

ದೆಹಲಿ: ಮೊಬೈಲ್ ಮಾರುಕಟ್ಟೆಯಲ್ಲಿ ತನ್ನದೇ ಛಾಪು ಮೂಡಿಸಿರುವ ಪ್ರಸಿದ್ಧ ಶವೊಮಿ ಕಂಪನಿಯು ಮಧ್ಯಮವರ್ಗದ ಗ್ರಾಹಕರಿಗಾಗಿ ಹೊಸ ಸ್ಮಾರ್ಟ್ಫೋನ್ನ್ನು ಬಿಡುಗಡೆ ಮಾಡಿದೆ. ಕಳೆದ ಮೇ ತಿಂಗಳಿನಲ್ಲಿ ಶವೊಮಿ ಸಿವಿ-3ನ್ನು ಬಿಡುಗಡೆಗೊಳಿಸಿದ್ದ ಕಂಪನಿಯು ಮೊಬೈಲ್ ಪ್ರಿಯರಿಗಾಗಿ ನೂತನ ರೆಡ್ಮಿ 12 5ಜಿ ಫೋನ್ನ್ನು ಪರಿಚಯಿಸಿದೆ.
ಮಾರುಕಟ್ಟೆಗೆ ಶೀಘ್ರದಲ್ಲೇ ಲಗ್ಗೆಯಿಡಲಿರುವ ಈ ರೆಡ್ಮಿ 12 5ಜಿ ಸ್ಮಾರ್ಟ್ಫೋನ್ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ. ಇದು ಮೂರು ಮಾದರಿಗಳಲ್ಲಿ ಲಭ್ಯವಿದ್ದು, 4GB + 128GB, 6GB + 128GB, ಮತ್ತು 8GB + 256GB ಸಂಗ್ರಹಣಾ ಸಾಮರ್ಥ್ಯವನ್ನು ಹೊಂದಿದೆ. ಇವುಗಳ ಬೆಲೆ ಕ್ರಮವಾಗಿ 10,999 ರೂ. 12,499 ರೂ. ಮತ್ತು 14,999 ರೂಪಾಯಿ ಆಸುಪಾಸಿನಲ್ಲಿ ಇರಲಿದೆ.
ಈ ಫೋನ್ಗಳು ನೀಲಿ, ಮೂನ್ಶೈನ್ ಸಿಲ್ವರ್ ಮತ್ತು ಜೇಡ್ ಬ್ಲಾಕ್ ಎಂಬ ಮೂರು ಬಣ್ಣದ ಆಯ್ಕೆಗಳಲ್ಲಿ ಲಭ್ಯವಾಗಲಿದೆ. ಇದು 90Hz ರಿಫ್ರೆಶ್ ದರದೊಂದಿಗೆ 6.79-ಇಂಚಿನ FHD+ ಡಿಸ್ಪ್ಲೇಯನ್ನು ಹೊಂದಿದ್ದು, ಪ್ರೀಮಿಯಂ ಅನುಭವವನ್ನು ನೀಡುತ್ತದೆ. ಜತೆಗೆ 50-ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ, 8-ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಕ್ಯಾಮರಾ ಮತ್ತು 2-ಮೆಗಾಪಿಕ್ಸೆಲ್ ಮ್ಯಾಕ್ರೋ ಕ್ಯಾಮರಾವನ್ನು ಹೊಂದಿರುವ ಈ 5ಜಿ ಫೋನ್ ಸೆಲ್ಫಿ ಪ್ರಿಯರಿಗಾಗಿ 8 ಮೆಗಾಪಿಕ್ಸೆಲ್ ಕ್ಯಾಮರಾವನ್ನು ಹೊಂದಿದೆ.
ರೆಡ್ಮಿ 12 5ಜಿಯು 5,000mAh ಬ್ಯಾಟರಿಯೊಂದಿಗೆ ಜತೆಗೆ C USB ಪೋರ್ಟ್ನ್ನು ಹೊಂದಿದೆ. ಅಲ್ಲದೇ, 18W ವೇಗದ ಚಾರ್ಜಿಂಗ್ನ್ನು ಬೆಂಬಲಿಸುವ ಈ ಫೋನ್ ಭಾರತದ ಮೊದಲ Snapdragon 4 Gen 2 ಚಾಲಿತ ಫೋನ್ ಆಗಿದ್ದು, ಬಳಕೆದಾರರಿಗೆ ಉತ್ತಮ ಕಾರ್ಯಕ್ಷಮತೆ ಮತ್ತು ಅನುಭವವನ್ನು ನೀಡುತ್ತದೆ. ಹೆಚ್ಚಿನ ಮಾಹಿತಿಗಾಗಿ ಕಂಪನಿಯ ಅಧಿಕೃತ ವೆಬ್ಸೈಟ್ಗೆ ಬೇಟಿ ನೀಡಬಹುದಾಗಿದ್ದು, ಆಗಷ್ಟ್ 4ರಿಂದ ಮಾರಾಟಕ್ಕೆ ಲಭ್ಯವಾಗಲಿದೆ ಎನ್ನಲಾಗಿದೆ.(ಏಜೆನ್ಸೀಸ್)