ಮದುವೆಗೆ ನಿರಾಕರಣೆ; ಪ್ರಿಯತಮೆಗೆ ಗುಂಡಿಟ್ಟು ಕೊಂದು, ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡ ಪ್ರೇಮಿ| Refused To Marry

Shoot dead
Published on
Refused To Marry: ವ್ಯಕ್ತಿಯೊಬ್ಬ ತಾನು ಪ್ರೀತಿಸುತ್ತಿದ್ದ ಹುಡುಗಿ ಮದುವೆಯಾಗಲು ನಿರಾಕರಿಸಿದಳು ಎಂಬ ಕಾರಣಕ್ಕೆ ಲಾಡ್ಜ್​ವೊಂದರಲ್ಲಿ ಗುಂಡಿಟ್ಟು ಕೊಂದು, ಬಳಿಕ ತಾನೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬಿಹಾರದಲ್ಲಿ ನಡೆದಿದೆ ಎಂದು ಮಂಗಳವಾರ (ಆಗಸ್ಟ್​ 26) ವರದಿಯಾಗಿದೆ.
ಜಾಕಿ ನಾಥ್, ಕಾಜಲ್ ಕುಮಾರಿ ಬಿಹಾರದ ರೋಹ್ತಾಸ್ ಜಿಲ್ಲೆಯ ಖಾಸಗಿ ಲಾಡ್ಜ್​ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಯುವಕ ಪದೇ ಪದೇ ಯುವತಿಗೆ ಮದುವೆಯಾಗೋಣ ಎಂದು ಒತ್ತಾಯಿಸುತ್ತಿದ್ದ. ಆದರೆ ಇಬ್ಬರು ಬೇರೆ ಬೇರೆ ಜಾತಿಯವರಾಗಿದ್ದರಿಂದ ಸಾಮಾಜಿಕ ವ್ಯವಸ್ಥೆ ಹಿನ್ನೆಲೆ ಯುವತಿ ಪದೇ ಪದೇ ಮದುವೆಗೆ ನಿರಾಕರಿಸಿದ್ದಾಳೆ ಎನ್ನಲಾಗಿದೆ.
ಪೊಲೀಸರ ತನಿಖೆಯ ಪ್ರಾಥಮಿಕ ತನಿಖೆ ಪ್ರಕಾರ, ಕಾಜಲ್ ಕುಮಾರಿ ಮಾಲ್​ವೊಂದರಲ್ಲಿ ಕೆಲಸ ಮಾಡ್ತಿದ್ದಾಳೆ. ಸಾಯುವ ಕೆಲವೇ ಗಂಟೆಗಳ ಮೊದಲು ತಾಯಿ ಅವಳನ್ನು ಮಾರುಕಟ್ಟೆಯಲ್ಲಿ ಬಿಟ್ಟು ಹೋಗಿದ್ದಾರೆ ಹೋಗಿದ್ದಾರೆ. ನಂತರ ಬಲ್ಲಿಯಾ ಮೂಲದ ಜಾಕಿನಾಥ್ ಅವಳನ್ನು ಲಾಡ್ಜ್​ಗೆ ಕರೆದುಕೊಂಡು ಹೋಗಿದ್ದಾನೆ. ಲಾಡ್ಜ್​ನಲ್ಲಿ ಮದುವೆ ವಿಚಾರವಾಗಿ ಗಲಾಟೆ ನಡೆದು ಜಾಕಿ ಮೊದಲು ಅವಳ ಮೇಲೆ ಗುಂಡು ಹಾರಿಸಿ, ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿಸಿದರು.
ಈ ಕುರಿತು ಮಾತನಾಡಿರುವ ಮೃತಳ ತಾಯಿ ಗಾಯತ್ರಿದೇವಿ "ಅವನು, ಅವಳನ್ನು ಮದುವೆಯಾಗುವಂತೆ ಒತ್ತಾಯಿಸುತ್ತಿದ್ದನು. ಅವಳು ನನ್ನವಳಾಗಲು ಸಾಧ್ಯವಾಗದಿದ್ದರೆ, ಅವಳು ಬೇರೆಯವರೊಂದಿಗೆ ಇರಲು ಸಾಧ್ಯವಿಲ್ಲ ಎಂದು ಹೇಳಿದ್ದನು. ಆ ವ್ಯಕ್ತಿ ಬೇರೆ ಜಾತಿಗೆ ಸೇರಿದವನು. ಅವನನ್ನು ಹೇಗೆ ಮದುವೆಯಾಗಬಹುದು" ಎಂದಿದ್ದಾರೆ.
ಮೃತ ಜಾಕಿನಾತ್ ತಂದೆ ಹೋಟೆಲ್​ ತನ್ನ ಮಗನ ವಿರುದ್ಧ ಪಿತೂರಿ ನಡೆಸುತ್ತಿದೆ ಎಂದು ಆರೋಪಿಸಿದ್ದಾರೆ. ಘಟನೆಯ ಬಳಕಿ ಉಪವಿಭಾಗೀಯ ಪೊಲೀಸ್ ಅಧಿಕಾರಿ ದಿಲೀಪ್ ಕುಮಾರ್ ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲಿಸಿದ್ದಾರೆ. ಸ್ಥಳದಲ್ಲಿ ಒಂದು ಪಿಸ್ತೂಲ್, ಕಾರ್ಟ್ರಿಡ್ಜ್ ಶೆಲ್ ವಶಪಡಿಸಿಕೊಂಡಿದ್ದಾರೆ. ಪ್ರಕರಣದ ಬಗ್ಗೆ ತನಿಖೆ ಮುಂದುವರೆದಿದೆ. (ಏಜೆನ್ಸೀಸ್)
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net