

ಮುಂಬೈ: ಬಾಲಿವುಡ್ ನಟ ಹೃತಿಕ್ ರೋಷನ್ ಅವರ ಬಹುನಿರೀಕ್ಷಿತ ಚಿತ್ರ 'ಕ್ರಿಶ್ 4' ನಲ್ಲಿ ನಾಯಕಿ ಪಾತ್ರಕ್ಕೆ ರಶ್ಮಿಕಾ ಮಂದಣ್ಣ ( Rashmika Mandanna) ಮುಂಚೂಣಿಯಲ್ಲಿದ್ದಾರೆ. ರಶ್ಮಿಕಾ ಹೃತಿಕ್ ರೋಷನ್ ಅವರ ಜೋಡಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಸುದ್ದಿ ಇದೆ. ಆದರೆ ಈ ಕುರಿತಾಗಿ ಚಿತ್ರ ತಂಡ ಅಧಿಕೃತ ಘೋಷಣೆ ಮಾಡಿಲ್ಲ.
ರಶ್ಮಿಕಾ ಪ್ರಸ್ತುತ ಅನಿಮಲ್ , ಅಲ್ಲು ಅರ್ಜುನ್-ದೀಪಿಕಾ ಅವರ AA22XA6, ಮತ್ತು ಪುಷ್ಪ 3 ರಶ್ಮಿಕಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದೀಗ ಕ್ರಿಶ್ 4 ಗೆ ಸಹಿ ಹಾಕಿದರೆ ಎನ್ನಲಾಗುತ್ತಿದೆ.
ಕ್ರಿಶ್ 4 ಸೂಪರ್‌ಹಿಟ್ ವೈಜ್ಞಾನಿಕ ಕಾಲ್ಪನಿಕ ಸೂಪರ್‌ಹೀರೋ ಆಕ್ಷನ್ ಥ್ರಿಲ್ಲರ್ ಸಿನಿಮಾದ ನಾಲ್ಕನೇ ಕಂತು. ಮೊದಲ ಮೂರು ಭಾಗಗಳಾದ - ಕೋಯಿ ಮಿಲ್ ಗಯಾ, ಕ್ರಿಶ್ ಮತ್ತು ಕ್ರಿಶ್ 3 ಅನ್ನು ಹೃತಿಕ್ ಅವರ ತಂದೆ ರಾಕೇಶ್ ರೋಷನ್ ನಿರ್ದೇಶಿಸಿದ್ದರೆ, ಶೀಘ್ರದಲ್ಲೇ ಚಿತ್ರಿಕರಣ ಪ್ರಾರಂಭವಾಗಲಿರುವ ನಾಲ್ಕನೇ ಭಾಗವನ್ನು ಹೃತಿಕ್ ರೋಷನ್ ಸ್ವತಃ ನಿರ್ದೇಶಿಸಲಿದ್ದಾರೆ. ಕ್ರಿಶ್ 4 ಹೃತಿಕ್ ಅವರ ನಿರ್ದೇಶನದ ಚೊಚ್ಚಲ ಚಿತ್ರವಾಗಿದೆ. ಈ ಯೋಜನೆಯು ಈ ವರ್ಷದ ಕೊನೆಯಲ್ಲಿ ಚಿತ್ರೀಕರಣಕ್ಕೆ ಬರಲಿದೆ.
'ಗುಡ್‌ಬೈ' ಮತ್ತು 'ಮಿಷನ್ ಮಜ್ನು' ಚಿತ್ರಗಳ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ ಕನ್ನಡದ ಯುವ ನಟಿ ರಶ್ಮಿಕಾ ಮಂದಣ್ಣ, 'ಪುಷ್ಪ' ಫ್ರಾಂಚೈಸ್‌ನ ಹ್ಯಾಟ್ರಿಕ್ ಬ್ಲಾಕ್‌ಬಸ್ಟರ್ 'ಅನಿಮಲ್' ಮತ್ತು 'ಛಾವಾ' ಚಿತ್ರಗಳ ಮೂಲಕ 'ನ್ಯಾಷನಲ್ ಕ್ರಶ್' ಆದರು. ಸಲ್ಮಾನ್ ಖಾನ್ ಅವರ 'ಸಿಕಂದರ್' ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಸೋತರೂ, ರಶ್ಮಿಕಾ ಅವರ ಜನಪ್ರಿಯತೆ ಕಡಿಮೆಯಾಗಲಿಲ್ಲ. ಈ ಪ್ರತಿಭಾನ್ವಿತ ಸುಂದರಿ ಪ್ರಸ್ತುತ 'ಥಮಾ' ಮತ್ತು 'ಕಾಕ್‌ಟೈಲ್ 2' ಚಿತ್ರಗಳಲ್ಲಿ ಕೆಲಸ ಮಾಡುತ್ತಿದ್ದಾರೆ.