ಇದೇ ಕಾರಣಕ್ಕೆ ಸಂದರ್ಶನಕ್ಕೆ ಹೋಗಲು ಭಯ! ವಿವಾದಕ್ಕೆ ಗುರಿಯಾದ ಹೇಳಿಕೆಗೆ ನಟಿ ರಶ್ಮಿಕಾ ಪ್ರತಿಕ್ರಿಯೆ | Rashmika Mandanna

ಇದೇ ಕಾರಣಕ್ಕೆ ಸಂದರ್ಶನಕ್ಕೆ ಹೋಗಲು ಭಯ! ವಿವಾದಕ್ಕೆ ಗುರಿಯಾದ ಹೇಳಿಕೆಗೆ ನಟಿ ರಶ್ಮಿಕಾ ಪ್ರತಿಕ್ರಿಯೆ | Rashmika Mandanna
Published on

Rashmika Mandanna: ಕೊಡಗಿನ ಬೆಡಗಿ, ‘ಕಿರಿಕ್ ಪಾರ್ಟಿ’ ಹುಡುಗಿ ನಟಿ ರಶ್ಮಿಕಾ ಮಂದಣ್ಣ ಸದ್ಯ ಹಲವು ಸಿನಿಮಾಗಳ ಚಿತ್ರೀಕರಣದಲ್ಲಿ ಸಖತ್ ಬಿಜಿಯಾಗಿದ್ದಾರೆ. ಸ್ಟಾರ್​ ನಟರ ಸಾಲು ಸಾಲು ಸಿನಿಮಾಗಳಿಗೆ ನಾಯಕಿಯಾಗಿ ಮಿಂಚುತ್ತಿರುವ ರಶ್ಮಿಕಾ, ಅ.03ರಂದು ತಮ್ಮ ಬಹುದಿನಗಳ ಸ್ನೇಹಿತ ಟಾಲಿವುಡ್​ ನಟ ವಿಜಯ್ ದೇವರಕೊಂಡ ಜತೆ ಸದ್ದಿಲ್ಲದೇ ಎಂಗೇಜ್​ಮೆಂಟ್​ ಮಾಡಿಕೊಂಡರು. ಇತ್ತೀಚೆಗೆ, ನಟಿ ನೀಡಿದ್ದ ಹೇಳಿಕೆಯೊಂದು ವಿವಾದಕ್ಕೆ ಕಾರಣವಾಯಿತು. ಈ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ರಶ್ಮಿಕಾ, ಟ್ರೋಲ್​ಗಳ ವಿರುದ್ಧ ಬೇಸರ ಹೊರಹಾಕಿದ್ದಾರೆ.

'ದಿ ಗರ್ಲ್‌ಫ್ರೆಂಡ್' ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದೇ ಆದರೂ, ರಶ್ಮಿಕಾ ಮಂದಣ್ಣ ಅವರನ್ನು ಸೋಷಿಯಲ್ ಮೀಡಿಯಾದಲ್ಲಿ ಮತ್ತೊಮ್ಮೆ ಹಿಗ್ಗಾಮುಗ್ಗಾ ಟ್ರೋಲ್ ಮಾಡಲಾಗುತ್ತಿದೆ. ಅದಕ್ಕೆ ಕಾರಣ, ಇತ್ತೀಚೆಗೆ ಅವರು ಪುರುಷರ ಬಗ್ಗೆ ಮಾಡಿದ ಕಾಮೆಂಟ್‌ಗಳು. ಸಂದರ್ಶನವೊಂದರಲ್ಲಿ ನಟಿ, "ಮಹಿಳೆಯರಿಗೆ ಉಂಟಾಗುವ ಋತುಚಕ್ರದ ನೋವು ಹೇಗಿರುತ್ತದೆ ಎಂದು ಗೊತ್ತಾಗಬೇಕಾದ್ರೆ, ಪುರುಷರಿಗೂ ಒಮ್ಮೆ ಋತುಚಕ್ರ ಸಂಭವಿಸಬೇಕು ಎಂದಿದ್ದರು. ರಶ್ಮಿಕಾ ಹೇಳಿಕೆಗಳು ವೈರಲ್ ಆಗ್ತಿದ್ದಂತೆ, ನೆಟ್ಟಿಗರು ಭಾರೀ ಅಸಮಾಧಾನ ವ್ಯಕ್ತಪಡಿಸಿದರು.

ರಶ್ಮಿಕಾ ಹೇಳಿಕೆಗೆ ಫ್ಯಾನ್​ ಸಾಥ್​

ನಟಿಯ ಹೇಳಿಕೆಗೆ ವ್ಯಕ್ತವಾದ ವ್ಯಾಪಕ ಟೀಕೆ, ವ್ಯಂಗ್ಯಗಳ ನಡುವೆ ಅಭಿಮಾನಿಯೊಬ್ಬರು ರಶ್ಮಿಕಾ ಪರ ಬ್ಯಾಟ್​ ಬೀಸಿದ್ದಾರೆ. ಸೌತ್ ಬ್ಯೂಟಿ ಹೇಳಿಕೆಯ ವಿಡಿಯೋ ತುಣುಕನ್ನು ಟ್ವಿಟರ್​ನಲ್ಲಿ ಹಂಚಿಕೊಂಡಿರುವ ಮಹಿಳೆ, “ಪುರುಷರಿಗೆ ಋತುಚಕ್ರದ ಬಗ್ಗೆ ರಶ್ಮಿಕಾ ಅವರ ದೃಷ್ಟಿಕೋನ:)) ಕೆಲವೊಮ್ಮೆ ನಾವು ನಮ್ಮ ನೋವು ಮತ್ತು ಭಾವನೆಗಳನ್ನು ಅರ್ಥಮಾಡಿಕೊಳ್ಳಬೇಕೆಂದಷ್ಟೇ ಬಯಸುತ್ತೇವೆ. ಇದು ಎಂದಿಗೂ ಪುರುಷ ಜವಾಬ್ದಾರಿಗಳನ್ನು ಹೋಲಿಸುವ ಅಥವಾ ಕೆಳಗಿಟ್ಟು ಮಾತನಾಡುವ ಬಗ್ಗೆ ಅಲ್ಲ. ಆದರೆ, ಕೆಲವರು ತಮಗೆ ತಕ್ಕಂತೆ ತಿರುಚಿ ಹೇಳ್ಳುತ್ತಾರೆ ಎಂದಿದ್ದಾರೆ.

ಅಭಿಮಾನಿಯ ಟ್ವೀಟ್​ಗೆ ಪ್ರತಿಕ್ರಿಯಿಸಿದ ರಶ್ಮಿಕಾ, "ಇದೇ ಕಾರಣಕ್ಕಾಗಿಯೇ ನಾನು ಹೆಚ್ಚಾಗಿ ಸಂದರ್ಶನಗಳಿಗೆ ಹೋಗುವುದಿಲ್ಲ. ನನ್ನನ್ನು ಏನಾದರೂ ಪ್ರಶ್ನಿಸುತ್ತಾರೆ. ಅಲ್ಲಿಂದ ಬರುವ ಉತ್ತರವನ್ನು ತಪ್ಪಾಗಿ ಅರ್ಥೈಸಿಕೊಳ್ಳುತ್ತಾರೆ. ಮತ್ತೆ, ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡುತ್ತಾರೆ. ಅಸಲಿಗೆ, ನಾನು ಹೇಳಿದ್ದಿಷ್ಟೆ. ಪುರುಷರು ತಮ್ಮ ಋತುಚಕ್ರವನ್ನು ವಿಭಿನ್ನವಾಗಿ ಪಡೆಯಬೇಕು ಅಂತ. ಆದರೆ, ಇದನ್ನು ಬೇರೆ ರೀತಿಯೇ ಅರ್ಥೈಸಿಕೊಳ್ಳಲಾಗಿದೆ. ನನ್ನ ಹೇಳಿಕೆಯನ್ನು ತಪ್ಪಾಗಿ ಹರಡಲಾಗಿದೆ. ಇದನ್ನೆಲ್ಲ ನೋಡಿದ ಬಳಿಕ ನನಗೆ ಸಂದರ್ಶನಗಳಿಗೆ ಹೋಗಲು ಭಯವಾಗ್ತಿದೆ" ಎಂದು ರಶ್ಮಿಕಾ ಹೇಳಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net