

RBI: ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಶನಿವಾರ (ಮೇ.17) ತನ್ನ ನೂತನ ಗವರ್ನರ್ ಸಂಜಯ್ ಮಲ್ಹೋತ್ರಾ ಅವರ ಸಹಿಯನ್ನೊಳಗೊಂಡ 20 ರೂ. ಮುಖಬೆಲೆಯ ಹೊಸ ನೋಟುಗಳನ್ನು ಅಧಿಕೃತವಾಗಿ ಬಿಡುಗಡೆಗೊಳಿಸುವುದಾಗಿ ತಿಳಿಸಿದೆ.
ಮಹಾತ್ಮ ಗಾಂಧಿ ಮುಖವಿರುವ ಹೊಸ 20 ರೂ. ಮುಖಬೆಲೆಯ ನೋಟುಗಳನ್ನು ಶೀಘ್ರದಲ್ಲೇ ಬಿಡುಗಡೆ ಮಾಡುವುದಾಗಿ ಹೇಳಿದೆ. ಹೊಸ 20 ರೂ. ನೋಟುಗಳ ವಿನ್ಯಾಸವು ಮಹಾತ್ಮ ಗಾಂಧಿ (ಹೊಸ) ಸರಣಿಯ ಅಡಿಯಲ್ಲಿ ಈಗಾಗಲೇ ಚಲಾವಣೆಯಲ್ಲಿರುವ ನೋಟುಗಳಂತೆಯೇ ಇರಲಿದೆ. ಇದು ಸಾರ್ವಜನಿಕರ ಚಲಾವಣೆ ಮತ್ತು ಬಳಕೆಯ ನಿರಂತರತೆಯನ್ನು ಖಚಿತಪಡಿಸುತ್ತದೆ ಎಂದು ಆರ್‌ಬಿಐ ಸ್ಪಷ್ಟಪಡಿಸಿದೆ.
ಗವರ್ನರ್ ಸಹಿಯನ್ನು ಹೊರತುಪಡಿಸಿ ಹೆಚ್ಚಿನ ವಿನ್ಯಾಸವನ್ನು ಈ ನೋಟುಗಳು ಒಳಗೊಂಡಿಲ್ಲ. ಈ ಹಿಂದೆ ರಿಸರ್ವ್ ಬ್ಯಾಂಕ್ ಬಿಡುಗಡೆಗೊಳಿಸಿದ್ದ 20 ರೂ. ಮುಖಬೆಲೆಯ ಎಲ್ಲಾ ನೋಟುಗಳು ಕಾನೂನುಬದ್ಧವಾಗಿ ಚಲಾವಣೆಯಲ್ಲಿರುತ್ತವೆ ಎಂದು ಆರ್‌ಬಿಐ ಒತ್ತಿ ಹೇಳಿದೆ,(ಏಜೆನ್ಸೀಸ್).