ರವೀಂದ್ರ ಕೌಶಿಕ್ ಬಯೋಪಿಕ್!; ಭಾರತದ ನಂಬರ್ 1 ಗೂಢಚಾರಿ ಕುರಿತ ಸಿನಿಮಾ

Spy
Published on

ರವೀಂದ್ರ ಕೌಶಿಕ್, ‘ದಿ ಬ್ಲ್ಯಾಕ್​ ಟೈಗರ್’ ಎಂದೇ ಹೆಸರುವಾಸಿಯಾಗಿದ್ದ ಭಾರತದ ಅತ್ಯುತ್ತಮ ಗೂಢಚಾರಿ. ಕೇವಲ 20ನೇ ವಯಸ್ಸಿನಲ್ಲೇ ಗೂಢಚಾರಿಯಾದ ರವೀಂದ್ರ, ಪಾಕಿಸ್ತಾನಕ್ಕೆ ತೆರಳಿ ಹಲವು ವರ್ಷಗಳ ಕಾಲ ಭಾರತದ ಪರ ಕೆಲಸ ಮಾಡಿದರು. 1974ರಿಂದ 1983ರವರೆಗೆ ಪಾಕಿಸ್ತಾನದ ಸೇನೆಯಲ್ಲಿ ಸೇರಿ, ದೊಡ್ಡ ಹುದ್ದೆಗೇರಿ, ಭಾರತದ ವಿರುದ್ಧ ಪಾಕಿಸ್ತಾನ ಹೆಣೆಯುತ್ತಿದ್ದ ಎಲ್ಲ ಮಾಹಿತಿಯನ್ನೂ ಭಾರತಕ್ಕೆ ನೀಡುವ ಮೂಲಕ, ಪಾಕಿಸ್ತಾನಕ್ಕೆ ಹಿನ್ನಡೆಯಾಗುವಂತೆ ಮಾಡಿದ್ದ ಧೈರ್ಯವಂತ.

ಅವರ ಧೈರ್ಯವನ್ನು ಮೆಚ್ಚಿ ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರೇ, ರವೀಂದ್ರ ಕೌಶಿಕ್ ಅವರಿಗೆ ‘ಬ್ಲಾ್ಯಕ್ ಟೈಗರ್’ ಎಂದು ಕರೆದಿದ್ದರಂತೆ. ಈಗ ಅದೇ ಹೆಸರಿನಲ್ಲಿ ಸಿನಿಮಾ ಮಾಡಲು ಮುಂದಾಗಿದ್ದಾರೆ ಬಾಲಿವುಡ್ ನಿರ್ದೇಶಕ ಅನುರಾಗ್ ಬಸು. ಮರ್ಡರ್. ‘ಕೈಟ್ಸ್’, ‘ಬರ್ಫಿ’ ಸೇರಿದಂತೆ ಹಲವು ಚಿತ್ರಗಳನ್ನು ನಿರ್ದೇಶಿಸಿರುವ ಅನುರಾಗ್ ಬಸು, ಇದೇ ಮೊದಲ ಬಾರಿಗೆ ಗೂಢಚಾರಿಯೊಬ್ಬರ ಬಯೋಪಿಕ್​ಗೆ ಆಕ್ಷನ್-ಕಟ್ ಹೇಳಲು ಮುಂದಾಗಿದ್ದಾರೆ.

ಈಗಾಗಲೇ ರವೀಂದ್ರ ಕೌಶಿಕ್ ಅವರ ಕುಟುಂಬದವರನ್ನು ಭೇಟಿಯಾಗಿ ಅವರ ಒಪ್ಪಿಗೆ ಪಡೆಯುವುದರ ಜತೆಗೆ ಸಾಕಷ್ಟು ಮಾಹಿತಿಯನ್ನು ಸಂಗ್ರಹಿಸಿದ್ದಾರಂತೆ ಅನುರಾಗ್ ಬಸು. - ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net