ಲೈಂಗಿಕ ದೌರ್ಜನ್ಯ ಪ್ರಕರಣ: ಈ ಗಾಯಕನಿಗೆ 30 ವರ್ಷ ಜೈಲು ಶಿಕ್ಷೆ!

Americasinger
Published on

ನ್ಯೂಯಾರ್ಕ್​: ಲೈಂಗಿಕ ದೌರ್ಜನ್ಯ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಅಮೆರಿಕ ನ್ಯಾಯಾಲಯ ಗಾಯಕನಿಗೆ ಮೂರು ದಶಕಗಳವರೆಗೆ ಜೈಲು ಶಿಕ್ಷೆ ವಿಧಿಸಿದೆ.

ಖ್ಯಾತ ಗಾಯಕ ಆರ್​.ಕೆಲಿ ಅವರ ವಿರುದ್ಧ ಆರೋಪ ಸಾಬೀತಾಗಿದ್ದು, ನ್ಯಾಯಾಲಯ ಬರೋಬ್ಬರಿ 30 ವರ್ಷ ಜೈಲು ಶಿಕ್ಷೆ ವಿಧಿಸಿದೆ.ಮಹಿಳೆ ಮತ್ತು ಅಪ್ರಾಪ್ತ ವಯಸ್ಸಿನ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಕೆಲಿ ಮೇಲಿತ್ತು. ಸದ್ಯ ಪ್ರಕರಣ ವಿಚಾರಣೆ ಮುಗಿಸಿರುವ ನ್ಯಾಯಾಲಯ 30 ವರ್ಷ ಜೈಲು ಶಿಕ್ಷೆ ವಿಧಿಸಿ ಆದೇಶಿಸಿದೆ.

55 ವರ್ಷ ಕೆಲಿ ಸದ್ಯ ಇನ್ನುಮುಂದೆ ಜೈಲಿನಲ್ಲಿ ಕಾಲ ಕಳೆಯಬೇಕಿದೆ. ಕಳೆದ ಸೆಪ್ಟಂಬರ್​ನಲ್ಲಿ ಕೆಲಿ ವಿರುದ್ಧ ದೂರು ದಾಖಲಿಸಲಾಗಿತ್ತು. ಸದ್ಯ ಗರಿಷ್ಠ 17 ವರ್ಷವಾದರೂ ಜೈಲುಶಿಕ್ಷೆ ವಿಧಿಸಬಹುದು, 30 ವರ್ಷ ಅಗತ್ಯವಿಲ್ಲ ಎಂದು ಕೆಲಿ ಪರ ವಕೀಲ ವಾದ ಮಂಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಕೋರ್ಟ್ ಇದೊಂದು ದೊಡ್ಡ ಅಪರಾಧವಾಗಿದ್ದು, ಸಾವರ್ಜನಿಕರ ಮೇಲೆ ಪರಿಣಾಮ ಬೀರಲಿದೆ ಎಂದು ಹೇಳಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net