ಇಂದಿನಿಂದ ರಾಗಿ, ಭತ್ತ ಖರೀದಿಗೆ ನೋಂದಣಿ; ಜಿಲ್ಲಾಧಿಕಾರಿ ವೆಂಕಟ ರಾಜಾ ಮಾಹಿತಿ

ಇಂದಿನಿಂದ ರಾಗಿ, ಭತ್ತ ಖರೀದಿಗೆ ನೋಂದಣಿ; ಜಿಲ್ಲಾಧಿಕಾರಿ ವೆಂಕಟ ರಾಜಾ ಮಾಹಿತಿ
ಇಂದಿನಿಂದ ರಾಗಿ, ಭತ್ತ ಖರೀದಿಗೆ ನೋಂದಣಿ; ಜಿಲ್ಲಾಧಿಕಾರಿ ವೆಂಕಟ ರಾಜಾ ಮಾಹಿತಿ
Published on

 ಕೋಲಾರ: ಸರ್ಕಾರದ ಕನಿಷ್ಠ ಬೆಂಬಲ ಯೋಜನೆಯಡಿಯಲ್ಲಿ ರೈತರಿಂದ ರಾಗಿ/ಭತ್ತ ಖರೀದಿ ಪ್ರಕ್ರಿಯೆಗೆ ಡಿ.15ರಿಂದ ನೋಂದಣಿ ಆರಂಭಿಸಲಾಗುವುದು. ಜಿಲ್ಲೆಗೆ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದಿಂದ ಸಂಸ್ಥೆಯನ್ನು ಖರೀದಿ ಏಜೆನ್ಸಿಯಾಗಿ ನಿಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ವೆಂಕಟ್​ರಾಜಾ ಹೇಳಿದರು.

ಜಿಲ್ಲಾಧಿಕಾರಿಗಳ ಕಚೇರಿಯ ನ್ಯಾಯಾಂಗ ಸಭಾಂಗಣದಲ್ಲಿ ಬುಧವಾರ ಆಯೋಜಸಿದ್ದ ಜಿಲ್ಲಾ ಟಾಸ್ಕ್​ಫೋರ್ಸ್​ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರತಿ ಕ್ವಿಂಟಾಲ್​ ರಾಗಿಗೆ 3578 ರೂ.ಗಳನ್ನು ಮತ್ತು ಭತ್ತ ಸಾಮಾನ್ಯ 2040 ರೂ.ಗಳನ್ನು ಭತ್ತ ಗ್ರೇಡ್​&ಎ 2060 ರೂ.ಗಳನ್ನು ಸರ್ಕಾರ ದರ ನಿಗದಿಪಡಿಸಿದೆ ಎಂದರು.

ರೈತರಿಂದ ಪ್ರತಿ ಎಕರೆಗೆ 10 ಕ್ವಿಂಟಾಲ್​ನಂತೆ ಗರಿಷ್ಟ 20 ಕ್ವಿಂಟಾಲ್​ ವರೆಗೆ ರಾಗಿಯನ್ನು ಖರೀದಿಸಲಾಗುತ್ತದೆ. ಆದೇ ರೀತಿ ಭತ್ತವನ್ನು ಪ್ರತಿ ರೈತರಿಂದ ಉತ್ಪಾದನೆಯ ಅನುಗುಣವಾಗಿ ಪ್ರತಿ ಎಕರೆಗೆ 25 ಕ್ವಿಂಟಾಲ್​ನಂತೆ ಗರಿಷ್ಠ 40 ಕ್ವಿಂಟಾಲ್​ ಮೀರದಂತೆ ಖರೀದಿಸಲಾಗುವುದು. ರೈತರು ಕೃಷಿ ಇಲಾಖೆಯಿಂದ ಈಗಾಗಲೇ ನೀಡಿರುವ ಫೂಟ್ಸ್​ ಐಡಿಯನ್ನು ಖರೀದಿ ಕೇಂದ್ರಗಳಿಗೆ ತಂದು ನೋಂದಾಯಿಸಿಕೊಂಡು ತಾವು ಬೆಳೆದ ರಾಗಿ ಮತ್ತು ಭತ್ತವನ್ನು ಮಾರಾಟ ಮಾಡಬಹುದು ಎಂದರು.

ರೈತರು ನೋಂದಣಿ ಮಾಡಿಸಿಕೊಂಡ ಬಳಿಕ ರಾಗಿ ಮತ್ತು ಭತ್ತ ಖರೀದಿ ಕೇಂದ್ರಕ್ಕೆ ತಂದು ಕೃಷಿ ಇಲಾಖೆಯಿಂದ ನೇಮಿಸಿದ ಗ್ರೇಡರ್​ಗಳಿಂದ ಪರೀಸಿ, ಗುಣಮಟ್ಟದ ಪ್ರಮಾಣ ಪತ್ರವನ್ನು ಪಡೆದು ರಾಗಿ ಮತ್ತು ಭತ್ತವನ್ನು ಮಾರ್ಚ್​ 31 ರವರೆಗೂ ಖರೀದಿಸಲಾಗುವುದು. ಅನಂತರ ಆನ್​ಲೈನ್​ ಮೂಲಕ ರೈತರ ಬ್ಯಾಂಕ್​ ಖಾತೆಗೆ ಹಣ ಜಮಾ ಮಾಡಲಾಗುವುದು ಎಂದರು.

ಖರೀದಿ ಕೇಂದ್ರಗಳು:

  •  ಮಾಲೂರು ಸಗಟು ಮಳಿಗೆ, ಇಂಡಸ್ಟ್ರಿಯಲ್​ ಏರಿಯ, ಹೊಸೂರು ಮುಖ್ಯ ರಸ್ತೆ, ಜೆ.ವಿ.ರಾಜಪ್ಪ ಮೊ.ಸಂ: 99647082276,
  •  ಬಂಗಾರಪೇಟೆ ಸಗಟು ಮಳಿಗೆ, ಕೆ.ಸಿ.ರೆಡ್ಡಿ ಕಾಲೇಜು ಹತ್ತಿರ, ಸೂಲಿಕುಂಟೆ ರಸ್ತೆ, ಕಲೀಂ ಉಲ್ಲಾ ಷರೀಫ್​ ಮೊ.ಸಂ: 9945066043,
  •  ಮುಳಬಾಗಿಲು ಸಗಟು ಮಳಿಗೆ, ಎ.ಪಿ.ಎಂ.ಸಿ ಯಾರ್ಡ್​, ಎಸ್​.ಎನ್​.ವೆಂಕಟೇಶ್​ ಮೊ.ಸಂ: 9343147460,
  • ಶ್ರೀನಿವಾಸಪುರ ಸಗಟು ಮಳಿಗೆ, ಕೆ.ಎಸ್​.ಆರ್​.ಟಿ.ಸಿ ಬಸ್​ ಡಿಪೋ ಹತ್ತಿರ, ಜೆ.ವಿ.ರಾಜಪ್ಪ ಮೊ.ಸಂ: 99647082276
  • ಕೋಲಾರ ಸಗಟು ಮಳಿಗೆ, ಗದ್ದೆಕಣ್ಣೂರು ಗ್ರಾಮ, ಎಂ.ಆರ್​.ನಾಗರಾಜ್​ ಮೊ.ಸಂ: 9448310491.
  • ಕೆ.ಜಿ.ಎಫ್​ ಸಗಟು ಮಳಿಗೆ, ಕೆ.ಎಸ್​.ಆರ್​.ಟಿ.ಸಿ ಬಸ್​ ಡಿಪೋ ಹತ್ತಿರ, ಎ.ಶ್ರೀನಿವಾಸ್​ ಮೊ.ಸಂ: 9986590600.

ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತ ಕಚೇರಿ ದೂ. 08152&222614, ಜಿಲ್ಲಾ ವ್ಯವಸ್ಥಾಪಕರ ಮೊ.ಸಂಖ್ಯೆ 9448496027 ಸಂಪರ್ಕಿಸಬಹುದು. ಕಚೇರಿ ವ್ಯವಸ್ಥಾಪಕ ಎಚ್​.ಸಿ. ಶ್ರೀಕಾಂತ್​, ಕಿರಿಯ ಸಹಾಯಕ ಎಸ್​.ಎನ್​.ರಮೇಶ್​, ಆಹಾರ ಇಲಾಖೆ ವ್ಯವಸ್ಥಾಪಕ ಸುಬ್ರಮಣ್ಯ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net