

ಬೆಂಗಳೂರು:ಲಿಂಗತ್ವ ಮತ್ತು ಲೈಂಗಿಕ ಅಲ್ಪಸಂಖ್ಯಾತ ಸಮುದಾಯ ಇತಿಹಾಸದಲ್ಲೆ ಮೊದಲ ಬಾರಿಗೆ ಮೈಲಿಗಲ್ಲು ಸೃಷ್ಠಿಸುವ ಕಾರ್ಯಕ್ಕೆ ಕೈ ಹಾಕಿದ್ದು, ಸಾಹಿತ್ಯ, ಸಂಸ್ಕೃತಿ, ಜತೆಗೆ ದೇಶಭಕ್ತಿ,ರಾಜ್ಯಾಭಿಮಾನ ನಮ್ಮಲ್ಲಿಯೂ ಇದೆ ಎಂಬುದನ್ನು ಸಾರಲು ಹೊರಟಿದ್ದೇವೆ ಎಂದು ಸಾಮಾಜಿಕ ನ್ಯಾಯಕ್ಕಾಗಿ ಲಿಂಗತ್ವ ಮತ್ತು ಲೈಂಗಿಕತೆ ಅಲ್ಪಸಂಖ್ಯಾತರ ಮೈತ್ರಿಕೂಟ ತಿಳಿಸಿದೆ.
ರಾಷ್ಟ್ರಪ್ರೇಮ, ರಾಜ್ಯಭಕ್ತಿ ನಮ್ಮ ಅಣು ಅಣುವಿನಲ್ಲು ತುಂಬಿದೆ ಎಂಬುದಕ್ಕೆ ನಮ್ಮ ನೈಜ ಧ್ವನಿಯಲ್ಲಿ ಹಾಡಿಯರುವ ರಾಷ್ಟ್ರಗೀತೆ, ನಾಡಗೀತೆ ಸಾಕ್ಷಿಯಾಗಿದೆ. ಆ.9ರಂದು ಸೆಂಟ್ ಜೋಸ್ ಸಂಜೆ ಕಾಲೇಜು ಸಭಾಂಗಣದಲ್ಲಿ ಮಧ್ಯಾಹ್ನ 2.30 ರಿಂದ ನಾಟಕ, ಪುಸ್ತಕ ಬಿಡುಗಡೆ ಮತ್ತು ಆಲ್ಬಮ್ ವಿಡಿಯೋ ಬಿಡುಗಡೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ ಎಂದು ಅಕ್ಕೆ ಪದ್ಮಶಾಲಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಮಾಜಿ ರಾಜ್ಯಪಾಲರಾದ ಮಾರ್ಗರೇಟ್ ಆಳ್ವಾ ಕಾಯಕ್ರಮ ಉದ್ಘಾಟಿಸಲಿದ್ದು, ಕಾನೂನು ಸಚಿವ ಎಚ್.ಕೆ.ಪಾಟೀಲ್,ಮಹಿಳಾ ಮತ್ತು ಮಕ್ಕಳ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ,ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ, ರಾಜ್ಯಸಭಾ ಸದಸ್ಯ ಜಿ.ಸಿ.ಚಂದ್ರಶೇಖರ್,ಗಾಯಕಿ ಉಷಾಕೋಕಿಲ,ಸಂತ ಜೋಸ್ಸೆ ಔಟ್ರೀಚ್ ಡಾ.ಾದರ್ ಡೇನಿಯಲ್ ೆರ್ನಾಂಡಿಸ್ ಸೇರಿ ಹಲವು ಗಣ್ಯರು ಆಲ್ಬಮ್ ವಿಡಿಯೋ ಬಿಡುಗಡೆ ಮಾಡಲಿದ್ದಾರೆ ಎಂದು ತಿಳಿಸಿದರು.
ನಮ್ಮ ಕರುನಾಡ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಲಿಂಗತ್ವ ಮತ್ತು ಲೈಂಗಿಕತೆ ಅಲ್ಪಸಂಖ್ಯಾತ ಸಮುದಾಯದವರು ನಮ್ಮದೇ ಸಮುದಾಯದ ವಿಷಯವನ್ನು ವಸ್ತುವನ್ನಾಗಿಟ್ಟುಕೊಂಡು 10 ಪುಸ್ತಕಗಳು ರಚಿಸಿದ್ದು, ಒಂದೇ ವೇದಿಕೆಯಲ್ಲಿ 10 ಪುಸ್ತಕಗಳ ಬಿಡುಗಡೆ ನಡೆಯಲಿದೆ. ಇದು ನಮ್ಮಲ್ಲೂ ಸಾಹಿತ್ಯಾಭಿರುಚಿ ಇದೆ ಎಂಬುದು ಸಾಭೀತು ಪಡಿಸುತ್ತಿದ್ದೇವೆ ಎಂದು ಹೇಳಿದರು.
ಸಮುದಾಯದ ಹಿರಿಯರು, 55 ವರ್ಷಗಳಿಗೂ ಅಧಿಕ ವಯಸ್ಸಿನವರ ತಂಡ ಒಂದು ವಿನೂತನ ಮತ್ತು ವಿಶೇಷವಾದ ‘ತಲ್ಕಿ ‘ ಎಂಬ ನಾಟಕ ಪ್ರದರ್ಶಿಸುತ್ತಿದ್ದು, ಈ ಮೂಲಕ ತಮ್ಮ ಭಾವನೆಗಳು, ಹೋರಾಟ ಮತ್ತು ಅಭಿವ್ಯಕ್ತಿಗಳನ್ನು ನವರಸ ಭರಿತವಾಗಿ ಹಂಚಿಕೊಳ್ಳಲಿದ್ದಾರೆ. ಜತೆಗೆ ಗಿನ್ನಿಸ್ ಮತ್ತು ಲಿಮ್ಕಾ ದಾಖಲೆಗೆ ಸಮೂಹ ಗಾಯನ ನಡೆಸಲಿದ್ದೇವೆ. ಇದೇ ವೇಳೆ ಭಾರತೀಯ ಸಂವಿಧಾನ ಪೀಠಿಕೆ ಓದಲಿದ್ದೇವೆ ಎಂದರು.
ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್ .ಮುಕುಂದರಾಜ್ , ನಾಟಕ ಅಕಾಡೆಮಿ ಅಧ್ಯಕ್ಷ ನಾಗರಾಜ್, ಹಿರಿಯ ನಟ ಪ್ರಕಾಶ್ ರಾಜ್,ಸಾಮಾಜಿಕ ಹೋರಾಟಗಾರ ಶ್ರೀಕಾಂತ್ , ಪದವಿ ಪೂರ್ವ ಕಾಲೇಜು ಎಸ್.ಜೆ.ನಿರ್ದೇಶಕ ರೇವರೆಂಡ್ ಾದರ್ ಜಾಯ್ ರೋಡ್ರಿಗಸ್, ಒಂದೆಡೆ ಸಂಸ್ಥೆಯ ಕು.ರಕ್ಷಿತಾ ಎಂ,ಕರ್ನಾಟಕ ಮಂಗಳಮುಖಿಯರ ಸಂಘದ ಸವಿತಾ,ಪರಿವರ್ತನ ಟ್ರಸ್ಟ್ ಸದಸ್ಯ ಯಶ್ ಶರ್ಮಾ,ಜನ ಸೇವಾ ಸಮಿತಿ ಸದಸ್ಯೆ ವೀಣಾ, ಮೀರರ್ ಕನ್ನಡದ ಬಿಂದಿಯಾ ಕಶ್ಯಪ್, ಸಾಮಾಜಿಕ ನ್ಯಾಯಕ್ಕಾಗಿ ಲಿಂಗತ್ವ ಮತ್ತು ಅಲ್ಪಸಂಖ್ಯಾತರ ಮೈತ್ರಿಕೂಟ ಸದಸ್ಯೆ ಚಾಂದಿನಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಾಕ್ಷಿಯಾಗಲಿದ್ದಾರೆ ಎಂದು ವಿವರಿಸಿದರು.
ಶತಮಾನಗಳಿಂದ ಈ ದೇಶದ ಪ್ರಜೆಗಳಾಗಿದ್ದರೂ ನಾಗರಿಕ ಮತ್ತು ಮಾನವ ಹಕ್ಕುಗಳು ಕೌಟುಂಬಿಕ, ಸಾಮಾಜಿಕ ಸ್ಥಾನಮಾನಗಳಿಂದ ವಂಚಿತರಾಗಿ, ಅಭದ್ರತೆಯಿಂದ ಅಸಡ್ಡೆಗೆ ಒಳಗಾಗಿರುವ ಲಿಂಗತ್ವ ಮತ್ತು ಲೈಂಗಿಕತೆ ಅಲ್ಪಸಂಖ್ಯಾತ ಸಮುದಾಯಕ್ಕೆ ನಮ್ಮ ದೇಶದ ಸಂವಿಧಾನ, ಕಾನೂನು ಮತ್ತು ನ್ಯಾಯ ವ್ಯವಸ್ಥೆಯು ನಾಗರಿಕ ಮತ್ತು ಮಾನವ ಹಕ್ಕುಗಳನ್ನು ನೀಡಿ ದೇಶದ ಸಮಾನ ಪ್ರಜೆಗಳು ಎಂದು ಘೋಷಿಸಿವೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.ಚಾಂದಿನಿ, ಕ್ರಿಸ್ಟಿರಾಜ್, ಉಮಾ ಉಪಸ್ಥಿತರಿದ್ದರು.