ಕೋವಿಡ್​-19 ಲಸಿಕೆ ಸಿದ್ಧವಾಗುತ್ತಲೇ ಭಾರತಕ್ಕೆ ತರಲಿದೆ ರಿಲಯನ್ಸ್​ ಇಂಡಸ್ಟ್ರೀಸ್​

nita ambani
Published on

ನವದೆಹಲಿ: ವಿಶ್ವದಲ್ಲಿ ಕೋವಿಡ್​-19 ಲಸಿಕೆ ಎಲ್ಲೆ ತಯಾರಾಗಲಿ, ಅದು ತಯಾರಾಗುತ್ತಲೇ ಅದನ್ನು ರಿಲಯನ್ಸ್​ ಸಂಸ್ಥೆ​ ಭಾರತದಲ್ಲಿ ತಯಾರಿಸಲಿದೆ ಎಂದು ರಿಲಯನ್ಸ್​ ಇಂಡಸ್ಟ್ರೀಸ್​ ಲಿಮಿಟೆಡ್​ನ ನಿರ್ದೇಶಕಿ ನೀತಾ ಅಂಬಾನಿ ಹೇಳಿದ್ದಾರೆ.

ರಿಲಯನ್ಸ್​​ ಇಂಡಸ್ಟ್ರೀಸ್​ನ ನಿರ್ದೇಶಕಿ ಆಗಿರುವ ಅವರು ಗುರುವಾರ ನಡೆದ ರಿಲಯನ್ಸ್​ ಇಂಡಸ್ಟ್ರೀಸ್​ನ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮಾತನಾಡಿದರು. ಕೋವಿಡ್​-19 ಲಸಿಕೆ ಸಿದ್ಧವಾಗುತ್ತಲೇ ಭಾರತದಲ್ಲಿ ಅಗತ್ಯ ಇರುವವರಿಗೆಲ್ಲ ಆ ಚುಚ್ಚುಮದ್ದು ತಲುಪುವಂತೆ ರಿಲಯನ್ಸ್​ ಮಾಡಲಿದೆ ಎಂದು ಹೇಳಿದರು.

ರಾಷ್ಟ್ರದಲ್ಲಿ ಕರೊನಾ ಪಿಡುಗು ಹಬ್ಬುತ್ತಲೇ ರಿಲಯನ್ಸ್​ ಸಂಸ್ಥೆ ಮುಂಬೈನಲ್ಲಿ ಕೋವಿಡ್​-19 ವಿಶೇಷ ಆಸ್ಪತ್ರೆಗೆ ತೆಗೆದು 100 ಹಾಸಿಗೆಗಳನ್ನು ವ್ಯವಸ್ಥೆಗೊಳಿಸಿತು. ನಮ್ಮ ಆಸ್ಪತ್ರೆಯ ವೈದ್ಯರು ಮತ್ತು ಶುಶ್ರೂಷಕಿಯರು ನಿಸ್ವಾರ್ಥವಾಗಿ ಮತ್ತು ನಿರಂತರವಾಗಿ ಸೇವೆ ಸಲ್ಲಿಸುವ ಮೂಲಕ ಜನರ ರಕ್ಷಣೆಗೆ ಶ್ರಮಿಸುತ್ತಿದ್ದಾರೆ ಎಂದರು.

ಕರೊನಾ ಸೋಂಕು ಹೆಚ್ಚಾದ ಸಂದರ್ಭದಲ್ಲಿ ದೇಶದಲ್ಲಿ ಪಿಪಿಇ ಕಿಟ್​ಗಳ ಕೊರತೆ ಎದುರಾಗಿತ್ತು. ಇದರ ಉತ್ಪಾದನೆ ಬಹುದೊಡ್ಡ ಸವಾಲಾಗಿತ್ತು. ನಮ್ಮ ಉತ್ಪಾದನಾ ಘಟಕಗಳಲ್ಲಿ ಅಗತ್ಯ ಮಾರ್ಪಾಡುಗಳನ್ನು ಮಾಡಿಕೊಂಡು ಪಿಪಿಇ ಕಿಟ್​ಗಳ ಜತೆಗೆ ಎನ್​95 ಮಾಸ್ಕ್​ಗಳ ಉತ್ಪಾದನೆಯನ್ನೂ ಹೆಚ್ಚಿಸಲಾಯಿತು. ಇದೆಲ್ಲವನ್ನೂ ದಾಖಲೆಯ ಸಮಯದೊಳಗೆ ಮಾಡಲಾಯಿತು ಎಂದು ಹೆಮ್ಮೆಪಟ್ಟುಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net