ಮಲಗಿರುವಾಗಲೇ ಕೊನೆಯುಸಿರೆಳೆದ ಹಾಲಿವುಡ್​ ಖ್ಯಾತ ನಟ! ಸಾವಿಗೆ ಕಾರಣ ಮಾತ್ರ ನಿಗೂಢ

Ray liotta
Published on

ನ್ಯೂಯಾರ್ಕ್​: ಹಾಲಿವುಡ್​ ಖ್ಯಾತ ನಟ ರೇ ಲಿಯೋಟ್ಟಾ ತಮ್ಮ 67ನೇ ವಯಸ್ಸಿಗೆ ವಿಧಿವಶರಾಗಿದ್ದಾರೆ. ಅಮೆರಿಕಾ ಸೇರಿದಂತೆ ವಿಶ್ವದಾದ್ಯಂತ ತಮ್ಮ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.

ಮೂಲಗಳ ಪ್ರಕಾರ ರೇ ಅವರು ಮಲಗಿದ್ದಲ್ಲೇ ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ. ಹಾಲಿವುಡ್​ನ ಜನಪ್ರಿಯ ಸಿನಿಮಾ ಗಾಡ್​ ಫೆಲ್ಲಾಸ್​ ರೇ ಅವರಿಗೆ ಹೆಚ್ಚು ಖ್ಯಾತಿ ತಂದುಕೊಟ್ಟಿತ್ತು.

ಸಿನಿಮಾಗಳಲ್ಲಿ ಮಾತ್ರವಲ್ಲೇ ಟಿವಿ ವಾಹಿನಿಗಳಲ್ಲೂ ಕಾಣಿಸಿಕೊಂಡಿದ್ದ ರೇ ಅವರು ನಿರ್ಮಾಪಕರೂ ಆಗಿದ್ದರು. ಆಪಲ್​ ಟಿವಿ, ಸಿರೀಸ್​, ಬ್ಲಾಕ್​ ಬರ್ಡನ್​ ಟರೋನ್​, ಎಗರ್ಟೆನ್​ನಲ್ಲೂ ನಟಿಸಿದ್ದಾರೆ.

ಈ ವಯಸ್ಸಿನಲ್ಲೂ ಮತ್ತೊಂದು ಮದುವೆಗೆ ಸಿದ್ಧರಾಗಿದ್ದ ರೇ ಅವರು, ಈ ಮೊದಲೇ ಸಾವನ್ನಪ್ಪಿದ್ದಾರೆ. ಇನ್ನು ಡೇಂಜರಸ್​ ವಾಟರ್​ ಚಿತ್ರದ ಚಿತ್ರೀಕರಣದಲ್ಲಿ ಇವರು ವಿದೇಶದಲ್ಲಿದ್ದಾಗಲೇ ಮಲಗಿದ್ದಲ್ಲೇ ಪ್ರಾಣಬಿಟ್ಟಿದ್ದಾರೆ ಎಂದು ತಿಳಿದುಬಂದಿದೆ.

1989ರಲ್ಲಿ ನಟನಾ ವೃತ್ತಿಗೆ ಕಾಲಿಟ್ಟ ರೇ ಲಿಯೋಟ್ಟಾ ಅವರು ಹಿಂತಿರುಗಿ ನೋಡಿದ್ದೇ ಇಲ್ಲ, ಇವರ ಬಹುತೇಕ ಸಿನಿಮಾಗಳು ಹೆಚ್ಚು ಪ್ರಸಿದ್ಧಿ ಪಡೆದಿವೆ. ಇವರ ನಟನೆಗೆ ಹಲವು ಪ್ರಶಸ್ತಿಗಳು ಕೂಡ ಸಂದಿವೆ. (ಏಜೆನ್ಸೀನ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net