

ಜನರಲ್ ಬಿಪಿನ್ ರಾವತ್ ಅವರಿಗೆ ಕೊಡಗಿನ ಬಗ್ಗೆ ವಿಶೇಷವಾದ ಪ್ರೀತಿ ಮತ್ತು ಗೌರವವಿತ್ತು. ಮಡಿಕೇರಿಯಲ್ಲಿರುವ ಜನರಲ್ ಕೆ.ಎಸ್ ತಿಮ್ಮಯ್ಯ ಮ್ಯೂಸಿಯಂಗೆ ಯುದ್ಧವಿಮಾನ ಹಾಗೂ ಯುದ್ಧೋಪಕರಣ ಬರಲು ಕಾರಣಕರ್ತರಾಗಿದ್ದರು.
ಮಡಿಕೇರಿಯಲ್ಲಿರುವ ಜನರಲ್ ಕೆ.ಎಸ್.ತಿಮ್ಮಯ್ಯ ಮ್ಯೂಸಿಯಂ ಉದ್ಘಾಟನೆಗೆ ಇದೇ ವರ್ಷದ ಫೆಬ್ರವರಿ 6ರಂದು ರಾಷ್ಟ್ರಪತಿ ರಾಮನಾಥ ಕೋವಿಂದ ಅವರೊಂದಿಗೆ ಬಿಪಿನ್ ರಾವತ್ ಆಗಮಿಸಿದ್ದರು. 2019ರಲ್ಲಿ ಗೋಣಿಕೊಪ್ಪ ಕಾವೇರಿ ಕಾಲೇಜು ಆವರಣದಲ್ಲಿ ಸ್ಥಾಪಿಸಲಾಗಿರುವ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ-ಜನರಲ್ ಕೆ.ಎಸ್. ತಿಮ್ಮಯ್ಯ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲೂ ಪಾಲ್ಗೊಂಡಿದ್ದರು. 2016ರಲ್ಲಿ ಕೊಡಗಿಗೆ ಪ್ರಥಮ ಭೇಟಿ ನೀಡಿದ್ದರು. ಬಿಟ್ಟಂಗಾಲದಲ್ಲಿ ಆಯೋಜಿಸಿದ್ದ ಗಾಲ್ಪ್ ಟೂರ್ನಮೆಂಟ್ನಲ್ಲಿ ಪಾಲ್ಗೊಂಡಿದ್ದರು.