ಇಂದು 7,071 ಜನ ಚೇತರಿಕೆ; 6,317 ಜನರಿಗೆ ಕರೊನಾ ಸೋಂಕು

covid-25
Published on

ಬೆಂಗಳೂರು: ಕಳೆದ 24 ಗಂಟೆಗಳಲ್ಲಿ ಒಟ್ಟು 6,317 ಜನರಲ್ಲಿ ಸೋಂಕು ಪತ್ತೆಯಾಗಿದೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 2,33,283ಕ್ಕೆ ಏರಿಕೆಯಾಗಿದೆ.

ಸಾವಿನ ಪ್ರಕರಣಗಳು ಶತಕ ದಾಟಿದ್ದು, 115 ಜನರು ಮೃತಪಟ್ಟಿದ್ದಾರೆ. ಒಟ್ಟಾರೆ ಸಾವಿನ ಸಂಖ್ಯೆ 4,062ಕ್ಕೆ ಹೆಚ್ಚಳವಾಗಿದೆ.

ಇಂದು ಸೋಂಕಿತರ ಸಂಖ್ಯೆಗಿಂತ ಆಸ್ಪತ್ರೆಯಿಂದ ಬಿಡುಗಡೆಯಾದವರು ಹೆಚ್ಚಾಗಿದ್ದಾರೆ. 7,071 ಜನರು ಚೇತರಿಸಿಕೊಂಡಿದ್ದು, ಈವರೆಗೆ ಆಸ್ಪತ್ರೆಯಿಂದ ಬಿಡುಗಡೆಯಾದವರ ಸಂಖ್ಯೆ 1,48,562 ಆಗಿದೆ. ಒಟ್ಟು 695 ಜನರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬೆಂಗಳೂರಿನಲ್ಲಿಯೂ ಸೋಂಕಿತರ ಸಂಖ್ಯೆ ನಿನ್ನೆಗಿಂತ ಕೊಂಚ ಕಡಿಮೆಯಾಗಿದ್ದು, 2,053ಕ್ಕೆ ಇಳಿದಿದೆ. ರಾಜಧಾನಿಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 91,864ಕ್ಕೆ ತಲುಪಿದೆ. ಆಸ್ಪತ್ರೆಯಿಂದ ಬಿಡುಗಡೆಯಾದವರ ಸಂಖ್ಯೆಯಲ್ಲಿ ಗಮನಾರ್ಹ ಏರಿಕೆಯಾಗಿದ್ದು, ಕಳೆದ 24 ಗಂಟೆಗಳಲ್ಲಿ 2,190 ಜನರು ಚೇತರಿಕೆ ಕಂಡಿದ್ದಾರೆ.

ರಾಜಧಾನಿಯಲ್ಲಿನ ಸಕ್ರಿಯ ಪ್ರಕರಣಗಳ ಸಂಖ್ಯೆ 34,583ರಿಂದ 34,408ಕ್ಕೆ ಇಳಿದಿದೆ. ಒಟ್ಟು 39 ಜನರು ಮೃತಪಟ್ಟಿದ್ದು, ಒಟ್ಟಾರೆ ಸಾವಿನ ಸಂಖ್ಯೆ 1,483ಕ್ಕೆ ಏರಿಕೆಯಾಗಿದೆ.

ಜಿಲ್ಲಾವಾರು ಕೋವಿಡ್​ ಅಂಕಿ-ಅಂಶ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net