ರಂಗನಾಥಸ್ವಾಮಿ ಮಠದಲ್ಲಿ ಧಾರ್ಮಿಕ ಕಾರ್ಯಕ್ರಮ 14ರಿಂದ

Published on

ರಾಣೆಬೆನ್ನೂರ: ಇಲ್ಲಿಯ ರಂಗನಾಥ ನಗರದ ನಿರಂಜನ ಮೌನಿ ಶಿವಯೋಗಿಶ್ವರ ಸದ್ಗುರು ರಂಗನಾಥಸ್ವಾಮಿ ಮಠದಲ್ಲಿ ಶ್ರಾವಣ ಮಾಸದ ಮುಕ್ತಾಯದ ಪ್ರಯುಕ್ತ ಸೆ. 14 ಹಾಗೂ 15ರಂದು ವಿವಿಧ ಧಾರ್ಮಿಕ ಕಾರ್ಯಕ್ರಮ ಜರುಗಲಿವೆ.
ಸೆ. 14ರಂದು ಬೆಳಗ್ಗೆ 6.30ಕ್ಕೆ ಶಿವನಾಮ ಸ್ಮರಣೆ, ಭಜನೆ ಪ್ರಾರಂಭವಾಗಿ ಸೆ. 15ರಂದು ಬೆಳಗ್ಗೆ 6 ಗಂಟೆಗೆ ಮುಕ್ತಾಯವಾಗುವುದು.ನಂತರ ಸ್ವಾಮಿಯ ಸೇವಾ ಕಾರ್ಯಕ್ರಮ ನಡೆದು ಮಧ್ಯಾಹ್ನ 1.30ಕ್ಕೆ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಲಿದೆ. ಅಂದು ರಾತ್ರಿ 8 ಗಂಟೆಗೆ ರಂಗನಾಥ ಸ್ವಾಮಿಯ ವಿಶೇಷ ಪೂಜೆಯ ವಿಭೂತಿ (ಭಸ್ಮ) ವಿತರಣೆ ಕಾರ್ಯಕ್ರಮ ಜರುಗಲಿದೆ ಎಂದು ಮಠದ ಸೇವಾ ಸಮಿತಿ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net