ಮೌಲ್ಯಾಂಕನ ಕಾರ್ಯ ಖರ್ಚು ವೆಚ್ಚದ ಅನುದಾನ ಬಿಡುಗಡೆ: ಮೌಲ್ಯಮಾಪಕರಿಗೂ ಗೌರವಧನ

SSLC Exam
Published on

ಬೆಂಗಳೂರು ರಾಜ್ಯ ಪಠ್ಯಕ್ರಮ ಅನುಸರಿಸುವ ಶಾಲೆಗಳ 5,8 ಮತ್ತು 9ನೇ ತರಗತಿ ವಿದ್ಯಾರ್ಥಿಗಳಿಗೆ ನಡೆಸಿದ ಮೌಲ್ಯಾಂಕನ ಚಟುವಟಿಕೆಗಳಿಗೆ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಅನುದಾನವನ್ನು ಬಿಡುಗಡೆ ಮಾಡಿದೆ. ತಿಂಗಳೊಳಗೆ ಖರ್ಚುವೆಚ್ಚದ ಮಾಹಿತಿ ನೀಡುವಂತೆ ಸೂಚನೆ ನೀಡಿದೆ.

ರಾಜ್ಯದಲ್ಲಿ ಮೌಲ್ಯಾಂಕನವನ್ನು ಮಾ.11, 12 ಮತ್ತು 25ರಿಂದ 28ರವರೆಗೆ ನಡೆಸಲಾಗಿದೆ. ಮೌಲ್ಯಾಂಕನಕ್ಕೆ ಸಂಬಂಧಿಸಿದ ಕಾರ್ಯಚಟುವಟಿಕೆಗಳಿಗೆ ಅನುದಾನವನ್ನು ಜಿಲ್ಲಾ ಉಪ ನಿರ್ದೇಶಕರ (ಡಿಡಿಪಿಐ) ಖಾತೆಗೆ ಬಿಡುಗಡೆ ಮಾಡಲಾಗಿದೆ. ಈ ಮೊತ್ತವನ್ನು ಸಂಬಂಧಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಖಾತೆಗೆ ಕೂಡಲೇ ಬಿಡುಗಡೆ ಮಾಡಿ ಅಗತ್ಯತೆಗೆ ಅನುಗುಣವಾಗಿ ನಿಯಮಾನುಸಾರ ಹಣವನ್ನು ಖರ್ಚು ಮಾಡಲು ತಿಳಿಸುವುದು.

ಭರಿಸಿದ ವೆಚ್ಚಕ್ಕೆ ಆಯಾ ಬ್ಲಾಕ್‌ಗಳಿಂದ ಉಪಯೋಗಿಸಿದ ಪ್ರಮಾಣ ಪತ್ರವನ್ನು ಪಡೆದು ಜಿಲ್ಲಾ ಹಂತದಲ್ಲಿ ಕ್ರೋಢೀಕರಿಸಿ ಇಡೀ ಜಿಲ್ಲೆಗೆ ಸಮಬಂಧಿಸಿದಂತೆ ಒಂದೇ ಉಪಯೋಗಿತ ಪ್ರಮಾಣ ಪತ್ರವನ್ನು ಬ್ಲಾಕ್‌ಗಳಿಂದ ಪಡೆದು ಏ.30ರೊಳಗೆ ಕಳುಹಿಸಬೇಕು.

ಮೌಲ್ಯಮಾಪನ ಬಳಿಕ ಪೂರ್ಣಗೊಂಡ ನಂತರ ಶಾಲೆಗಳಿಗೆ ವಾಪಸ್ ಮರು ರವಾನೆಗಾಗಿ ಕ್ಲಸ್ಟರ್‌ಗಳಿಗೆ 1,500 ರೂ., ಬಳಸುವುದು.ಮೌಲ್ಯಾಪನ ಕಾರ್ಯದಲ್ಲಿ ಭಾಗವಹಿಸುವ ಪ್ರತಿ ಮೌಲ್ಯಮಾಪಕರಿಗೆ ದಿನವೊಂದಕ್ಕೆ 100 ರೂ.ಗಳಂತೆ ಗೌರವ ಸಂಭಾವನೆ ನೀಡುವುದು. ಬ್ಲಾಕ್ ಹಂತದಲ್ಲಿ ಪ್ರತಿ ಕೇಂದ್ರಕ್ಕೆ ಪ್ರತಿ ತರಗತಿಗೆ ತಲಾ 2 ಸಾವಿರ ರೂ.ಗಳಂತೆ 6 ಸಾವಿರ ರೂ. ನೀಡಬೇಕು. ಬೆಂಗಳೂರು ಉತ್ತರ ಮತ್ತು ದಕ್ಷಿಣ ಶೈಕ್ಷಣಿಕ ಜಿಲ್ಲೆಗಳಿಗೆ ತಲಾ 10 ಸಾವಿರ ರೂ.ಗಳಂತೆ 30 ಸಾವಿರ ರೂ. ನೀಡಬೇಕು ಎಂದು ಮಂಡಳಿ ಅಧ್ಯಕ್ಷರು ಸೂಚನೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net