

ಬೆಂಗಳೂರು: ಮನೆ, ಕಟ್ಟಡ, ಗೋದಾಮು, ಅಂಗಡಿ, ಸೈಟು, ಭೂಮಿ ಸೇರಿದಂತೆ ಸ್ಥಿರಾಸ್ತಿ ಸ್ವತ್ತುಗಳ ಬಾಡಿಗೆ ಪಡೆದಾಗ ಭಾರತೀಯ ನೋಂದಣಿ ಕಾಯ್ದೆ ಪ್ರಕಾರ ಕಡ್ಡಾಯವಾಗಿದೆ. ಇದು ಬಾಡಿಗೆದಾರ ಮತ್ತು ಸ್ವತ್ತಿನ ಮಾಲೀಕರಿಗೆ ಭವಿಷ್ಯದಲ್ಲಿ ಅನುಕೂಲವಾಗಲಿದೆ.
ನೋಂದಣಿ ಕಾಯ್ದೆ 1908ರ ಕಲಂ 17(ಡಿ) ಅನ್ವಯ 1 ವರ್ಷ ಅವಧಿಗೂ ಮೇಲ್ಪಟ್ಟ ಅವಧಿಗೆ ವಾಸಕ್ಕೆ ಅಥವಾ ವಾಣಿಜ್ಯ ಉಪಯೋಗಕ್ಕೆ ಬಾಡಿಗೆ ಪಡೆದಾಗ ನೋಂದಣಿ ಕಡ್ಡಾಯ ಆಗಿರುತ್ತದೆ. ಪ್ರತಿಯೊಂದು ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ನೋಂದಣಿ ಸೌಲಭ್ಯ ಇರಲಿದ್ದು, ನೋಂದಣಿ ಮತ್ತು ಮದ್ರಾಂಕ ಶುಲ್ಕ ಹೆಚ್ಚೆನು ಇರುವುದಿಲ್ಲ. ಭವಿಷ್ಯದಲ್ಲಿ ಬಾಡಿಗೆದಾರ ಮತ್ತು ಮಾಲೀಕರ ನಡುವೆ ಮನಸ್ಥಾಪ ಬಂದಾಗ ಒಪ್ಪಂದ ಪತ್ರದಲ್ಲಿ ಉಲ್ಲೇಖಿಸದಂತೆ ನಡೆದುಕೊಳ್ಳಲು ಅನುಕೂಲ ಆಗಲಿದೆ.
ಹಾಗಾದರೇ ನೋಂದಣಿಗೆ ತಗಲುವ ವೆಚ್ಚದ ಬಗ್ಗೆ ಪ್ರತಿಯೊಬ್ಬರಿಗೂ ಕುತೂಹಲ ಮೂಡಲಿದೆ.
ವಾಸಪೊಪಯೋಗಿ ಸ್ವತ್ತುಗಳಿಗೆ 1 ವರ್ಷದ ಒಳಗಿನ ಅವಧಿ ಒಪ್ಪಂದಗಳಿಗೆ ಪರಿಗಣಿಸಿದ ಮೊತ್ತಕ್ಕೆ ಶೇ.0.5 ಅಥವಾ ಗರಿಷ್ಠ 500 ರೂ.ಗಳ ಮುದ್ರಾಂಕ ಶುಲ್ಕ ಹಾಗೂ ಶೇ.0.5ರಷ್ಟು ಅಥವಾ ಗರಿಷ್ಠ 200 ರೂ.ಗಳ ನೋಂದಣಿ ಶುಲ್ಕ ಪಾವತಿ ಮಾಡಬೇಕಾಗುತ್ತದೆ.
ವಾಣಿಜ್ಯೋಪಯೋಗಿ ಅಥವಾ ಕೈಗಾರಿಕಾ ಸ್ವತ್ತುಗಳಿಗೆ ಒಂದು ವರ್ಷದ ಒಳಗಿನ ಅವಧಿಯ ಒಪ್ಪಂದಗಳಿಗೆ ಪರಿಗಣಿಸಿದ ಮೊತ್ತಕ್ಕೆ ಶೇ.0.5 ಮುದ್ರಾಂಕ ಶುಲ್ಕ ಮತ್ತು ಶೇ.0.5 ಅಥವಾ ಕನಿಷ್ಠ 200 ರೂ. ನೋಂದಣಿ ಶುಲ್ಕ ಪಾವತಿಸಬೇಕು.
ಒಂದು ವರ್ಷಕ್ಕೆ ಮೇಲ್ಪಟ್ಟ ಹಾಗೂ 10 ವರ್ಷಗಳ ಅವಧಿ ಮೀರಿದ ಬಾಡಿಗೆ ಒಪ್ಪಂದಕ್ಕೆಪರಿಗಣಿಸಿದ ಮೊತ್ತಕ್ಕೆ ಶೇ.1 ಮುದ್ರಾಂಕ ಶುಲ್ಕ ನಿಗದಿ ಮಾಡಲಾಗಿದೆ. 10 ವರ್ಷಗಳಿಗೆ ಮೇಲ್ಪಟ್ಟ ಮತ್ತು 20 ವರ್ಷಗಳ ಅವಧಿ ಮೀರದ ಬಾಡಿಗೆ ಒಪ್ಪಂದಕ್ಕೆ ಪರಿಗಣಿಸಿದ ಮೊತ್ತಕ್ಕೆ ಶೇ.2 ಮುದ್ರಾಂಕ ಶುಲ್ಕ ಹಾಗೂ 20 ವರ್ಷಗಳಿಗೆ ಮೇಲ್ಪಟ್ಟ ಮತ್ತು 30 ವರ್ಷಗಳ ಅವಧಿ ಮೀರಿದ ಬಾಡಿಗೆ ಒಪ್ಪಂಡಗಳಿಗೆ ಪರಿಗಣಿಸಿದ ಮೊತ್ತಕ್ಕೆ ಶೇ.3 ಮುದ್ರಾಂಕ ಶುಲ್ಕ ಪಾವತಿಸಬೇಕು. ಉಳಿದಂತೆ ಶೇ.0.5 ಅಥವಾ ಕನಿಷ್ಠ 200 ರೂ. ನೋಂದಣಿ ಶುಲ್ಕ ಪಾವತಿ ಸಾಮಾನ್ಯವಾಗಿ ಅನ್ವಯ ಆಗಲಿದೆ ಎಂದು ನೋಂದಣಿ ಮತ್ತು ಮುದ್ರಾಂಕ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಪರಿಗಣಿಸಿದ ಮೊತ್ತ ಎಂದರೇ :
ಪರಿಗಣಿಸಿದ ಮೊತ್ತ ಎಂದರೇ ಬಾಡಿಗೆ ಕರಾರಿನಲ್ಲಿ ಉಲ್ಲೇಖಿಸಿದಂತೆ ಪಾವತಿಸಬೇಕಾದ ಸರಾಸರಿ ವಾರ್ಷಿಕ ಬಾಡಿಗೆ, ಪ್ರೀಮಿಯಂ ಮತ್ತು ಮುಂಗಡ ಹಣ ಒಳಗೊಂಡಿರುತ್ತದೆ. ಇದರ ಮೇಲೆ ಮುದ್ರಾಂಕ ಶುಲ್ಕ ನಿಗದಿ ಮಾಡಲಾಗುತ್ತದೆ.