ನವರಾತ್ರಿ ಉತ್ಸವಕ್ಕೆ ಚಾಲನೆ ಇಂದು

Published on

ಸುಂಟಿಕೊಪ್ಪ: ಕಂಬಿಬಾಣೆಯಲ್ಲಿರುವ ಶ್ರೀರಾಮ ಮತ್ತು ಚಾಮುಂಡೇಶ್ವರಿ ದೇವಸ್ಥಾನದ ವತಿಯಿಂದ 70ನೇ ವರ್ಷದ ನವರಾತ್ರಿ ಉತ್ಸವ ಸೋಮವಾರ (ಅ.22) ಕಂಬಿಬಾಣೆ ಚಾಲನೆಗೊಳ್ಳಲಿದ್ದು ಅ.2ರವರೆಗೆ ವಿಶೇಷ ಪೂಜಾ ಕಾರ್ಯಕ್ರಮಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.

ಸೆ. 22ರಂದು ಪೂರ್ವಾಹ್ನ ಗಣಪತಿ ಹೋಮದೊಂದಿಗೆ ನವರಾತ್ರಿ ಉತ್ಸವಕ್ಕೆ ಚಾಲನೆ ನೀಡಲಾಗುವುದು. ಕಂಬಿಬಾಣೆ ಶ್ರೀರಾಮ ಮತ್ತು ಶ್ರೀ ಚಾಮುಂಡೇಶ್ವರಿ ಮಹಿಳಾ ಭಜನಾ ತಂಡದಿಂದ ಭಜನಾ ಕಾರ್ಯಕ್ರಮ ನಡೆಯಲಿದೆ. ಸೆ.24 ರಂದು ಸಂಜೆ 7 ಗಂಟೆಯಿಂದ ಭೂತನಕಾಡು ಓಂಶಕ್ತಿ ಭಜನಾ ಮಂಡಳಿ ಕಾರ್ಯಕ್ರಮ ನಡೆಯಲಿದೆ. ಸೆ.26 ರಂದು ಸಂಜೆ 7 ಗಂಟೆಗೆ ಕುಶಾಲನಗರ ಭಜನಾ ಮಂಡಳಿ ವತಿಯಿಂದ ಭಜನಾ ಕಾರ್ಯಕ್ರಮ ನಡೆಯಲಿದೆ. ಸೆ.27 ರಂದು ಶನಿವಾರ ಬೆಳಗ್ಗೆ 7.30 ದುರ್ಗಾ ಹೋಮ, ಅ.1 ರಂದು ಆಯುಧ ಪೂಜೆ ಅಂಗವಾಗಿ ಸಾಮೂಹಿಕ ವಾಹನಗಳ ಪೂಜೆ, 2ರಂದು ವಿಜಯದಶಮಿ ಅಂಗವಾಗಿ ರಾತ್ರಿ 8 ಗಂಟೆಯಿಂದ ವಿದ್ಯುತ್ ದೀಪಾಂಲಕೃತ ಭವ್ಯ ಮಂಟಪದಲ್ಲಿ ಗ್ರಾಮದ ಮುಖ್ಯ ಬೀದಿಗಳಲ್ಲಿ ಶ್ರೀ ಚಾಮುಂಡೇಶ್ವರಿ ದೇವಿಯ ಶೋಭಾಯಾತ್ರೆ ನಡೆದ ನಂತರ ಮಹಾಪೂಜೆಯೊಂದಿಗೆ ನವರಾತ್ರಿ ಉತ್ಸವ ಸಂಪನ್ನಗೊಳ್ಳಲಿದೆ.

ನವರಾತ್ರಿ ಕೊನೆಯ ದಿನದಂದು ಅನ್ನ ಸಂತರ್ಪಣೆ ಕಾರ್ಯಕ್ರಮ ಇರುತ್ತದೆ ಎಂದು ಆಡಳಿತ ಮಂಡಳಿ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net