ಸೈಲೆಂನ್ಸರ್ ಆಲ್ಟ್ರೇಷನ್ ವಾಹನಕ್ಕೆ ಆರ್‌ಸಿ ರದ್ದು; ಪೊಲೀಸ್ ಕಮಿಷನರ್ ಬಿ.ದಯಾನಂದ್ ಎಚ್ಚರಿಕೆ

B Dayanand
Published on

ಬೆಂಗಳೂರು: ಸೈಲೆಂನ್ಸರ್ ಆಲ್ಟ್ರೇಷನ್ (ಕರ್ಕಶ ಶಬ್ದ) ಮಾಡುವ ವಾಹನಗಳ ನೋಂದಣಿ ಪ್ರಮಾಣ ಪತ್ರ (ಆರ್‌ಸಿ) ರದ್ದುಪಡಿಸಲು ಕ್ರಮಕೈಗೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ಎಚ್ಚರಿಕೆ ನೀಡಿದ್ದಾರೆ.

ವಿಜಯವಾಣಿ ಮತ್ತು ದಿಗ್ವಿಜಯ ನ್ಯೂಸ್ ಚಾನಲ್ ಏರ್ಪಡಿಸಿದ್ದ ಫೋನ್ ಇನ್ ಕಾರ್ಯಕ್ರಮದಲ್ಲಿ ಸಾರ್ವಜನಿಕರ ದೂರುಗಳನ್ನು ಆಲಿಸಿ ಕೇಳಿದ ಪ್ರಶ್ನೆಗಳಿಗೆ ಉತ್ತರ ನೀಡಿದರು. ನಗರದಲ್ಲಿ ವ್ಹಿಲಿಂಗ್ ಮತ್ತು ಸೈಲೆಂನ್ಸರ್ ಆಲ್ಟ್ರೇಷನ್ ಮಾಡಿಕೊಂಡು ಕರ್ಕಶ ಮಾಡುವ ವಾಹನಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲು ನಿರ್ಧರಿಸಲಾಗಿದೆ. ಭಾರತೀಯ ಮೋಟಾರು ವಾಹನ ಕಾಯ್ದೆಯಲ್ಲಿ ವಾಹನಗಳ ಆರ್‌ಸಿ ಕಾರ್ಡ್ ರದ್ದುಪಡಿಸಲು ಅವಕಾಶವಿದೆ.

ಇದರನ್ನು ಬಳಸಿಕೊಂಡು ವ್ಹಿಲಿಂಗ್ ಮಾಡುವ ಮತ್ತು ಸೈಲೆಂನ್ಸರ್ ಆಲ್ಟ್ರೇಷನ್ ಮಾಡಿಕೊಂಡು ಕರ್ಕಶ ಶಬ್ಧ ಮಾಡುವ ವಾಹನಗಳ ಆರ್‌ಸಿ ಕಾರ್ಡ್ ಜಪ್ತಿ ಮಾಡಿ ಪ್ರಾದೇಶಿಕ ಸಾರಿಗೆ ಇಲಾಖೆಗೆ ದೂರು ಕೊಡಲಾಗುತ್ತದೆ. ಈ ದೂರಿನ ಮೇರೆಗೆ ಸಾರಿಗೆ ಇಲಾಖೆ, ಮೋಟಾರು ವಾಹನ ಕಾಯ್ದೆಯಡಿ ಆರೋಪಿತನ ವಾಹನದ ಆರ್‌ಸಿ ರದ್ದುಪಡಿಸುತ್ತಾರೆ. ಅಂತಹ ವಾಹನಗಳನ್ನು ರಸ್ತೆಗೆ ಇಳಿಸುವುದು ಮತ್ತು ಬಳಸುವುದು ಅಪರಾಧವಾಗಲಿದೆ. ಒಮ್ಮೆ ಆರ್‌ಸಿ ರದ್ಧಾದರೇ ವಾಹನ ಬಳಸಲು ಸಾಧ್ಯವಾಗುವುದಿಲ್ಲ. ಈ ನಿಯಮ ಕಟ್ಟುನಿಟ್ಟಾಗಿ ಜಾರಿಗೆ ತರಲು ಸಾರಿಗೆ ಇಲಾಖೆಗೆ ಪತ್ರ ಬರೆಯಲಾಗಿತ್ತು. ಅದಕ್ಕೆ ಒಪ್ಪಿಕೊಂಡಿದ್ದು, ಮುಂದಿನ ದಿನಗಳಲ್ಲಿ ಅನುಷ್ಠಾನ ಮಾಡಲಾಗುತ್ತದೆ ಎಂದು ಪೊಲೀಸ್ ಕಮಿಷನರ್ ಎಚ್ಚರಿಕೆ ನೀಡಿದರು.

ನಗರದಲ್ಲಿ ಮೊಬೈಲ್ ಕಳ್ಳತನ ಪ್ರಕರಣಗಳು ಹೆಚ್ಚಾಗಿರುವುದು ಗಮನಕ್ಕೆ ಬಂದಿದೆ. ದೂರು ಬಂದ ಕೂಡಲೇ ಸಿಇಐಆರ್ ಪೋರ್ಟಲ್‌ನಲ್ಲಿ ಮೊಬೈಲ್ ಐಎಂಇಐ ನಂಬರ್ ಮತ್ತು ಸಿಮ್ ಕಾರ್ಡ್ ಬ್ಲ್ಯಾಕ್ ಮಾಡಿ ಬಳಸದಂತೆ ನೋಡಿಕೊಳ್ಳಲಾಗುತ್ತಿದೆ. ಸೈಬರ್ ಕ್ರೈಂ ಹೆಚ್ಚಾಗುತ್ತಿರುವ ಕಾರಣಕ್ಕೆ ಸಿವಿಲ್ ಪೊಲೀಸ್ ಠಾಣೆಗಳಲ್ಲೂ ದೂರು ಪಡೆಯುವಂತೆ ಸೂಚನೆ ನೀಡಲಾಗಿದೆ. ಈ ಮೊದಲು ನಗರದ 8 ಸಿಇಎನ್ ಠಾಣೆಗಳಲ್ಲಿ ಮಾತ್ರ ಸೈಬರ್ ಕ್ರೈಂ ಸಂಬಂಧ ದೂರು ಸ್ವೀಕರಿಸಲಾಗುತ್ತಿತ್ತು. ಇದೀಗ ಸಿವಿಲ್ ಠಾಣೆಗಳಲ್ಲೂ ದೂರು ಪಡೆಯುತ್ತಿದ್ದು, ನೊಂದವರಿಗೆ ನ್ಯಾಯ ಒದಗಿಸಿಕೊಡುವ ಕೆಲಸಗಳು ಆಗುತ್ತಿದೆ ಎಂದು ಪೊಲೀಸ್ ಆಯುಕ್ತರು ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net