ರಿಲಯನ್ಸ್ ಇಂಡಸ್ಟ್ರೀಸ್ ನಿಂದ 1:1 ಅನುಪಾತದಲ್ಲಿ ಬೋನಸ್ ಷೇರು ವಿತರಣೆ ಪ್ರಸ್ತಾವ

reliance
Published on

ಮುಂಬೈ: ರಿಲಯನ್ಸ್ ಇಂಡಸ್ಟ್ರೀಸ್ ಷೇರುದಾರರಿಗೆ ಬಂಪರ್ ಸುದ್ದಿ ಇಲ್ಲಿದೆ. ಪ್ರತಿ ಈಕ್ವಿಟಿ ಷೇರಿಗೆ ಸಮನಾಗಿ ಅಂದರೆ, ಪ್ರತಿ ಒಂದು ಷೇರಿಗೆ ಒಂದು ಬೋನಸ್ ಷೇರು ನೀಡುವುದಕ್ಕೆ ಗುರುವಾರದಂದು ಪ್ರಸ್ತಾವ ಮಾಡಿದೆ.1:1 ರ ಅನುಪಾತದಲ್ಲಿ ಷೇರುಗಳ ಬೋನಸ್ ವಿತರಣೆಯ ಅನುಮೋದನೆಯನ್ನು ಪರಿಗಣಿಸಲು ಮತ್ತು ಷೇರುದಾರರಿಗೆ ಶಿಫಾರಸು ಮಾಡಲು ಸೆಪ್ಟೆಂಬರ್ 5, 2024 ರಂದು ಗುರುವಾರ ಸಭೆ ಸೇರಲಿದೆ ಎಂದು ಘೋಷಿಸಿತು.

ಪ್ರತಿ ಒಂದು ಷೇರಿಗೆ ಒಂದು ಬೋನಸ್ ಷೇರು ನೀಡುವುದಕ್ಕೆ ಗುರುವಾರದಂದು ಪ್ರಸ್ತಾವ ಮಾಡಿ, ಸೆಪ್ಟೆಂಬರ್ ಐದನೇ ತಾರೀಕಿನ ಗುರುವಾರದಂದು ಮಂಡಳಿ ನಿರ್ದೇಶಕರು ಸಭೆಯನ್ನು ಸೇರಲಿದೆ. ಈ ಶಿಫಾರಸಿಗೆ ಅನುಮೋದನೆ ನೀಡುವ ನಿಟ್ಟಿನಲ್ಲಿ ಚರ್ಚೆ ನಡೆಸಲಿದ್ದಾರೆ.

ಅಂದಹಾಗೆ 1:1 ಅನುಪಾತದಲ್ಲಿ ರಿಲಯನ್ಸ್ ಷೇರುಗಳನ್ನು ಬೋನಸ್ ರೂಪದಲ್ಲಿ ವಿತರಿಸುವುದಕ್ಕೆ ಶಿಫಾರಸು ಮಾಡಲಾಗಿದೆ.ಈ ಪ್ರಕಟಣೆ ಹೊರಬರುವ ಹೊರಬರುವ ಹೊತ್ತಿಗೆ ರಿಲಯನ್ಸ್ ಇಂಡಸ್ಟ್ರೀಸ್ ಪ್ರತಿ ಷೇರು 3065 ರೂಪಾಯಿ ಆಸುಪಾಸಿನಲ್ಲಿ ಷೇರು ಮಾರುಕಟ್ಟೆಯಲ್ಲಿ ವಹಿವಾಟು ನಡೆಸುತ್ತಿತ್ತು. 65 ರೂಪಾಯಿಗೂ ಹೆಚ್ಚು ಒಂದೇ ದಿನದಲ್ಲಿ ಬೆಲೆ ಏರಿಕೆ ಕಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net