

ಆಂಧ್ರಪ್ರದೇಶ: ತೆಲುಗು ನಟ ರವಿತೇಜ ಅಭಿನಯದ ಬಹುನಿರೀಕ್ಷಿತ ಸಿನಿಮಾ 'ಮಿ.ಬಚ್ಚನ್' ಇದೇ ಆ.15ರಂದು ತೆರೆಗೆ ಅಪ್ಪಳಿಸಲು ಸಜ್ಜಾದ ಬೆನ್ನಲೇ ಇದೀಗ ಚಿತ್ರದ ಡಿಜಿಟಲ್ ಹುಕ್ಕುಗಳನ್ನು ಪಡೆಯಲು ಈ ಒಟಿಟಿ ಪ್ಲಾಟ್ಫಾರ್ಮ್ ಮುಂದಾಗಿದೆ.
ಮಾಸ್ ಮಹಾರಾಜ ರವಿತೇಜ ಮತ್ತು ನಿರ್ದೇಶಕ ಹರಿಶಂಕರ್ ಕಾಂಬಿನೇಷನ್ನಲ್ಲಿ ಮೂಡಿಬಂದಿರುವ 'ಮಿ.ಬಚ್ಚನ್' ಸಿನಿಮಾ ಚಿತ್ರರಸಿಕರಲ್ಲಿ ಕೂತುಹಲ ಮೂಡಿಸಿದೆ. ಈಗಾಗಲೇ ಮನೋರಂಜನೆ ಹೇಳಿ ಮಾಡಿಸಿದ ಸಿನಿಮಾ ಎಂದೇ ಬಿಂಬಿತವಾಗಿರುವ ಈ ಚಿತ್ರವು ಆಂಧ್ರ, ತೆಲಂಗಾಣ ಸೇರಿದಂತೆ ಇತರೆ ರಾಜ್ಯಗಳಲ್ಲಿ ಭರ್ಜರಿ ಪ್ರಮೋಷನ್ ಮಾಡುತ್ತಿದೆ. ಇಂದು ಸಂಜೆ (ಜು.25) ಸಿನಿಮಾದ ಎರಡನೇ ಪ್ರೋಮೊ ಬಿಡುಗಡೆಗೊಳ್ಳಲಿದ್ದು, ಅಭಿಮಾನಿಗಳ ಕಾತರ ಮತ್ತಷ್ಟು ಹೆಚ್ಚಿದೆ.
ಇನ್ನೂ ರವಿತೇಜ ಅಭಿಮಾನಿಗಳಲ್ಲಿ ತೀವ್ರ ಕೂತುಹಲ ಕೆರಳಿಸಿರುವ 'ಮಿ.ಬಚ್ಚನ್' ಈಗಾಗಲೇ ಒಟಿಟಿಯ ಹಕ್ಕನ್ನು ಪಡೆಯಲು ಮುಂದಾಗಿರುವ ಸುದ್ದಿ ಸದ್ಯ ಸಾಮಾಜಿಕ ಜಾಲಾತಾಣದಲ್ಲಿ ಹರಿದಾಡುತ್ತಿದೆ. ಚಿತ್ರಮಂದಿರದಲ್ಲಿ ರಿಲೀಸ್ ಆದ ಬಳಿಕ ನೆಟ್ಫ್ಲಿಕ್ಸ್ ಪ್ಲಾಟ್ಫಾರ್ಮ್ಗೆ ಮಾರಾಟ ಮಾಡಲು ಸಿನಿತಂಡ ಮುಂದಾಗಿದೆ ಎನ್ನಲಾಗುತ್ತಿದೆ. ಆದರೆ, ಈ ಕುರಿತು ಚಿತ್ರತಂಡ ಇಲ್ಲಿಯವರೆಗೆ ಯಾವುದೇ ಮಾಹಿತಿ ಘೋಷಿಸಿಲ್ಲ.
ಈ ಚಿತ್ರವು ಆ್ಯಕ್ಷನ್, ಡ್ರಾಮಾ ಜಾನರ್ ಆಗಿದ್ದು, ಮುಖ್ಯಭೂಮಿಕೆಯಲ್ಲಿ ರವಿತೇಜ, ಜಗಪತಿಬಾಬು, ಭಾಗ್ಯಶ್ರೀ ಭೋಸ್ ಕಾಣಿಸಿಕೊಂಡಿದ್ದಾರೆ. ಇದೇ ಆಗಸ್ಟ್ 15ರಂದು ತೆರೆಗೆ ಬರಲು ಸಜ್ಜಾಗಿರುವ ಚಿತ್ರಕ್ಕೆ ಟಿ.ಜಿ. ವಿಶ್ವಪ್ರಸಾದ್ ಬಂಡವಾಳ ಹೂಡಿದ್ದಾರೆ,(ಏಜೆನ್ಸೀಸ್).