ಆಫ್ಘನ್​ನಿಂದ ಅಮೆರಿಕ ಸೇನೆ ಶೀಘ್ರ ವಾಪಸ್: ಅಮೆರಿಕ ಅಧ್ಯಕ್ಷರ ನಿರ್ಧಾರ

america army
Published on

ವಾಷಿಂಗ್ಟನ್: ಹಿಂಸಾಪೀಡಿತ ಅಫ್ಘಾನಿಸ್ತಾನದಲ್ಲಿ ರುವ ಅಮೆರಿಕ ಸೇನೆ ಮತ್ತು ನ್ಯಾಟೋ ಪಡೆಗಳನ್ನು ಹಿಂಪಡೆಯಲು ಅಧ್ಯಕ್ಷ ಜೋ ಬೈಡೆನ್ ನಿರ್ಧರಿಸಿದ್ದಾರೆ. ಅಮೆರಿಕದ ಅವಳಿ ಗೋಪುರಗಳ ಮೇಲೆ ನಡೆದ ಉಗ್ರ ದಾಳಿಗೆ 20 ವರ್ಷ ತುಂಬುವುದಕ್ಕೂ ಮುನ್ನ (ಸೆಪ್ಟೆಂಬರ್ 11) ಸೇನೆ ವಾಪಸ್ ಆಗಬೇಕು ಎಂಬುದು ಬೈಡೆನ್ ಉದ್ದೇಶವಾಗಿದೆ ಎಂದು ಶ್ವೇತಭವನದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಆಫ್ಘನ್​ನಲ್ಲಿ ಅಮೆರಿಕ ಮತ್ತು ಮಿತ್ರರಾಷ್ಟ್ರಗಳ (ನ್ಯಾಟೋ) ಸೇನೆ 20 ವರ್ಷಗಳಿಂದ ಬೀಡುಬಿಟ್ಟಿದೆ. ಇದನ್ನು ವಾಪಸು ಕರೆಯಿಸಿಕೊಳ್ಳಬೇಕು ಎಂಬ ಒತ್ತಡ ಬೈಡೆನ್ ಮೇಲೆ ಇದೆ. ಹೀಗಾಗಿ ಅವರು

ಈ ಕುರಿತ ಘೋಷಣೆಯನ್ನು ಶೀಘ್ರದಲ್ಲಿ ಪ್ರಕಟಿಸುವ ಸಾಧ್ಯತೆ ಇದೆ ಎಂದು ಶ್ವೇತಭವನದ ವಕ್ತಾರ ಜೆನ್ ಪ್ಸಾಕಿ ತಿಳಿಸಿದ್ದಾರೆ. ಬೈಡೆನ್ ನಿರ್ಧಾರ ಪ್ರಕಟಿಸುವುದಕ್ಕೂ ಮುನ್ನ ವಿದೇಶಾಂಗ ಮತ್ತು ರಕ್ಷಣಾ ಕಾರ್ಯದರ್ಶಿಗಳಾದ ಆಂಟೋನಿ ಬ್ಲಿಂಕೆನ್ ಮತ್ತು ಲಾಯ್್ಡ ಆಸ್ಟಿನ್ ನ್ಯಾಟೋ ಪಡೆಯ ಮುಖ್ಯಸ್ಥ ಜಾನ್ ಸ್ಟೋಲ್ಟೆನ್​ಬರ್ಗ್ ಅವರನ್ನು ಬುಧವಾರ ಭೇಟಿಯಾಗಿದ್ದಾರೆ. ನ್ಯಾಟೋದಲ್ಲಿರುವ 30 ಸದಸ್ಯ ರಾಷ್ಟ್ರಗಳ ವಿದೇಶಾಂಗ ಸಚಿವರು ವಿಡಿಯೋ ಕಾನ್ಪರೆನ್ಸ್ ಮೂಲಕ ಭಾಗಿಯಾಗಿದ್ದರು ಎಂದು ಪಾಕ್ಸಿ ಹೇಳಿದ್ದಾರೆ.

ಏ. 24ಕ್ಕೆ ಇಸ್ತಾಂಬುಲ್​ನಲ್ಲಿ ಆಫ್ಘನ್ ಕುರಿತು ಅಂತಾರಾಷ್ಟ್ರೀಯ ಸಮ್ಮೇಳನವನ್ನು ಅಮೆರಿಕ ಆಯೋಜಿಸಿದೆ. ಅಂತಾರಾಷ್ಟ್ರೀಯ ಪಡೆಗಳು ಸಂಪೂರ್ಣವಾಗಿ ದೇಶದಿಂದ ಕಾಲ್ತೆಗೆದ ಮೇಲೆಯೇ ಇಂಥ ಸಮ್ಮೇಳನದಲ್ಲಿ ಪಾಲ್ಗೊಳ್ಳುವುದಾಗಿ ತಾಲಿಬಾನ್​ಗಳು ಹೇಳಿದ್ದಾರೆ.

ಟ್ರಂಪ್ ಅವಧಿಯ ಒಪ್ಪಂದ: ಅಫ್ಘಾನಿಸ್ತಾನದಿಂದ ನ್ಯಾಟೋ ಪಡೆಗಳನ್ನು ಹಿಂಪಡೆಯಬೇಕು ಎಂಬುದು ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾಗಿದ್ದಾಗಲೇ ನಿರ್ಧಾರ ವಾಗಿದ್ದ ವಿಷಯ. 2018ರಲ್ಲೇ 7 ಸಾವಿರ ಸೈನಿಕರನ್ನು ಅಮೆರಿಕ ವಾಪಸು ಕರೆಯಿಸಿಕೊಂಡಿತ್ತು. ಕಳೆದ ವರ್ಷ ತಾಲಿಬಾನ್ ಜತೆ ನಡೆದ ಶಾಂತಿ ಮಾತುಕತೆ ಸಂದರ್ಭದಲ್ಲಿ 2021ರ ಮೇ 1ರೊಳಗೆ ಸೇನೆ ಸಂಪೂರ್ಣ ವಾಪಸಾತಿಗೆ ಟ್ರಂಪ್ ಒಪ್ಪಿದ್ದರು. ಇದಕ್ಕೆ ಬದಲಾಗಿ ತಾಲಿಬಾನ್​ಗಳು ಅಲ್-ಖೆೈದಾ ಮತ್ತು ಇನ್ನಿತರ ಉಗ್ರರ ಗುಂಪುಗಳ ಸ್ನೇಹ ಬಿಡಬೇಕು ಎಂಬ ಷರತ್ತನ್ನು ಹಾಕಿದ್ದರು. ಈ ಒಪ್ಪಂದಕ್ಕೆ ಸಹಿ ಹಾಕಿದ ನಂತರ ಆಫ್ಘನ್​ನಲ್ಲಿ ನ್ಯಾಟೋ ಪಡೆಗಳ ಮೇಲೆ ದಾಳಿ ನಿಂತಿತ್ತು. ಆದರೆ, ಆಫ್ಘನ್​ನ ಸರ್ಕಾರದಲ್ಲಿ ವಿದೇಶಗಳ ಹಸ್ತಕ್ಷೇಪ ಹೆಚ್ಚಾಗಿದೆ ಎಂದು ಆರೋಪಿಸಿದ ತಾಲಿಬಾನ್​ಗಳು ದಾಳಿಯನ್ನು ಮತ್ತೆ ಆರಂಭಿಸಿದವು. ಸದ್ಯ ಆಫ್ಘನ್​ನಲ್ಲಿ ಅಮೆರಿಕದ 2,500 ಸೈನಿಕರು ಸೇರಿ ನ್ಯಾಟೋ ಮಿತ್ರಪಡೆಗಳ 10,000 ಸೈನಿಕರು ಇದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net