ರಿಲಯನ್ಸ್​ ಜಗತ್ತಿನ 2ನೇ ಅತಿ ದೊಡ್ಡ ಇಂಧನ ಕಂಪನಿ

Rilance
Published on

ಮುಂಬೈ: ಮುಕೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಇಂಡಸ್ಟ್ರೀಸ್, ಜಗತ್ತಿನ ಎರಡನೇ ಅತಿ ದೊಡ್ಡ ಇಂಧನ ಕಂಪನಿಯಾಗಿದೆ. ತನ್ನ ಸಂಪತ್ತಿಗೆ  59,785 ಕೋಟಿ ರೂ. ಸೇರಿಸಿಕೊಂಡ ರಿಲಯನ್ಸ್​ನ ಮಾರುಕಟ್ಟೆ ಮೌಲ್ಯ   14,12,671 ಕೋಟಿ ರೂ.ಗೆ ಹೆಚ್ಚಳ ಕಾಣುವ ಮೂಲಕ ಈ ದಾಖಲೆಗೆ ಪಾತ್ರವಾಗಿದೆ. ಜಗತ್ತಿನಾದ್ಯಂತದ ಪ್ರಮುಖ ಹೂಡಿಕೆದಾರರು ರಿಲಯನ್ಸ್​ನಲ್ಲಿ ಬಂಡವಾಳ ಹೂಡುತ್ತಿರುವುದರಿಂದ ಮುಕೇಶ್ ಉದ್ಯಮ ಸಾಮ್ರಾಜ್ಯ ವಿಸ್ತರಣೆಯಾಗುತ್ತಿದೆ.

ಎಕ್ಸಾನ್​ವೊಬಿಲ್ ಕಾರ್ಪೆರೇಷನ್ ಕಂಪನಿಯನ್ನು ಎರಡನೇ ಸ್ಥಾನದಿಂದ ಕೆಳಗಿಳಿಸಿ ರಿಲಯನ್ಸ್ ಆ ಸ್ಥಾನವನ್ನು ಅಲಂಕರಿಸಿದೆ. ಅದು ಸೌದಿ ಅರೇಬಿಯಾದ ಇಂಧನ ದೈತ್ಯ ಆರಾಮ್ಕೊ ಮೊದಲ ಸ್ಥಾನದಲ್ಲಿದೆ. 1.76 ಟ್ರಿಲಿಯನ್ ಡಾಲರ್ ಮಾರುಕಟ್ಟೆ ಮೌಲ್ಯ ಹೊಂದಿದೆ. ರಿಲಯನ್ಸ್ ಷೇರುಗಳು ಈ ವರ್ಷ ಶೇಕಡ 43ಕ್ಕೆ ಜಿಗಿತ ಕಂಡಿದೆ. ಆದರೆ ಎಕ್ಸಾನ್​ನ ಷೇರುಗಳು ಶೇಕಡ 39 ಕುಸಿದಿದೆ. ಅರಾಮ್ಕೊ ಜಗತ್ತಿನ ಅತಿ ದೊಡ್ಡ ಇಂಧನ ಕಂಪನಿಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net