ರಿಲಯನ್ಸ್ ಕಾರ್ಯನಿರ್ವಾಹಕ ನಿರ್ದೇಶಕರಾದ ಅನಂತ್ ಅಂಬಾನಿಗೆ ಲಾಭದ ಕಮಿಷನ್ ಜೊತೆ 10-20 ಕೋಟಿ ರೂ. ಸಂಬಳ| Anant Ambani

Akash Ananth and Isha Ambani
ಆಕಾಶ್, ಅನಂತ್, ಇಶಾ ಅಂಬಾನಿ
Published on

Anant Ambani : ರಿಲಯನ್ಸ್ ಇಂಡಸ್ಟ್ರೀಸ್‌ನ ಪ್ರಮುಖ ಕಾರ್ಯನಿರ್ವಾಹಕ ನಿರ್ದೇಶಕರಾಗಿ ನೇಮಕಗೊಂಡ ಮೂವರು ಸಹೋದರರಲ್ಲಿ ಮೊದಲಿಗರಾದ ಅನಂತ್ ಅಂಬಾನಿಗೆ ವಾರ್ಷಿಕವಾಗಿ 10-20 ಕೋಟಿ ರೂ. ಸಂಬಳ ಮತ್ತು ಕಂಪನಿಯ ಲಾಭದ ಮೇಲಿನ ಕಮಿಷನ್ ಸೇರಿದಂತೆ ಹಲವಾರು ಸವಲತ್ತುಗಳನ್ನು ನೀಡಲಾಗುವುದು ಎಂದು ಷೇರುದಾರರ ಸೂಚನೆಯಲ್ಲಿ ತಿಳಿಸಲಾಗಿದೆ.

ಅಂಚೆ ಮತದಾನದಲ್ಲಿ ಅನಂತ್ ಅವರ ಸಂಬಳ, ಮತ್ತು ಭತ್ಯೆಗಳು ವಾರ್ಷಿಕ 10 ಕೋಟಿಯಿಂದ 20 ಕೋಟಿ ರೂ.ಗಳ ವ್ಯಾಪ್ತಿಯಲ್ಲಿರುತ್ತವೆ ಎಂದು ರಿಲಯನ್ಸ್ ಹೇಳಿದೆ. ಭತ್ಯೆಗಳು ವಸತಿ ಅಥವಾ ಅದರ ಬದಲಾಗಿ ಮನೆ ಬಾಡಿಗೆ ಭತ್ಯೆಯನ್ನು ಒಳಗೊಂಡಿರುತ್ತವೆ. ಮನೆ ನಿರ್ವಹಣಾ ಭತ್ಯೆ ಜೊತೆಗೆ ವೆಚ್ಚಗಳ ಮರುಪಾವತಿ, ಅನಿಲ, ವಿದ್ಯುತ್, ನೀರು, ಪೀಠೋಪಕರಣಗಳು ಮತ್ತು ದುರಸ್ತಿಗಳ ಬಳಕೆಗಾಗಿ ಭತ್ಯೆಗಳು ಮತ್ತು ಕೆಲಸಗಾರರು ಸೇರಿದಂತೆ ಸ್ವಯಂ ಮತ್ತು ಕುಟುಂಬಕ್ಕೆ ಪ್ರಯಾಣ ರಿಯಾಯಿತಿಯನ್ನು ನೀಡಲಾಗಿದೆ ಎಂದು ಹೇಳಿದೆ.

ಕಾರ್ಯನಿರ್ವಾಹಕ ನಿರ್ದೇಶಕರಾಗಿ, 30 ವರ್ಷದ ಅನಂತ್ ಅಂಬಾನಿ, ಸಂಬಳ ಮತ್ತು ಇತರ ಸವಲತ್ತುಗಳಿಗೆ ಅರ್ಹರಾಗಿದ್ದಾರೆ. ರಿಲಯನ್ಸ್ ಇಂದು (29) ಸ್ಟಾಕ್ ಎಕ್ಸ್ಚೇಂಜ್ ನೋಟಿಸ್‌ನಲ್ಲಿ ಅಂಚೆ ಮತದಾನದ ಮೂಲಕ ನೇಮಕಾತಿಗೆ ಷೇರುದಾರರ ಅನುಮೋದನೆಯನ್ನು ಕೋರಲಾಗಿದೆ ಎಂದು ತಿಳಿಸಿದೆ.

ಏಷ್ಯಾದ ಅತ್ಯಂತ ಶ್ರೀಮಂತ ಮೂವರು ಮಕ್ಕಳಾದ ಆಕಾಶ್, ಇಶಾ ಮತ್ತು ಅನಂತ್ ಅವರನ್ನು ಈ ವರ್ಷದ ಏಪ್ರಿಲ್‌ನಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಕಾರ್ಯನಿರ್ವಾಹಕ ನಿರ್ದೇಶಕರನ್ನಾಗಿ ನೇಮಕ ಮಾಡಲಾಯ್ತು.

ವ್ಯಾಪಾರ ಪ್ರವಾಸಗಳಲ್ಲಿ ಅವರ ಸಂಗಾತಿ ಮತ್ತು ಸಹಾಯಕರಿಗೆ ಪ್ರಯಾಣ, ಊಟ ಮತ್ತು ವಸತಿ ಸೇರಿದಂತೆ ಖರ್ಚುಗಳನ್ನು ಮರುಪಾವತಿಸಲು ಮತ್ತು ಕಂಪನಿಯ ವ್ಯವಹಾರ ಹಾಗೂ ಸಂವಹನ ವೆಚ್ಚಗಳಿಗಾಗಿ ನಿವಾಸದಲ್ಲಿ ಕಾರುಗಳನ್ನು ಒದಗಿಸಲು ಅವರು ಅರ್ಹರಾಗಿರುತ್ತಾರೆ. ಅವರು ವೈದ್ಯಕೀಯ ಮರುಪಾವತಿಗೆ ಅರ್ಹರಾಗಿರುತ್ತಾರೆ ಮತ್ತು ಅವರ ಕುಟುಂಬ ಸದಸ್ಯರಿಗೆ ಕಂಪನಿಯು ಏರ್ಪಡಿಸಿದ ಭದ್ರತೆಗೆ ಸಹ ಅರ್ಹರಾಗಿರುತ್ತಾರೆ. ಸಂಬಳ, ಭತ್ಯೆಗಳು ಜೊತೆಗೆ ಅನಂತ್ ಎಂ. ಅಂಬಾನಿ ನಿವ್ವಳ ಲಾಭದ ಆಧಾರದ ಮೇಲೆ ಸಂಭಾವನೆ ಪಡೆಯಲು ಅರ್ಹರಾಗಿರುತ್ತಾರೆ ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ.

(ಏಜೆನ್ಸೀಸ್)

ಇಶಾ ರಿಲಯನ್ಸ್ ರಿಟೇಲ್ ಮಂಡಳಿಯಲ್ಲಿದ್ದಾರೆ ಮತ್ತು ಹೊಸದಾಗಿ ರೂಪುಗೊಂಡ ಜಿಯೋ ಫೈನಾನ್ಷಿಯಲ್ ಸರ್ವೀಸಸ್‌ನ ಮಂಡಳಿಯಲ್ಲಿದ್ದಾರೆ. ಆಕಾಶ್ ಟೆಲಿಕಾಂಗಳ ಅಧ್ಯಕ್ಷರಾಗಿದ್ದಾರೆ. ಇನ್ನೂ ಅನಂತ್ ಅಂಬಾನಿ ಸಾಮಗ್ರಿಗಳು ಮತ್ತು ನವೀಕರಿಸಬಹುದಾದ ಇಂಧನ ಉದ್ಯಮಗಳ ಭಾಗವಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net