

ಮುಂಬೈ: ಹಿರಿಯ ನಟಿ ನಟಿ ರೇಖಾ(Actress Rekha) ಯಾವಾಗಲೂ ತಮ್ಮನ್ನು ಸ್ಟೈಲ್ ಐಕಾನ್ ಎಂದು ಏಕೆ ಕರೆಯುತ್ತಾರೆ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. 70 ವರ್ಷ ವಯಸ್ಸಿನಲ್ಲೂ ಅವರ ಸೌಂದರ್ಯದಿಂದ ಇಂದಿಗೂ ಎಲ್ಲರನ್ನೂ ಆಕರ್ಷಿಸುತ್ತಾರೆ. ವಿಶೇಷವೆಂದರೆ ಅವರು ತಮ್ಮ ಅಭಿಮಾನಿಗಳನ್ನು ಎಂದಿಗೂ ಸ್ಟೈಲ್ ವಿಷಯದಲ್ಲಿ ನಿರಾಶೆಗೊಳಿಸುವುದಿಲ್ಲ.
ಇತ್ತೀಚೆಗೆ ಪಿಂಟು ಕಿ ಪಪ್ಪಿ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ನ್ಯೂಲುಕ್ನೊಂದಿಗೆ ತನ್ನ ಸ್ಟೈಲ್ ಐಕಾನ್ ಸ್ಥಾನಮಾನವನ್ನು ಭದ್ರಪಡಿಸಿಕೊಂಡರು. ಪ್ರತಿ ಬಾರಿಯೂ ಅವರ ಸಿಗ್ನೇಚರ್ ಸೀರೆಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ನಟಿ ರೇಖಾ ಈ ಸಮಾರಂಭದಲ್ಲಿ ವಿಶೇಷವಾಗಿ ಕಾಣಿಸಿಕೊಂಡಿದ್ದಾರೆ. ಸ್ಟೈಲ್ಗೆ ವಯಸ್ಸಿನ ಅರಿವಿಲ್ಲ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.
ಅವರ ಹೊಸ ಲುಕ್ ಬಗ್ಗೆ ಹೇಳುವುದಾದರೆ ಬಿಳಿ ಪ್ಯಾಂಟ್ಸೂಟ್ನೊಂದಿಗೆ ದೊಡ್ಡ ಗಾತ್ರದ ಕಪ್ಪು ಸನ್ಗ್ಲಾಸ್, ಸ್ಟೇಟ್ಮೆಂಟ್ ಚಿನ್ನದ ಕಿವಿಯೋಲೆಗಳು ಮತ್ತು ಸ್ಟೈಲಿಶ್ ಬಿಳಿ ಕ್ಯಾಪ್ನೊಂದಿಗೆ ಪೂರ್ಣಗೊಳಿಸಿದರು. ಇದು ವಿಂಟೇಜ್ ಗ್ಲಾಮರ್ ಲುಕ್ನಂತೆ ಕಾಣುತಿತ್ತು. ಈ ನ್ಯೂಲುಕ್ನೊಂದಿಗೆ ರೆಡ್ ಕಾರ್ಪೆಟ್ನಲ್ಲಿ ಕಾಣಿಸಿಕೊಂಡ ರೇಖಾರ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ರೇಖಾ ಎಂದೇ ಪ್ರಸಿದ್ಧರಾಗಿರುವ ಭಾನುರೇಖಾ ಗಣೇಶನ್, 1954 ಅಕ್ಟೋಬರ್ 10 ಎಂದು ಜನಿಸಿದರು. ರೇಖಾ ಪ್ರಸಿದ್ಧ ಭಾರತೀಯ ನಟಿ. 180ಕ್ಕೂ ಹೆಚ್ಚು ಚಲನಚಿತ್ರಗಳ ವೃತ್ತಿಜೀವನದೊಂದಿಗೆ ರೇಖಾ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಮತ್ತು ಮೂರು ಫಿಲ್ಮ್ಫೇರ್ ಪ್ರಶಸ್ತಿಗಳು ಸೇರಿದಂತೆ ಹಲವಾರು ಪ್ರತಿಷ್ಠಿತ ಪುರಸ್ಕಾರಗಳನ್ನು ಪಡೆದುಕೊಂಡಿದ್ದಾರೆ.(ಏಜೆನ್ಸೀಸ್)