ರಿಲಯನ್ಸ್ ಜಿಯೋ ಬಂಪರ್ ಆಫರ್- ಹ್ಯಾಂಡ್‌ಸೆಟ್‌ ಜತೆ, ಅನಿಯಮಿತ ಕರೆ, 4ಜಿ ಡೇಟಾ...

Jio
Published on

ನವದೆಹಲಿ: ಜಿಯೋ ಫೋನ್ ಗ್ರಾಹಕರಿಗೆ ಮಾರ್ಚ್ 1ರಿಂದ 1,999 ರೂ.ನಲ್ಲಿ ಎರಡು ವರ್ಷಗಳ ಅನಿಯಮಿತ ಕರೆ, 4ಜಿ ಡೇಟಾ ಹಾಗೂ ಹೊಸ ಹ್ಯಾಂಡ್​ಸೆಟ್ ಕೊಡುಗೆ ನೀಡುವುದಾಗಿ ರಿಲಯನ್ಸ್ ಜಿಯೋ ಶುಕ್ರವಾರ ಘೋಷಿಸಿದೆ.

ಹೊಸ ಜಿಯೋಫೋನ್ ಬಳಕೆದಾರರಿಗಾಗಿ ಜಿಯೋ ಎರಡು ರೀತಿಯ ಪ್ಯಾಕೇಜ್ ಆರಂಭಿಸಲಿದೆ. ಎರಡು ವರ್ಷ ಅಥವಾ 24 ತಿಂಗಳ ವ್ಯಾಲಿಡಿಟಿಯ ಪ್ಯಾಕೇಜ್ ಅವುಗಳಲ್ಲಿ ಒಂದಾಗಿದೆ. ಈ ಯೋಜನೆಯಡಿ 1,999 ರೂ. ಪಾವತಿಸುವ ಜಿಯೋಫೋನ್​ನ ಹೊಸ ಗ್ರಾಹಕರು ಒಂದು ಜಿಯೋಫೋನ್ ಫೀಚರ್ ಫೋನ್ ಹ್ಯಾಂಡ್​ಸೆಟ್, ಅನಿಯಮಿತ ವಾಯ್್ಸ ಕಾಲ್ ಮತ್ತು 2ಜಿಬಿಯಷ್ಟು 4ಜಿ ಡೇಟಾ ಪಡೆಯಲಿದ್ದಾರೆ.

ಎರಡನೇ ಯೋಜನೆಯಲ್ಲಿ ಒಂದು ವರ್ಷ ಅಥವಾ 12 ತಿಂಗಳ ವ್ಯಾಲಿಡಿಟಿ ಇರುತ್ತದೆ.1,499 ರೂ. ಪಾವತಿಸುವ ಗ್ರಾಹಕರಿಗೆ ಒಂದು ಹೊಸ ಜಿಯೋಫೋನ್ ಫೀಚರ್ ಫೋನ್, ಅನಿಯಮಿತ ವಾಯ್್ಸ ಕಾಲ್ ಹಾಗೂ ಪ್ರತಿ ತಿಂಗಳು 2ಜಿಬಿಯಷ್ಟು 4ಜಿ ಡೇಟಾ ಲಭ್ಯವಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net