Vijay–Rashmika: ಮದುವೆ ಬಗ್ಗೆ ಕೊನೆಗೂ ಕ್ಲಾರಿಟಿ ಕೊಟ್ಟ Rashmika Mandanna!

rashmika
Published on

ಹೈದ್ರಾಬಾದ್​: (Rashmika Mandanna) ಟಾಲಿವುಡ್​​ ನಟ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಪ್ರೀತಿಸುತ್ತಿದ್ದಾರೆ ಮತ್ತು ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವರದಿಗಳು ಬಂದಿವೆ. ಇತ್ತೀಚೆಗಷ್ಟೇ ವಿಜಯ್ ಮತ್ತು ರಶ್ಮಿಕಾ ಔಟಿಂಗ್ ಗೆ ಹೋಗಿದ್ದು ಗೊತ್ತೇ ಇದೆ. ವಿಜಯ್ ಮತ್ತು ರಶ್ಮಿಕಾ ರೆಸ್ಟೋರೆಂಟ್‌ನಲ್ಲಿ ಊಟ ಮಾಡುತ್ತಿರುವ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಕೆಲವು ದಿನಗಳ ಹಿಂದೆ ವಿಜಯ್ ನಾನು ಪ್ರೀತಿಸುತ್ತಿದ್ದೇನೆ ಆದ್ರೆ ಆರು ಎನ್ನುವು ಮಾತ್ರ ಹೇಳಿರಲಿಲ್ಲ. ಈ ಸುದ್ದಿಗಳ ಬೆನ್ನಲ್ಲೇ ರಶ್ಮಿಕಾ ಕೂಡಾ ಪ್ರೀತಿ, ಮದುವೆ ಕುರಿತಾಗಿ ಮಾತನಾಡಿದ್ದಾರೆ.

ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಸದ್ಯ ಪುಷ್ಪ 2 ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಚಿತ್ರ ಡಿಸೆಂಬರ್ 5 ರಂದು ತೆರೆಗೆ ಬರಲಿದೆ.  ಈ ನಡುವೆ ರಶ್ಮಿಕಾ ಅವರ ಲವ್ ಮತ್ತು ಡೇಟಿಂಗ್ ಬಗ್ಗೆ ನಾನಾ ರೀತಿಯ ಸುದ್ದಿಗಳು ಬರುತ್ತಲೇ ಇವೆ. ರಶ್ಮಿಕಾ ಮಂದಣ್ಣ ಮತ್ತು ವಿಜಯ ದೇವರಕೊಂಡ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಹಲವು ವರದಿಗಳು ಬಂದಿದ್ದವು. ಈ ಬಗ್ಗೆ ಇಬ್ಬರೂ ಪ್ರತಿಕ್ರಿಯಿಸಲೇ ಇಲ್ಲ. ಇತ್ತೀಚೆಗಷ್ಟೇ ವಿಜಯ್ ಮತ್ತು ರಶ್ಮಿಕಾ ಹೋಟೆಲ್ ಒಂದರಲ್ಲಿ ಒಟ್ಟಿಗೆ ತಿಂಡಿ ತಿನ್ನುತ್ತಿರುವ ಫೋಟೋಗಳು ವೈರಲ್ ಆಗಿವೆ. ಸದ್ಯದಲ್ಲೇ ಮದುವೆಯಾಗಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಇದೇ ವೇಳೆ ರಶ್ಮಿಕಾ ಮಂದಣ್ಣ ಮದುವೆ ಬಗ್ಗೆ ಮಾತನಾಡಿದ್ದಾರೆ.

ಭಾನುವಾರ (ನವೆಂಬರ್ 24) ರಾತ್ರಿ ಚೆನ್ನೈನಲ್ಲಿ ಪುಷ್ಪ 2 ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತು. ಈ ವೇಳೆ  ವೇದಿಕೆಯಲ್ಲಿ ನಿರೂಪಕಿ ರಶ್ಮಿಕಾ ಮಂದಣ್ಣ ಅವರಿಗೆ ಮದುವೆ ಬಗ್ಗೆ ಕೇಳಿದ್ದಾರೆ. ಈ ಬಗ್ಗೆ ರಶ್ಮಿಕಾ ಸ್ಪಷ್ಟನೆ ನೀಡಿದ್ದಾರೆ. ಚಿತ್ರರಂಗದ ವ್ಯಕ್ತಿ ಮದುವೆಯಾಗ್ತಾರಾ? ಅಥವಾ ನೀವು ಹೊರಗಿನವರನ್ನು ಮದುವೆಯಾಗುತ್ತೀರಾ? ನೀವು ಸ್ಪಷ್ಟನೆ ನೀಡಿದರೆ ನಾವು ಹುಡುಗನನ್ನು ಹುಡುಕುತ್ತೇವೆ' ಎಂದು  ಹೇಳಿದರು.

ಅದು ಎಲ್ಲರಿಗೂ ಗೊತ್ತು ಎಂದು ರಶ್ಮಿಕಾ ಉತ್ತರಿಸಿದರು. ಇದನ್ನು ಕೇಳಿ ಎಲ್ಲರೂ ಒಮ್ಮೆಲೆ ಕಿರುಚಿದರು. 'ನಿಮಗೆ ಏನು ಉತ್ತರಿಸಬೇಕೆಂದು ನನಗೆ ತಿಳಿದಿದೆ. ನನಗೆ ಚೆನ್ನಾಗಿ ಗೊತ್ತು' ಎಂದರು ರಶ್ಮಿಕಾ. ವಿಜಯ್ ಮತ್ತು ರಶ್ಮಿಕಾ ಗೀತ ಗೋವಿಂದಂ ಮತ್ತು ಡಿಯರ್ ಕಾಮ್ರೇಡ್ ಚಿತ್ರಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ. ಈ ಜೋಡಿಗೆ ಸಾಕಷ್ಟು ಅಭಿಮಾನಿಗಳೂ ಇದ್ದಾರೆ.

ಇತ್ತೀಚೆಗೆ ಸಂದರ್ಶನವೊಂದರಲ್ಲಿ ವಿಜಯ್ ನಾನು ಸಿಂಗಲ್ ಅಲ್ಲ, ನನಗೆ 35 ವರ್ಷ. ನಾನು ಒಬ್ಬಂಟಿಯಾಗಿರುತ್ತೇನೆ ಎಂದು ನೀವು ಭಾವಿಸುತ್ತೀರಾ? ತಾನು ಡೇಟ್‌ಗೆ ಹೋಗುವುದಿಲ್ಲ, ದೀರ್ಘಾವಧಿಯ ಗೆಳೆತನ ಹೊಂದಿರುವವರ ಜೊತೆ ಮಾತ್ರ ಹೊರಗೆ ಹೋಗುತ್ತೇನೆ ಎಂದು ಹೇಳುವ ಮೂಲಕವಾಗಿ ಸಂಬಂಧದಲ್ಲಿದ್ದೇನೆಂದು ಒಪ್ಪಿಕೊಂಡರು ಮತ್ತು ಅವರ ಸಹ-ನಟರೊಬ್ಬರೊಂದಿಗೆ ಡೇಟಿಂಗ್ ಮಾಡುತ್ತಿರುವುದಾಗಿ ಹೇಳಿದ್ದಾರೆ.

ವಿಜಯ್ ಮತ್ತು ರಶ್ಮಿಕಾ ನಿಜವಾಗಿಯೂ ಪ್ರೀತಿಸುತ್ತಿದ್ದಾರೆಯೇ? ಅವರು ಡೇಟಿಂಗ್ ಮಾಡುತ್ತಿದ್ದಾರೆಯೇ ಎಂದು ತಿಳಿಯಲು, ಅವರಲ್ಲಿ ಒಬ್ಬರು ಅದನ್ನು ಅಧಿಕೃತವಾಗಿ ಹೇಳಬೇಕು. ಅಲ್ಲಿಯವರೆಗೆ ಈ ವದಂತಿಗಳು ತಪ್ಪಿದ್ದಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net