ಪ್ರವಾಹ ಪೀಡಿತ ಜನರ ನೆರವಿಗೆ ರಾಷ್ಟ್ರೀಯ ಲೋಕದಳ; ಎಲ್ಲ ಶಾಸಕರು, ಸಂಸದರ ಒಂದು ತಿಂಗಳ ಸಂಬಳ ದೇಣಿಗೆ | Flood Relief

Jayant Singh
Published on

Flood Relief: ರಾಷ್ಟ್ರೀಯ ಲೋಕದಳ (ಆರ್‌ಎಲ್‌ಡಿ) ಪಕ್ಷದ ಸಂಸದರು ಮತ್ತು ಶಾಸಕರು ತಮ್ಮ ಒಂದು ತಿಂಗಳ ಸಂಬಳವನ್ನು ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸಂಕಷ್ಟ ಎದುರಿಸುತ್ತಿರುವ ಜನರಿಗೆ ಪರಿಹಾರದ ರೂಪದಲ್ಲಿ ನೀಡುವುದಾಗಿ ಕೇಂದ್ರ ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವ ಜಯಂತ್ ಸಿಂಗ್ ಬುಧವಾರ(ಸೆಪ್ಟೆಂಬರ್​​3) ಘೋಷಿಸಿದ್ದಾರೆ.

ತಮ್ಮ ಎಕ್ಸ್​​ ಖಾತೆಯಲ್ಲಿ ಪೋಸ್ಟ್​ ಹಂಚಿಕೊಂಡಿರುವ ಕೇಂದ್ರ ಸಚಿವ, ಆರ್​ಎಲ್​​ಡಿಯ ನಮ್ಮ ಎಲ್ಲ ಸಂಸದರು ಮತ್ತು ಶಾಸಕರು ಪ್ರವಾಹದ ಪರಿಹಾರಕ್ಕಾಗಿ ಒಂದು ತಿಂಗಳ ಸಂಬಳವನ್ನು ದೇಣಿಗೆ ನೀಡಲು ನಿರ್ಧರಿಸಿದ್ದು, ಇಡೀ ದೇಶವು ಪ್ರವಾಹದಿಂದ ನಲುಗುತ್ತಿರುವ ಸಂತ್ರಸ್ತರಿಗಾಗಿ ಒಟ್ಟಾಗಿ ನಿಲ್ಲತ್ತದೆ ಎಂದು ಬರೆದಿದ್ದಾರೆ.

ಬುಧವಾರ ಬೆಳಿಗ್ಗೆ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ನಿರಂತರ ಮಳೆಯಿಂದಾಗಿ ಹಾನಿಗೀಡಾಗಿರುವ ರಾಜ್ಯಗಳಿಗೆ ವಿಶೇಷ ಪರಿಹಾರ ಪ್ಯಾಕೇಜ್ ಘೋಷಿಸುವಂತೆ ಪ್ರಧಾನಿ ನರೇಂದ್ರ ಮೋದಿಯವರನ್ನು ಒತ್ತಾಯಿಸಿದರು. ಕಾಂಗ್ರೆಸ್​​ ನಾಯಕಿ ಸೋನಿಯಾ ಗಾಂಧಿ ತಮ್ಮ ಎಕ್ಸ್​​ ಖಾತೆಯಲ್ಲಿ ಪೋಸ್ಟ್​​ ಹಂಚಿಕೊಂಡಿದ್ದು, ಇಂತಹ ಸಂಕಷ್ಟದ ಸಮಯದಲ್ಲಿ ಸರ್ಕಾರ ರಾಜ್ಯಗಳಿಗೆ, ಅದರಲ್ಲೂ ವಿಶೇಷವಾಗಿ ರೈತರಿಗೆ ವಿಶೇಷ ಪರಿಹಾರ ಪ್ಯಾಕೇಜ್ ಘೋಷಿಸಬೇಕು ಮತ್ತು ರಕ್ಷಣಾ ಕಾರ್ಯಾಚರಣೆಗಳನ್ನು ತ್ವರಿತಗೊಳಿಸಬೇಕು ಎಂದು ಬರೆದಿದ್ದಾರೆ.

ದೇಶದ ಹಲವಾರು ರಾಜ್ಯಗಳಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ, ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಜಮ್ಮು ಮತ್ತು ಕಾಶ್ಮೀರ, ಲಡಾಖ್, ಹಿಮಾಚಲ ಪ್ರದೇಶ, ಉತ್ತರ ಪಂಜಾಬ್, ಉತ್ತರ ಹರಿಯಾಣ, ಪೂರ್ವ ರಾಜಸ್ಥಾನ, ನೈಋತ್ಯ ಉತ್ತರ ಪ್ರದೇಶ, ವಾಯುವ್ಯ ಮತ್ತು ಪೂರ್ವ ಮಧ್ಯಪ್ರದೇಶ ಮತ್ತು ಒಡಿಶಾದ ಅನೇಕ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಿದೆ.(ಏಜೆನ್ಸೀಸ್​​)

heavy to very heavy rainfall over Jammu & Kashmir, heavy rainfall over Chhattisgarh and moderate rainfall over Haryana, Uttarakhand, Delhi, Uttar Pradesh, Madhya Pradesh, Bihar, West Bengal, coastal Odisha, coastal Maharashtra, coastal Karnataka and Andaman Islands.

@ndmaindia… pic.twitter.com/xQYiXbO1Hk

— India Meteorological Department (@Indiametdept) September 3, 2025

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net