

ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ, ಸದಾ ಒಂದೊಲ್ಲೊಂದು ವಿಚಾರಕ್ಕೆ ಟ್ರೋಲ್ ಆಗುತ್ತಾರೆ. ಇವರ ಬ್ಯೂಟಿ, ಗ್ಲಾಮರ್‌ಗೆ ಅನೇಕರು ಫಿದಾ ಆಗಿದ್ದಾರೆ. ನಟನೆಯ ಮೂಲಕ ದೇಶಾದ್ಯಂತ ಛಾಪು ಮೂಡಿಸಿದ್ದಾರೆ. ರಶ್ಮಿಕಾ ಮಂದಣ್ಣ ಮುದ್ದಾದ ನೋಟ ತುಂಬಾ ಆಕರ್ಷಕವಾಗಿದೆ.
ರಶ್ಮಿಕಾ ಮಂದಣ್ಣ ಸೋಷಿಯಲ್ ಮೀಡಿಯಾದಲ್ಲಿ ಬಹಳ ಜನಪ್ರಿಯರಾಗಿದ್ದಾರೆ, ಇದೀಗ ರಶ್ಮಿಕಾ ತಮ್ಮ ನೋ ಮೇಕಪ್ ಫೋಟೋ ಒಂದನ್ನ ಹಂಚಿಕೊಂಡಿದ್ದಾರೆ.
ರಶ್ಮಿಕಾ ವಿತ್ ಔಟ್ ಮೇಕಪ್‌ನಲ್ಲಿರೋ ನಯಾ ಫೋಟೋವನ್ನ ಹಂಚಿಕೊಂಡಿದ್ದಾರೆ. ಫೋಟೋ ನೋಡಿ ನ್ಯಾಚುರಲ್ ಬ್ಯೂಟಿ ಎಂದು ಕಾಮೆಂಟ್ ಮಾಡಿದ್ದಾರೆ. ಮೇಕಪ್ ಇಲ್ಲದೇ ಇನ್ನೂ ಚೆಂದ ಕಾಣಿಸುತ್ತಿದ್ದೀರಾ ಎಂದು ನಟಿಯನ್ನ ಫ್ಯಾನ್ಸ್ ಹಾಡಿ ಹೊಗಳಿದ್ದಾರೆ.
ಶ್ರೀಲೀಲಾ ಎಂಟ್ರಿಯಿಂದ ರಶ್ಮಿಕಾ ಮಂದಣ್ಣ ವರ್ಚಸ್ಸು ಕೊಂಚ ಡಲ್ ಆಗಿದೆ ಎಂಬ ಮಾತು ಟಾಲಿವುಡ್ ಗಲ್ಲಿಯಲ್ಲಿ ಕೇಳಿ ಬರುತ್ತಿದೆ. ರಶ್ಮಿಕಾ ಆಫರ್ಸ್ ಎಲ್ಲಾ ಶ್ರೀಲೀಲಾ ಬಾಚಿಕೊಳ್ತಿದ್ದರು. ಯಾವುದಕ್ಕೂ ತಲೆ ಕೆಡಿಸಿಕೊಳ್ಳದೇ ಸೌತ್- ಬಾಲಿವುಡ್‌ನಲ್ಲಿ ನಟಿ ಮಿಂಚ್ತಿದ್ದಾರೆ.
ನೆಚ್ಚಿನ ನಟಿಯನ್ನ ತೆರೆಯ ಮೇಲೆ ನೋಡಲು ಫ್ಯಾನ್ಸ್ ಕಾತುರದಿಂದ ಕಾಯುತ್ತಿದ್ದು, ಪುಷ್ಪ 2, ಅನಿಮಲ್ ಸಿನಿಮಾಗಾಗಿ ಅಭಿಮಾನಿಗಳು ಎದುರು ನೋಡ್ತಿದ್ದಾರೆ.