ಸಶಸ್ತ್ರ ಕಾನ್‌ಸ್ಟೆಬಲ್ 420 ಹುದ್ದೆಗಳ ನೇಮಕಾತಿ; ಸೆಪ್ಟೆಂಬರ್ 10ಕ್ಕೆ ಲಿಖಿತ ಪರೀಕ್ಷೆ

1530871243-Rajasthan_Police_Constable_Recruitment_2017_Online_Applications_last_date.jpg
Published on

ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಸಶಸ್ತ್ರ ಕಾನ್‌ಸ್ಟೆಬಲ್ 420 ಹುದ್ದೆಗಳ ನೇಮಕಾತಿಗೆ ಸೆಪ್ಟೆಂಬರ್ 10ರಂದು ಲಿಖಿತ ಪರೀಕ್ಷೆಯನ್ನು ನಿಗದಿ ಮಾಡಲಾಗಿದೆ.

ಬೆಂಗಳೂರು ನಗರ, ಚಿತ್ರದುರ್ಗ, ದಾವಣಗೆರೆ, ಹಾವೇರಿ ಹಾಗೂ ಕಲ್ಯಾಣ ಕರ್ನಾಟಕ ಭಾಗದ ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ, ವಿಜಯನಗರ ಜಿಲ್ಲೆಗಳಲ್ಲಿ ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗುತ್ತದೆ.

ಸೆ.10ರ ಬೆಳಗ್ಗೆ 11 ರಿಂದ 12.30ರ ವರೆಗೆ ಲಿಖಿತ ಪರೀಕ್ಷೆ ನಡೆಯಲಿದೆ. ಕರೆಪತ್ರಗಳ ಕುರಿತ ಮಾಹಿತಿಯನ್ನು ಅರ್ಹ ಅಭ್ಯರ್ಥಿಗಳ ಮೊಬೈಲ್‌ಗೆ ಸಂದೇಶ ಮತ್ತು ಲಿಂಕ್ ಕಳುಹಿಸಲಾಗುತ್ತದೆ. ಲಿಂಕ್ ಬಳಸಿ ಕರೆಪತ್ರಗಳನ್ನು ಡೌನ್‌ಲೋಡ್ ಮಾಡಿಕೊಂಡು ನಿಗದಿತ ದಿನಾಂಕದಂದು ಲಿಖಿತ ಪರೀಕ್ಷೆಗೆ ಹಾಜರಾಗುವಂತೆ ಪೊಲೀಸ್ ನೇಮಕಾತಿ ವಿಭಾಗ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net