜೀವನ ನಡೆಸುತ್ತಿದ್ದಾರೆ. ಗುಬ್ಬಚ್ಚಿಗಳ ರಕ್ಷಣೆ ಹಾಗೂ ಪರಿಸರ ರಕ್ಷಣೆಗಾಗಿ ಶ್ರಮಿಸುತ್ತಿದ್ದಾರೆ.

ಕೌನ್ ಬನೇಗಾ ಕರೋಡ್‌ಪತಿಯಲ್ಲಿ ಐದು ಕೋಟಿ ರೂಪಾಯಿಗಳ ಮೊದಲ ವಿಜೇತರಾದ ಸುಶೀಲ್ ಕುಮಾರ್ ಅವರು ಇತ್ತೀಚೆಗೆ ಬಿಹಾರ ಲೋಕಸೇವಾ ಆಯೋಗದ ಶಿಕ್ಷಕರ ನೇಮಕಾತಿ ಪರೀಕ್ಷೆಯಲ್ಲಿ ತೇರ್ಗಡೆಯಾದರು ಮತ್ತು ಶಿಕ್ಷಕರಾಗಿ ಕೆಲಸ ಗಿಟ್ಟಿಸಿಕೊಂಡಿದ್ದಾರೆ.

ಸುಶೀಲ್ ಕುಮಾರ್ ಮಾತನಾಡಿ, ಕೌನ್ ಬನೇಗಾ ಕರೋಡ್ ಪತಿ ಗೆದ್ದ ನಂತರವೂ ಓದು ಮುಂದುವರಿಸಿ ಶಿಕ್ಷಣ ಕ್ಷೇತ್ರಕ್ಕೆ ಕಾಲಿಡುವ ಗುರಿ ಹೊಂದಿದ್ದೇನೆ. ಸ್ವಯಂ ಅಧ್ಯಯನದಲ್ಲಿ ಕಾಲ ಕಳೆಯತೊಡಗಿದೆ. ಸ್ಪಷ್ಟ ಗುರಿ ಹೊಂದಿರುವವರು ಯಾವಾಗಲೂ ಯಶಸ್ಸನ್ನು ಸಾಧಿಸುತ್ತಾರೆ ಎಂದು ಹೇಳಿದರು.

ಸುಶೀಲ್ ಕುಮಾರ್ ಈ ತಿಂಗಳು ಬಾಬಾ ಸಾಹೇಬ್ ಭೀಮರಾವ್ ಅಂಬೇಡ್ಕರ್ ವಿಶ್ವವಿದ್ಯಾನಿಲಯದಲ್ಲಿ ಸೈಕಾಲಜಿ ಪಿಎಚ್‌ಡಿ ಕೋರ್ಸ್‌ಗೆ ಸೇರಿದರು. ಶಿಕ್ಷಕರ ನೇಮಕಾತಿ ಪರೀಕ್ಷೆಯಲ್ಲಿ ಉತ್ತಮ  ಯಾಂಕ್ ಪಡೆದು ಕೆಲಸ ಗಿಟ್ಟಿಸಿಕೊಂಡ ಸುಶೀಲ್ ಕುಮಾರ್ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net