RBI: 'ನಮ್ಮದು ಪೋಲೀಸ್ ಕೆಲಸವಲ್ಲ, ನಿಗಾ ವಹಿಸುವುದಷ್ಟೇ': ಗವರ್ನರ್ ಶಕ್ತಿಕಾಂತ ದಾಸ್ ಅಭಿಮತ

shaktikanta das
Published on

ನವದೆಹಲಿ: ಆರ್‌ಬಿಐ(RBI) ಪೊಲೀಸರಂತೆ ಕೆಲಸ ಮಾಡುವುದಿಲ್ಲ. ಹಣಕಾಸು ಮಾರುಕಟ್ಟೆಯನ್ನು ಮಾತ್ರ ಮೇಲ್ವಿಚಾರಣೆ ಮಾಡುತ್ತದೆ ಮತ್ತು ಅಗತ್ಯವಿದ್ದಾಗ ಕ್ರಮ ತೆಗೆದುಕೊಳ್ಳುತ್ತದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ ದಾಸ್ ತಿಳಿಸಿದರು.

ಅವರು ಬ್ಲೂಮ್‌ಬರ್ಗ್ ಆಯೋಜಿಸಿದ್ದ ಇಂಡಿಯಾ ಕ್ರೆಡಿಟ್ ಫೋರಮ್‌ನಲ್ಲಿ ಭಾಗವಹಿಸಿ, ಇತ್ತೀಚೆಗೆ ಆರ್​ಬಿಐ ದೇಶದ ಮೂರು ಎನ್​ಬಿಎಫ್​ಸಿಗಳು ಮತ್ತು ಸಚಿನ್ ಬನ್ಸಾಲ್ ಅವರ ನವಿ ಫಿನ್‌ಸರ್ವ್ ವಿರುದ್ಧ ಕ್ರಮ ಕೈಗೊಂಡಿದ್ದರ ಕುರಿತು ಪ್ರತಿಕ್ರಿಯಿಸಿ ಆರ್​ಬಿಐ ಸೂಚನೆಗಳ ಪ್ರಕಾರ, ಹಣಕಾಸು ಸಂಸ್ಥೆಗಳು ಅಕ್ಟೋಬರ್ 21, 2024 ರ ನಂತರ ಯಾವುದೇ ಸಾಲವನ್ನು ಅನುಮೋದಿಸಲು ಮತ್ತು ವಿತರಿಸಲು ಸಾಧ್ಯವಾಗುವುದಿಲ್ಲ ಎಂದರು.

ಇನ್ನು ದೇಶದಲ್ಲಿ ಹಣದುಬ್ಬರ ನಿಯಂತ್ರಣದಲ್ಲಿದೆ. ಆದರೆ ಮುಂಬರುವ ದಿನಗಳಲ್ಲಿ ಕಡಿಮೆಯಾಗುವ ನಿರೀಕ್ಷೆಯಿದೆ. ದೇಶದ ಆರ್ಥಿಕ ಅಭಿವೃದ್ಧಿ ಹೀಗೆಯೇ ಮುಂದುವರಿಯುತ್ತದೆ ಎಂದು ಹೇಳಿದರು.

ಅದೇ ರೀತಿ, ಆರ್ಥಿಕ ಬೆಳವಣಿಗೆ ಮತ್ತು ಹಣದುಬ್ಬರವನ್ನು ಕಡಿಮೆ ಮಾಡುವ ವಿಧಾನವನ್ನು ಮೇಲ್ವಿಚಾರಣೆ ಮಾಡುವಲ್ಲಿ ಆರ್​ಬಿಐ ಎಚ್ಚರಿಕೆ ವಹಿಸಿದೆ ಎಂದು ಅವರು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net