ಶೂಟಿಂಗ್ ವೇಳೆ ರವಿತೇಜ ಕೈಗೆ ಗಾಯ..ಏನಾಯ್ತು?

ravi
Published on

ಹೈದರಾಬಾದ್​: ಟಾಲಿವುಡ್​ನ ಮಾಸ್ ಮಹಾರಾಜ ರವಿತೇಜ ಕೈಗೆ ಗಾಯವಾಗಿದೆ. ಅವರು ತಮ್ಮ 75 ನೇ ಚಿತ್ರದ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾಗ ಸೆಟ್‌ನಲ್ಲಿ ಅಪಘಾತದಿಂದ ಈ ಗಾಯಗಳು ಉಂಟಾಗಿವೆ ಎಂದು ಹೇಳಲಾಗುತ್ತಿದೆ.

ರವಿತೇಜ ಗಾಯಗೊಂಡ ತಕ್ಷಣ ಹೈದರಾಬಾದ್​ನ ಯಶೋದಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆರು ವಾರಗಳ ಕಾಲ ವಿಶ್ರಾಂತಿ ತೆಗೆದುಕೊಳ್ಳುವಂತೆ ವೈದ್ಯರು ಸೂಚಿಸಿದ್ದಾರೆ. ರವಿತೇಜ ಗಾಯಗೊಂಡಿರುವ ಸುದ್ದಿ ಹೊರಬಿದ್ದಿದ್ದು ಅಭಿಮಾನಿಗಳು ಆತಂಕಕ್ಕೆ ಒಳಗಾಗಿದ್ದರು.

ಸಣ್ಣ ಗಾಯ ಎಂದು ರವಿತೇಜ ಶೂಟಿಂಗ್ ಮುಂದುವರೆಸಿದ್ದು, ಅದು ಈಗ ಶಸ್ತ್ರಚಿಕಿತ್ಸೆಗೆ ಕಾರಣವಾಗಿದೆ. ಶೂಟಿಂಗ್ ಬಳಿಕ ಬಲಗೈಗೆ ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳಬೇಕಾಯಿತು. ಇದೀಗ ಅವರು ಸುರಕ್ಷಿತವಾಗಿದ್ದು ವಿಶ್ರಾಂತಿ ಪಡೆಯುತ್ತಿದ್ದಾರೆ ಎಂದು ಅವರ ಸಮೀಪವರ್ತಿಗಳು ತಿಳಿಸಿದ್ದಾರೆ. ಅಭಿಮಾನಿಗಳು ನೆಮ್ಮದಿಯ ನಿಟ್ಟುಸಿರು ಬಿಡುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net