

ಹೈದರಾಬಾದ್: ಬಾಹುಬಲಿ ಸಿನಿಮಾದ ಮೂಲಕ ಜಾಗತಿಕ ಮನ್ನಣೆ ಗಳಿಸಿರುವ ರೆಬೆಲ್ ಸ್ಟಾರ್ ಪ್ರಭಾಸ್(Prabhas) ತಮ್ಮ ಮುಂದಿನ ಸಿನಿಮಾದ ಪ್ರಾಜೆಕ್ಟ್ನಲ್ಲಿ ಬಿಜಿ ಆಗಿದ್ದಾರೆ. ಇದರ ನಡುವೇ ಇತ್ತೀಚಿಗೆ ಅವರು ಅಭಿಮಾನಿಗಳ ಬಳಿ ಕ್ಷಮೆ ಕೇಳಿದ್ದಾರೆ.
ಹೌದು, ನಿರ್ದೇಶಕ ಹನು ರಾಘವಪುಡಿ ಅವರ ಮುಂಬರುವ ಚಿತ್ರದ ಚಿತ್ರೀಕರಣದ ಸಮಯದಲ್ಲಿ ಪ್ರಭಾಸ್ ಪಾದದ ಗಾಯವಾಗಿದೆ ಎಂದು ನಟ ಹಂಚಿಕೊಂಡಿದ್ದಾರೆ. ಈ ಕಾರಣದಿಂದಾಗಿ, ಜಪಾನ್‌ನಲ್ಲಿ ಕಲ್ಕಿ 2898 AD ಯ ಪ್ರಚಾರಗಳಿಗೆ ಹಾಜರಾಗಲು ಸಾಧ್ಯವಾಗುವುದಿಲ್ಲ. ಹೀಗಾಗಿ ಕ್ಷಮೆ ಇರಲಿ ಎಂದು ಕೇಳಿಕೊಂಡಿದ್ದಾರೆ.
ಜಪಾನಿ ಭಾಷೆಯಲ್ಲಿ ಕ್ಷಮೆಯಾಚಿಸುತ್ತಾ, ಪ್ರಭಾಸ್ ಕಲ್ಕಿ 2898 ADನ ಎಕ್ಸ್ ಖಾತೆ ಹ್ಯಾಂಡಲ್ ಮೂಲಕ ಹೃತ್ಪೂರ್ವಕ ಸಂದೇಶವನ್ನು ಪೋಸ್ಟ್ ಮಾಡಿದ್ದು, ''ಜಪಾನ್‌ನಲ್ಲಿರುವ ನನ್ನ ಪ್ರೀತಿಯ ಅಭಿಮಾನಿಗಳಿಗೆ ನಮಸ್ಕಾರ, ನನ್ನ ಗಾಯದಿಂದಾಗಿ ನಾನು ಕಲ್ಕಿ 2898 ADನ ಮೊದಲ ಪ್ರದರ್ಶನಕ್ಕೆ ನಿಮ್ಮೊಂದಿಗೆ ಸೇರಲು ಸಾಧ್ಯವಾಗುವುದಿಲ್ಲ ಎಂದು ನಾನು ವಿಷಾದಿಸುತ್ತೇನೆ. ನೀವು ಚಲನಚಿತ್ರವನ್ನು ಆನಂದಿಸುತ್ತೀರಿ ಎಂದು ನಾನು ಭಾವಿಸುತ್ತೇನೆ ಮತ್ತು ಶೀಘ್ರದಲ್ಲೇ ನಿಮ್ಮನ್ನು ಭೇಟಿ ಮಾಡಲು ನಾನು ಎದುರು ನೋಡುತ್ತಿದ್ದೇನೆ'' ಎಂದು ಬರೆದುಕೊಂಡಿದ್ದಾರೆ.
ಕಲ್ಕಿ 2898 AD
ಕಲ್ಕಿ 2898 ಎಡಿ ಚಿತ್ರವು ಭಾರತದ ಅತ್ಯಂತ ದುಬಾರಿ ಚಿತ್ರವಾಗಿದ್ದು, ಬರೊಬ್ಬರಿ 600 ಕೋಟಿ ಬಜೆಟ್ ನಿರ್ಮಿಸಲಾಗಿದೆ. ಸಿನಿಮಾದಲ್ಲಿ ಪ್ರಭಾಸ್, ಅಮಿತಾಭ್ ಬಚ್ಚನ್, ಕಮಲ್ ಹಾಸನ್ ಮತ್ತು ದೀಪಿಕಾ ಪಡುಕೋಣೆ ಸೇರಿದಂತೆ ತಾರಾಗಣವನ್ನು ಒಳಗೊಂಡಿದೆ. ಈ ಚಿತ್ರವು ಇದೇ ವರ್ಷ ಜೂನ್ 27, 2024 ರಂದು ಬಿಡುಗಡೆಯಾಗಿದೆ ಅಂದಿನಿಂದ ಈಗಾಗಲೇ ಜಾಗತಿಕವಾಗಿ 1,200 ಕೋಟಿ ರೂ.ಗಳನ್ನು ಸಂಗ್ರಹಿಸಿದೆನ ಎಂದು ವರದಿಯಾಗಿದೆ. ಇದೀಗ ಈ ಸಿನಿಮಾವನ್ನು ಜಪಾನ್‌ನ ಅಭಿಮಾನಿಗಳು ಚಿತ್ರದ ಬಿಡುಗಡೆಗಾಗಿ ಕಾತರದಿಂದ ಕಾಯುತ್ತಿದ್ದಾರೆ,(ಏಜೆನ್ಸೀಸ್).