KGF ನಟಿ ಮೇಲೆ ನಡು ರಸ್ತೆಯಲ್ಲಿಯೇ ಹಲ್ಲೆ; ದಾಳಿಯ ಬಗ್ಗೆ ಮೌನ ಮುರಿದ ರವೀನಾ ಟಂಡನ್

Raveena tandon
Published on

ಮುಂಬೈ: ಮುಂಬೈನ ಬಾಂದ್ರಾ ಉಪನಗರದಲ್ಲಿ ಶನಿವಾರ ತಡರಾತ್ರಿ ಬಾಲಿವುಡ್ ನಟಿ ರವೀನಾ ಟಂಡನ್ ಮೂವರ ಮೇಲೆ ದೌರ್ಜನ್ಯ ಎಸಗಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದ್ದು, ಸ್ಥಳೀಯರು ನಟಿಯನ್ನು ಸುತ್ತುವರೆದು ಹಲ್ಲೆ ಮಾಡಿರುವ ವಿಡಿಯೋ ಅಂತರ್ಜಾಲದಲ್ಲಿ ವೈರಲ್ ಆಗಿತ್ತು. ಈ ಕುರಿತಾಗಿ ನಟಿ ಸೋಶಿಯಲ್​ ಮೀಡಿಯಾ ಮೂಲಕವಾಗಿ ಪ್ರತಿಕ್ರೀಯೆ ನೀಡಿದ್ದಾರೆ.

ವೃದ್ಧೆ ಹಾಗೂ ಆಕೆಯ ಕುಟುಂಬದ ಮೇಲೆ ಹಲ್ಲೆ ನಡೆಸಿ ದೌರ್ಜನ್ಯ ಎಸಗಿದ ಆರೋಪ ಹೊತ್ತಿದ್ದ ರವೀನಾ ಟಂಡನ್ ಕೊನೆಗೂ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಕ್ಷಣಾರ್ಧದಲ್ಲಿ ವಿಡಿಯೋ ವೈರಲ್ ಆಗಿದೆ. ನಟಿ ತಮ್ಮ ಪ್ರತಿಕ್ರಿಯೆಯನ್ನು ಇನ್​ಸ್ಟಾಗ್ರಾಮ್​​ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ.

ರಿಜ್ವಿ ಕಾಲೇಜು ಬಳಿಯ ಕಾರ್ಟರ್ ರಸ್ತೆಯಲ್ಲಿ ರವೀನಾ ಅವರ ಕಾರು ಚಾಲಕ ನಿರ್ಲಕ್ಷ್ಯದಿಂದ ವಾಹನ ಚಾಲನೆ ಮಾಡಿ ಮೂವರಿಗೆ ಡಿಕ್ಕಿ ಹೊಡೆದಿದ್ದಾನೆ. ಈ ವೇಳೆ ಜನ ಸೇರಿ ಇದನ್ನು ಪ್ರಶ್ನಿಸಿದಾಗ ಕಾರಿನಲ್ಲಿ ಕುಡಿದ ಮತ್ತಿನಲ್ಲಿದ್ದ ರವೀನಾ ಟಂಡನ್ ಕಾರಿನಿಂದ ಇಳಿದು ಬಂದು ಅಪಘಾತ ಸಂತ್ರಸ್ತರನ್ನು ನಿಂದಿಸಿ ಅವರ ಮೇಲೆಯೇ ಹಲ್ಲೆಗೆ ಮುಂದಾಗಿದ್ದಾರೆ ಎಂದು ವರದಿಯಾಗಿದೆ. ಘಟನೆಯ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ‘ದಯವಿಟ್ಟು ವೀಡಿಯೋ ಮಾಡಬೇಡಿ…ದಯವಿಟ್ಟು ನನಗೆ ಹೊಡೆಯಬೇಡಿ ಎಂದು ನಟಿ ಹೇಳುತ್ತಿರುವುದು ವೀಡಿಯೋದಲ್ಲಿ ರೆಕಾರ್ಡ್ ಆಗಿದೆ.

ಪೊಲೀಸ್ ಅಧಿಕಾರಿಯ ಪ್ರಕಾರ, ಘಟನೆ ಸಂಭವಿಸಿದ  ಘಟನೆ ನಡೆದ ಸುತ್ತಮುತ್ತಲಿನ ಸಿಸಿಟಿವಿ ಫೂಟೇಜ್, ಮಹಿಳೆಯರು ನಟಿ ಕಾರಿಗೆ ಹತ್ತಿರವಾಗಿದ್ದರು ಆದರೆ ಅದರಿಂದ ಯಾವುದೇ ಅಪಘಾತ ಸಂಭವಿಸಿಲ್ಲ. ರವೀನಾ ಮತ್ತು ಆಕೆಯ ಚಾಲಕ ಮೂವರು ಮಹಿಳೆಯರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಸ್ಥಳೀಯರ ಗುಂಪು ಆರೋಪಿಸುತ್ತಿರುವುದನ್ನು ವೀಡಿಯೊ ತೋರಿಸುತ್ತದೆ. ಶನಿವಾರ ರಾತ್ರಿ ಬಾಂದ್ರಾದ ಕಾರ್ಟರ್ ರಸ್ತೆಯಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಯಾವುದೇ ಎಫ್‌ಐಆರ್ ದಾಖಲಾಗಿಲ್ಲವಾದರೂ, ಖಾರ್ ಪೊಲೀಸ್ ಠಾಣೆಯಲ್ಲಿ ಸ್ಟೇಷನ್ ಡೈರಿ ನಮೂದು ಮಾಡಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಘಟನೆಯ ನಂತರ, ಕಾರ್ಟರ್ ರಸ್ತೆಯಲ್ಲಿರುವ ಕಟ್ಟಡದ ಆವರಣದಲ್ಲಿ ಜನರ ಗುಂಪು ರವೀನಾ ಮತ್ತು ಆಕೆಯ ಚಾಲಕನನ್ನು ಎದುರಿಸಿತು. ವಾಗ್ವಾದದ ಹಿನ್ನೆಲೆಯಲ್ಲಿ, ಎರಡೂ ಕಡೆಯವರೂ ಖಾರ್ ಪೊಲೀಸ್ ಠಾಣೆಗೆ ಭೇಟಿ ನೀಡಿದ್ದು, ಪರಸ್ಪರರ ವಿರುದ್ಧ ಲಿಖಿತ ಹೇಳಿಕೆಗಳನ್ನು ಸಲ್ಲಿಸಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.

ರವೀನಾ ಟಂಡನ್  ಘಟನೆ ಕುರಿತಾಗಿ ಇನ್​ಸ್ಟಾಗ್ರಾಮ್​​ ಸ್ಟೋರಿಯಲ್ಲಿ,  ನನ್ನ ಕಾರು ಯಾರಿಗೂ ಡಿಕ್ಕಿಯಾಗಿಲ್ಲ.. ಹಾಗೂ ಯಾವುದೇ ಪ್ರಾಣಹಾನಿ ಕೂಡಾ ಸಂಭವಿಸಿಲ್ಲ...ನಾನು ಮಧ್ಯಪಾನ ಮಾಡಿರಲಿಲ್ಲ ಡ್ರೈವರ್​ ಸಹಾಯಕ್ಕೆ ಹೋಗಿದ್ದೇನು.. ನನ್ನ ಹಾಗೂ ಡ್ರೈವರ್​ ಬಗ್ಗೆ ಹೇಳಿ ಬರುತ್ತಿರುವ ಆರೋಪಗಳು ಸುಳ್ಳು ಎಂದು ರವೀನಾ ಅವರು ಸೋಶಿಯಲ್​​ ಮೀಡಿಯಾದಲ್ಲಿ ಮಾಧ್ಯಮದಲ್ಲಿ ಪ್ರಸಾರವಾದ ಕೆಲವು ಸ್ಟೋರಿಗಳುನ್ನು ಹಂಚಿಕೊಂಡು ರಿಪ್ಲಯ್​  ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net