'ಆಪರೇಷನ್ ಸಿಂಧೂರ್' ಟ್ರೇಡ್‌ಮಾರ್ಕ್ ಅರ್ಜಿಯನ್ನು ವಾಪಸ್​ ಪಡೆದ ರಿಲಯನ್ಸ್| Reliance

reliance
Published on

ಭಾರತೀಯ ಸೇನೆಯು ಪಾಕಿಸ್ತಾನದಲ್ಲಿನ ಭಯೋತ್ಪಾದಕ ಮೂಲಸೌಕರ್ಯಗಳ ಮೇಲೆ ಸರಣಿ ದಾಳಿಗಳನ್ನು ನಡೆಸಿದ ನಂತರ, ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಸೇರಿದಂತೆ ಐದು ಕಂಪನಿಗಳು ಆಪರೇಷನ್ ಸಿಂಧೂರ್' ನ ಟ್ರೇಡ್‌ಮಾರ್ಕ್ ನೋಂದಣಿಯನ್ನು ಕೋರಿದ್ದವು. ಅಂದಹಾಗೆ ಗುರುವಾರ (8) ರಿಲಯನ್ಸ್ ಇಂಡಸ್ಟ್ರೀಸ್‌ನ ಒಂದು ಘಟಕವಾದ ಜಿಯೋ ಸ್ಟುಡಿಯೋಸ್, ತನ್ನ ಟ್ರೇಡ್‌ಮಾರ್ಕ್ ಅರ್ಜಿಯನ್ನು ಹಿಂತೆಗೆದುಕೊಂಡಿದೆ. ಯಾವುದೇ ಅನುಮತಿಯಿಲ್ಲದೆ ಕಿರಿಯ ಉದ್ಯೋಗಿಯೊಬ್ಬರು ಅಜಾಗರೂಕತೆಯಿಂದ ಅರ್ಜಿ ಸಲ್ಲಿಸಿದ್ದರು ಎಂದು ಹೇಳಲಾಗಿದೆ.

Reliance| ಪಾಕಿಸ್ತಾನದಲ್ಲಿ ಭಾರತದ ಮಿಲಿಟರಿ ದಾಳಿಯ ಸಂಕೇತನಾಮ 'ಆಪರೇಷನ್ ಸಿಂಧೂರ್' ಎಂಬ ಪದದ ಟ್ರೇಡ್‌ಮಾರ್ಕ್ ಅರ್ಜಿಯನ್ನು ರಿಲಯನ್ಸ್ ಇಂಡಸ್ಟ್ರೀಸ್ ಹಿಂತೆಗೆದುಕೊಂಡಿದೆ.

ಮುಖೇಶ್ ಅಂಬಾನಿ ಹೇಳಿದ್ದೇನು?

ನಮ್ಮ ಭಾರತೀಯ ಸಶಸ್ತ್ರ ಪಡೆಗಳ ಕಾರ್ಯಾಚರಣೆ ಸಿಂಧೂರ್ ಬಗ್ಗೆ ನಮಗೆ ತುಂಬಾ ಹೆಮ್ಮೆ ಇದೆ. ಎಲ್ಲಾ ರೀತಿಯ ಭಯೋತ್ಪಾದನೆಯ ಪಿಡುಗಿನ ವಿರುದ್ಧ ಭಾರತವು ಒಗ್ಗಟ್ಟಿನಿಂದ, ದೃಢನಿಶ್ಚಯದಲ್ಲಿ ಅಚಲವಾಗಿ ನಿಂತಿದೆ. ಪ್ರಧಾನಿ ನರೇಂದ್ರ ಮೋದಿಯವರ ದಿಟ್ಟ ಮತ್ತು ನಿರ್ಣಾಯಕ ನಾಯಕತ್ವದಲ್ಲಿ, ಭಾರತೀಯ ಸಶಸ್ತ್ರ ಪಡೆಗಳು ಗಡಿಯಾಚೆಯಿಂದ ಬರುವ ಪ್ರತಿಯೊಂದು ಪ್ರಚೋದನೆಗೂ ನಿಖರತೆ ಮತ್ತು ಶಕ್ತಿಯಿಂದ ಪ್ರತಿಕ್ರಿಯಿಸಿವೆ. ಭಯೋತ್ಪಾದನೆಯ ಎದುರು ಭಾರತ ಎಂದಿಗೂ ಮೌನವಾಗಿರುವುದಿಲ್ಲ ಮತ್ತು ನಮ್ಮ ನೆಲದ ಮೇಲೆ, ನಮ್ಮ ನಾಗರಿಕರ ಮೇಲೆ ಅಥವಾ ನಮ್ಮ ರಾಷ್ಟ್ರವನ್ನು ರಕ್ಷಿಸುವ ಧೈರ್ಯಶಾಲಿ ಪುರುಷರು ಮತ್ತು ಮಹಿಳೆಯರ ಮೇಲೆ ಒಂದೇ ಒಂದು ದಾಳಿಯನ್ನು ನಾವು ಸಹಿಸುವುದಿಲ್ಲ ಎಂದು ಪ್ರಧಾನಿ ಮೋದಿಯವರ ನಾಯಕತ್ವವು ಪ್ರದರ್ಶಿಸಿದೆ.

ನಮ್ಮ ಶಾಂತಿಗೆ ಇರುವ ಪ್ರತಿಯೊಂದು ಬೆದರಿಕೆಯನ್ನು ದೃಢ ಮತ್ತು ನಿರ್ಣಾಯಕ ಕ್ರಮದಿಂದ ಎದುರಿಸಲಾಗುವುದು ಎಂದು ಕಳೆದ ಕೆಲವು ದಿನಗಳು ತೋರಿಸಿವೆ. ನಮ್ಮ ರಾಷ್ಟ್ರದ ಏಕತೆ ಮತ್ತು ಸಮಗ್ರತೆಯನ್ನು ರಕ್ಷಿಸುವಲ್ಲಿ ರಿಲಯನ್ಸ್ ಕುಟುಂಬವು ಯಾವುದೇ ಕ್ರಮವನ್ನು ಬೆಂಬಲಿಸಲು ಸಿದ್ಧವಾಗಿದೆ. ನಮ್ಮ ಸಹ ಭಾರತೀಯರು ನಂಬುವಂತೆ ನಾವು ಭಾರತದ ಶಾಂತಿಯನ್ನು ಬಯಸುತ್ತೇವೆ,  ಸಾರ್ವಭೌಮತ್ವವನ್ನು ಬಲಿಕೊಡದೆ ಒಟ್ಟಾಗಿ ನಾವು ನಿಂತು ಹೋರಾಡುವ ಮೂಲಕ ನಾವು ಜಯಗಳಿಸುತ್ತೇವೆ ಜೈ ಹಿಂದ್, ಜೈ ಹಿಂದ್ ಕಿ ಸೇನಾ ಎಂದು ಮುಖೇಶ್​​ ಅಂಬಾನಿ ಹೇಳಿದ್ದಾರೆ.

ಏನಿದು ಆಪರೇಷನ್​ ಸಿಂಧೂರ್​?

(ಏಜೆನ್ಸೀಸ್)

ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ಪಾಕಿಸ್ತಾನದಲ್ಲಿ ಭಾರತ ಇತ್ತೀಚೆಗೆ ನಡೆಸಿದ ಮಿಲಿಟರಿ ಕಾರ್ಯಾಚರಣೆಯನ್ನು ಆಪರೇಷನ್ ಸಿಂಧೂರ್ ಎಂದು ಕರೆಯಲಾಗುತ್ತಿದೆ. ಈ ಪದವು ಧೈರ್ಯ ಮತ್ತು ದೇಶಭಕ್ತಿಯ ಸಂಕೇತವಾಗಿ ಮಾರ್ಪಟ್ಟಿದ್ದು, ದೇಶಾದ್ಯಂತ ವ್ಯಾಪಕವಾಗಿ ಗುರುತಿಸಲ್ಪಟ್ಟಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net