‘ನಾವು ಕಂಡ ಸಿದ್ದರಾಮಯ್ಯ-ತತ್ವ-ಸತ್ವದ ಸಂಗಮ’ ಬಿಡುಗಡೆ

CM Siddaramayya
Published on

ಮೈಸೂರು: ಆತ್ಮತೃಪ್ತಿ ಟ್ರಸ್ಟ್ ಹೊರ ತಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಕುರಿತ ‘ನಾವು ಕಂಡ ಸಿದ್ದರಾಮಯ್ಯ-ತತ್ವ-ಸತ್ವದ ಸಂಗಮ’ ಕೃತಿ ಬಿಡುಗಡೆ ಸಮಾರಂಭ ಮಾ.27ರಂದು ಸಂಜೆ 6 ಗಂಟೆಗೆ ನಗರದ ಕಲಾಮಂದಿರದಲ್ಲಿ ನಡೆಯಲಿದೆ ಎಂದು ಹಿರಿಯ ವಿಮರ್ಶಕ ಡಾ.ಸಿ.ನಾಗಣ್ಣ ತಿಳಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಸಚಿವೆ ಡಾ.ಬಿ.ಟಿ.ಲಲಿತಾ ನಾಯಕ್, ಶಾಸಕ ಕೆ. ಹರೀಶ್‌ಗೌಡ, ನಾಡೋಜ ಬರಗೂರು ರಾಮಚಂದ್ರಪ್ಪ ಭಾಗವಹಿಸಲಿದ್ದಾರೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸಿದ್ದರಾಮಯ್ಯ ಅವರು ಬುದ್ಧ, ಬಸವಣ್ಣ, ಕನಕ, ಅಂಬೇಡ್ಕರ್, ಡಿ.ದೇವರಾಜ ಅರಸು ಅವರ ತತ್ವಾದರ್ಶವನ್ನು ಹೇಗೆ ತಮ್ಮ ನೀತಿಗಳ ಮೂಲಕ ಪಾಲಿಸುತ್ತಿದ್ದಾರೆ ಎಂಬ ವಿಶ್ಲೇಷಣೆ ಪುಸ್ತಕದಲ್ಲಿದೆ. ಪುಸ್ತಕ 150 ಪುಟಗಳದಾಗಿದ್ದು, ದರ 490 ರೂ.ಗಳಾಗಿದೆ. ಒಟ್ಟು ಐವರು ಕೃತಿ ರಚಿಸಿದ್ದಾರೆ ಎಂದರು.
ಟ್ರಸ್ಟ್ ಅಧ್ಯಕ್ಷ ಬಿ.ಕೆ.ಪ್ರದೀಪ್‌ಕುಮಾರ್, ಕಾರ್ಯದರ್ಶಿ ಬಿ.ಕೆ.ಪ್ರಿಯದರ್ಶಿನಿ, ಖಜಾಂಚಿ ಯಶಸ್ವಿನಿ, ಅನುಷಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net